Advertisement

ಲಾಭದ ದಾರಿ ಹಿಡಿದ ಖಾಸಗಿ ವಾಹನಗಳು

05:53 PM Apr 11, 2021 | Team Udayavani |

ಹುಬ್ಬಳ್ಳಿ: ಖಾಸಗಿ ವಾಹನಗಳ ಮೂಲಕ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎನ್ನುವ ಗುಂಗಿನಲ್ಲಿ ಸರಕಾರವಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಗ್ರಾಮೀಣ ಸಾರಿಗೆ,ನಗರ ಸಾರಿಗೆ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಓಡಿಸಬೇಕು ಎನ್ನುವ ಆರ್‌ ಟಿಒ ಅಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

Advertisement

ಖಾಸಗಿ ವಾಹನಗಳಿಗೆ ಯಾವುದೇ ನಿರ್ಬಂಧ ಹೇರದೆ ಬೇಕಾದ ಮಾರ್ಗಗಳಲ್ಲಿ ಸಂಚಾರ ಮಾಡುವುದಕ್ಕಸರಕಾರ ಅನುಮತಿ ನೀಡಿದೆ. ಲಾಭದಾಯಕ ಮಾರ್ಗಗಳಲ್ಲಿ  ಮಾತ್ರ ಖಾಸಗಿ ವಾಹನಗಳ ಸಂಚಾರ ಸೀಮಿತವಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಾರಿಗೆಸೇವೆ ಇಲ್ಲದಂತಾಗಿದೆ. ಹೊರ ರಾಜ್ಯ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ.

ಗ್ರಾಮೀಣ ಸಾರಿಗೆ ಸ್ಥಗಿತ: ಹುಬ್ಬಳ್ಳಿ ವಿಭಾಗದಿಂದ ಗ್ರಾಮೀಣ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಸ್‌, ಟೆಂಪೊ, ಟಂಟಂವಾಹನಗಳು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದವು. ಇದೀಗ ಪರಿಸ್ಥಿತಿ ಬದಲಾಗಿದ್ದು, ಚಾಕಲಬ್ಬಿ, ದ್ಯಾವನೂರು,ಯರಗುಪ್ಪಿ, ಯರೇಬೂದಿಹಾಳ, ಕೊಂಕಣ ಕುರಹಟ್ಟಿ, ತಡಸ ಭಾಗದ ಮುಕ್ಕಲ, ತಬಕದ ಹೊನ್ನಳ್ಳಿ, ಕುಂಕೂರು, ಯಲಿವಾಳ, ಕರಡಿಕೊಪ್ಪ, ಕಲಘಟಗಿ ಭಾಗದ ಮಿಶ್ರಿಕೋಟಿ, ಕಾಮಧೇನು,ಹಿರೇಹೊನ್ನಳ್ಳಿ, ಬೇಗೂರು, ನವಲಗುಂದ ಭಾಗದತಿರ್ಲಾಪುರ, ಬ್ಯಾಲಾಳ, ಬಳ್ಳೂರು, ಮೊರಬ, ಇಬ್ರಾಹಿಂಪುರ,ಅಣ್ಣಿಗೇರಿಯ ಮಜ್ಜಿಗುಡ್ಡ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಟ್ನೂರು,ಅಂತೂರ-ಬೆಂತೂರು, ನಲವಡೆ ಭಾಗದ ಕೋಳಿವಾಡ,ಮಣಕವಾಡ ಸೇರಿದಂತೆ ಗ್ರಾಮೀಣ ಭಾಗದ ಸಾರಿಗೆ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.

ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಗ್ರಾಮಸ್ಥರು ಬೈಕ್‌,ಬಾಡಿಗೆ ವಾಹನಗಳ ಮೊರೆ ಹೋಗಿದ್ದಾರೆ. ಸಾರಿಗೆ ಸಂಸ್ಥೆಬಸ್‌ಗಳನ್ನು ನಂಬಿಕೊಂಡು ತಿಂಗಳ ಪಾಸ್‌ ಪಡೆದವರು ಕಷ್ಟ ಅನುಭವಿಸುವಂತಾಗಿದೆ.

ದಿನದಿಂದ ದಿನಕ್ಕೆ ವಾಹನಗಳ ಹೆಚ್ಚಳ :

Advertisement

ಸುಮಾರು 2100 ಖಾಸಗಿ ವಾಹನಗಳು ಲಾಭದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಬೆಳಗಾವಿ, ಗದಗ,ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಕಲಘಟಗಿ, ನರಗುಂದ, ವಿಜಯಪುರ, ಕುಂದಗೋಳ, ಶಿಗ್ಗಾವಿ,ನವಲಗುಂದ, ಹಾನಗಲ್ಲ, ಕಾರವಾರ, ಮುಂಡಗೋಡ ಮಾರ್ಗಗಳಲ್ಲಿ ಮಾತ್ರ ಸಂಚಾರ ಮಾಡುತ್ತಿವೆ. ಆರ್‌ಟಿಒ,ಸಂಚಾರ ಪೊಲೀಸರ ಯಾವುದೇ ನಿರ್ಬಂಧ ಇಲ್ಲದಿರುವಕಾರಣ ದಿನದಿಂದ ದಿನಕ್ಕೆ ಹಳೇ ಬಸ್‌ ನಿಲ್ದಾಣದಲ್ಲಿ ಖಾಸಗಿವಾಹನಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಕೆಲ ಸಾರಿಗೆ ಬಸ್‌ಗಳು ಓಡಾಡಿದರೂ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ.

