Advertisement

ಖಾಸಗಿ ದೂರವಾಣಿ ಪೈಪ್‌ಲೈನ್‌ ಅವಾಂತರ: ಆತಂಕದ ನಡುವೆ ವಾಹನ ಸಂಚಾರ

11:21 PM Jul 17, 2019 | Team Udayavani |

ಹೆಬ್ರಿ: ಹೆಬ್ರಿ ಸುತ್ತಮುತ್ತಲಿನ ಪ್ರದೇಶದ ಪ್ರಮುಖ ರಸ್ತೆಗಳ ಬದಿಯಲ್ಲಿ ಇತ್ತೀಚೆಗೆ ಖಾಸಗಿ ಕಂಪೆನಿಯವರು ರಸ್ತೆಗೆ ತಾಗಿಕೊಂಡಂತೆ ಪೈಪ್‌ಲೈನ್‌ಗಳ ಅಳವಡಿಕೆಗಾಗಿ ಹೊಂಡಗಳನ್ನು ತೆಗೆದಿದ್ದು ಮಳೆಗಾಲವಾದ್ದರಿಂದ ಆ ಜಾಗದಲ್ಲಿ ಮಣ್ಣು ಕುಸಿತಗೊಂಡು ವಾಹನಗಳು ಹೂತುಹೋಗುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.

Advertisement

ಮಳೆಗಾಲದಲ್ಲಿ ಯಾಕೆ?

ಬೇಸಗೆ ಸಂದರ್ಭದಲ್ಲಿ ಇಂತಹ ಕಾಮಗಾರಿ ನಡೆದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಮಳೆಗಾಲದಲ್ಲಿ ಪ್ರತೀ ವರ್ಷ ಪೈಪ್‌ಲೈನ್‌ ಅಳವಡಿಸುವ ಕಾರ್ಯವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಮಳೆಗಾಲದಲ್ಲಿ ಯಾಕೆ ಅನುಮತಿ ನೀಡುತ್ತಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎಂಬುದು ಸ್ಥಳೀಯರ ಪ್ರಶ್ನೆ.

ಗಮನ ಹರಿಸದ ಪಿಡಬ್ಲ್ಯುಡಿ

ಪಿಡಬ್ಲ್ಯುಡಿ ಅವರು ರಸ್ತೆಯ ಬದಿಯಲ್ಲಿ ಹೊಂಡಗಳನ್ನು ಮಾಡಲು ಅವಕಾಶವನ್ನು ಕಲ್ಪಿಸಿ ಅದರತ್ತ ಮುಖ ಮಾಡದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಅನುಮತಿ ನೀಡುವ ಸಂದರ್ಭ ಎಷ್ಟು ಅಂತರದಲ್ಲಿ ಅಗೆಯಬೇಕು ಎನ್ನುವ ನಿಬಂಧನೆಗಳನ್ನು ಅವರಿಗೆ ವಿವರಿಸಿ ಹೇಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಸ್ಥಳೀಯ ಆಡಳಿತ ನಿರ್ಲಕ್ಷ್ಯ

ರಸ್ತೆ ಬದಿಯಲ್ಲಿ ಹೊಂಡ ತೋಡಿ ಪೈಪ್‌ಲೈನ್‌ ಮಾಡುವಾಗ ಸ್ಥಳೀಯಾಡಳಿತ ಈ ಬಗ್ಗೆ ಗಮನಹರಿಸಿ ಮುಂದಾಗುವ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತರಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಕಾಮಗಾರಿ ನಡೆಸಲು ಆಕ್ಷೇಪ ಸಲ್ಲಿಸಿದರೆ ಈ ಸಮಸ್ಯೆಗಳು ಆಗುತ್ತಿರಲಿಲ್ಲ. ಸ್ಥಳೀಯಾಡಳಿದ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ.
– ಮಿಥುನ್‌ ಶೆಟ್ಟಿ ಚಾರ, ಸಾಮಾಜಿಕ ಕಾರ್ಯಕರ್ತರು

ಪಿಡಬ್ಲ್ಯುಡಿ ನೇರ ಹೊಣೆ

ಕಾಮಗಾರಿ ನಡೆಸುವಾಗ ಸರಿಯಾದ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಪಿಡಬ್ಲ್ಯುಡಿ ನೇರ ಹೊಣೆ. ವಿಷಯ ಗಮನಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ದ್ದೇವೆ. ಈಗ ಕಲ್ಲುಗಳನ್ನು ಹಾಕಿ ಆ ಸ್ಥಳವನ್ನು ಸರಿಮಾಡಲಾಗಿದೆ.
– ಎಚ್.ಕೆ. ಸುಧಾಕರ್‌, ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ
Advertisement

Udayavani is now on Telegram. Click here to join our channel and stay updated with the latest news.

Next