ನಿಲ್ದಾಣಗಳಲ್ಲಿ ಪ್ರಯಾಣಿಕರ ಕೊರತೆ :  ನಾಲ್ಕು ದಿನಗಳಿಂದ ನಗರದ ಮೂರು ಬಸ್‌ ನಿಲ್ದಾಣಗಳಲ್ಲಿಪ್ರಯಾಣಿಕರು ಇಲ್ಲದಂತಾಗಿದೆ. ನಿತ್ಯ ಹಳೇ ಬಸ್‌ನಿಲ್ದಾಣದಿಂದ 80,000 ಪ್ರಯಾಣಿಕರು ಹಾಗೂ 1650ಅನುಸೂಚಿಗಳು, ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ25,000 ಪ್ರಯಾಣಿಕರು 1000 ಸಾವಿರ ಅನುಸೂಚಿಗಳು,ಹೊಸೂರು ಬಸ್‌ ನಿಲ್ದಾಣದಿಂದ 30,000 ಪ್ರಯಾಣಿಕರುಹಾಗೂ 640 ಅನುಸೂಚಿಗಳು ಕಾರ್ಯಾಚರಣೆಗೊಳ್ಳುತ್ತಿವೆ.ಹಳೇ ಬಸ್‌ ನಿಲ್ದಾಣದಿಂದ ಮಾತ್ರ ಖಾಸಗಿ ಹಾಗೂ ಒಂದಿಷ್ಟುಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರ ಸಂಖ್ಯೆ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

ಆಟೋ ರಿಕ್ಷಾಗಳದ್ದೇ ದರ್ಬಾರು :

ನಗರ ಸಾರಿಗೆ ಸೇವೆ ಸ್ಥಗಿತಗೊಂಡಿರುವ ಪರಿಣಾಮಆಟೋ ರಿಕ್ಷಾಗಳದ್ದೇ ದರ್ಬಾರು ಆಗಿದೆ. ಅವರು ಹೇಳಿದದರ ಪಾವತಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೋರ್ಟ್‌ ವೃತ್ತ-ಗೋಪನಕೊಪ್ಪಕ್ಕೆ ಒಬ್ಬರಿಗೆ 10-15 ರೂ.ಇದ್ದದ್ದು ಈಗ 25-30 ರೂ. ಕೇಳುತ್ತಿದ್ದಾರೆ. ಇದರಂತೆಬಹುತೇಕ ಕಡೆಗಳಲ್ಲಿ ದರ ದುಪ್ಪಟ್ಟಾಗಿದೆ. ಆಟೋ ರಿಕ್ಷಾಗಳಿಗೆ ಹೋಗಬೇಕು ಇಲ್ಲವೇ ನಡೆದುಕೊಂಡು ಹೋಗುವಂತಾಗಿದೆ.

ಎಲ್ಲಾ ಮಾರ್ಗಗಳಲ್ಲಿ ಖಾಸಗಿವಾಹನಗಳು ಸಂಚಾರ ಮಾಡಬೇಕು.ಯಾವುದೇ ಕಾರಣಕ್ಕೂ ನಿಗದಿಪಡಿಸಿದದರಕ್ಕಿಂತ ಹೆಚ್ಚಿಗೆ ಪಡೆಯಬಾರದು ಎಂದುಸೂಚಿಸಲಾಗಿದೆ. ದೂರುಗಳ ಬಂದ ತಕ್ಷಣಸೂಚನೆ ನೀಡುವ ಕೆಲಸ ಮಾಡಲಾಗುತ್ತಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. -ಅಪ್ಪಯ್ಯ ನಾಲತ್ವಾಡಮಠ,

ಪ್ರಾದೇಶಿಕ ಸಾರಿಗೆ ಅಧಿಕಾರಿ

ಆಕಸ್ಮಿಕವಾಗಿ ಸ್ವೀಕರಿಸಿದ್ದ ರಾಜ್ಯ ಪ್ರಶಸ್ತಿಯನ್ನು ಅಧಿಕಾರಿಗಳಿಗೆ ಮರಳಿಸಲು ಗ್ರಾಮದಿಂದ 300 ರೂ. ಕೊಟ್ಟು ಬಾಡಿಗೆ ವಾಹನ ತಂದಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಾರಿಗೆಸೌಲಭ್ಯ ನಿಂತು ಹೋಗಿದೆ. ಅವರಿವರ ಬೈಕ್‌ ಆಶ್ರಯಿಸಬೇಕು. ಇಲ್ಲವೇ ಬಾಡಿಗೆ ವಾಹನಮಾಡಿಕೊಂಡು ಹೋಗಬೇಕು. ಬಸವರಾಜ ಯರಗೊಪ್ಪ, ಗುಡೇನಕಟ್ಟಿ ನಿವಾಸಿ

ಸಾವಿರಾರು ಖಾಸಗಿ ವಾಹನಗಳನ್ನು ಬಿಟ್ಟಿದ್ದೇವೆ ಎಂದು ಸರಕಾರ ಸುಳ್ಳುಹೇಳುತ್ತಿದೆ. ಬಸ್‌ ನಿಂತಾಗಿನಿಂದ ನಮ್ಮೂರುಜನ ಪ್ಯಾಟಿ ಮರೆತಿದ್ದಾರೆ. ಗ್ರಾಮೀಣ ಭಾಗಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ನಿಂತಿದೆ.ಸರಕಾರ ಆದಷ್ಟು ಬೇಗ ಪ್ರತಿಭಟನೆ ಮುಗಿಸುವಕೆಲಸ ಮಾಡಬೇಕು. ಬಸವರಾಜ ಜಾಲಿಹಾಳ, ಗ್ರಾಪಂ ಮಾಜಿ ಸದಸ್ಯ, ಮೊರಬ

 

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next