ಶಾಲೆಗಳ ಆಡಳಿತ ಮಂಡಳಿಯವರು “ಅನುದಾನಕ್ಕಾಗಿ ಭಿಕ್ಷಾಟನೆ’ ಘೋಷವ್ಯಾಕದೊಂದಿಗೆ ಮಂಗಳವಾರ ನಗರದಲ್ಲಿ ವಿನೂತನ ರೀತಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
Advertisement
ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಳ ಒಕ್ಕೂಟ ಮತ್ತು ರುಪ್ಸಾ ನೇತೃತ್ವದಲ್ಲಿ ಈ ಭಾಗದ ಏಳು ಜಿಲ್ಲೆಗಳ ನೂರಾರು ಖಾಸಗಿ ಶಾಲೆಗಳಆಡಳಿತ ಮಂಡಳಿಗಳ ಮುಖ್ಯಸ್ಥರು, ಶಿಕ್ಷಕರು ಬೆಳಗ್ಗೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾವಣೆಯಾಗಿ ಮಾನವ ಸರಪಳಿ ನಿರ್ಮಿಸಿ
ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಯೇ ಕೆಲ ಹೊತ್ತು ಭಿಕ್ಷಾಟನೆ ಮಾಡಿದರು.
ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಕ್ಕೂ ಹಲವು ಪುರುಷರು ತಟ್ಟೆ ಹಿಡಿದುಕೊಂಡು ಅದನ್ನು ಬಡಿಯುತ್ತಾ ಭಿಕ್ಷೆ ಎತ್ತಿದರು. ಮತ್ತೂಂದೆಡೆ ಮಹಿಳೆಯರು ಸೆರಗೊಡ್ಡಿ ಭಿಕ್ಷೆ ಬೇಡುತ್ತಾ ಸಾಗಿದರು. ಮತ್ತೆ ಕಲವರು ರಸ್ತೆಯಲ್ಲಿ ಉರುಳು ಸೇವೆ ಮಾಡಿದರು. ಇದಲ್ಲದೇ, ಭಿತ್ತಿ ಘೋಷಣಾ ಪತ್ರ ಹಿಡಿದು ತಮ್ಮ ಖಾಸಗಿ ಶಾಲೆಗಳ ದಾರುಣ ಪರಿಸ್ಥಿತಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು. ನಂತರ ಕೆಕೆಆರ್‌ಡಿಬಿ ಕಚೇರಿಗೆ ತಲುಪಿ ಅಲ್ಲಿಯೂ ಮುಖ್ಯರಸ್ತೆಯಲ್ಲಿ ಕುಳಿತುಕೊಂಡು ಮಂಡಳಿಗೆ ಬರುವ ವಿಶೇಷ ಅನುದಾನದಲ್ಲಿ ಖಾಸಗಿ ಶಾಲೆಗಳಿಗೆ ಎಂದು
ಭಿಕ್ಷೆ ನೀಡಿ ಎಂದು ಘೋಷಣೆಗಳನ್ನು ಮೊಳಗಿಸಿದರು. ಜತೆ-ಜತೆಗೆ ಅಲ್ಲಿಯೂ ತಟ್ಟೆ ಹಿಡಿದು ಅನುದಾನದ ಭಿಕ್ಷೆ ಕೊಡಿ ಎಂದು ಬೇಡಿದರು. ಕೆಲವರು ತಟ್ಟೆಗೆ ಚಿಲ್ಲರೆ ಹಣ ಹಾಕಿ ಅಣುಕ ಮಾಡಿ, ಆಕ್ರೋಶ ಹೊರಹಾಕಿದರು.
Related Articles
ಸಾಧಿಸಲು ಆಗಿಲ್ಲ. ಮೇಲಾಗಿ ಸಾಕಷ್ಟು ಅನುದಾನ ಬಳಕೆಯಾಗದೇ ಉಳಿಯುತ್ತಿದೆ. ಆದ್ದರಿಂದ ನಿಜವಾಗಿ ಈ ಭಾಗದ ಹಿಂದುಳಿದ ಹಣೆ ಪಟ್ಟಿ ಹೋಗಲಾಡಿಸಲು
ಶೈಕ್ಷಣಿಕ, ಔದ್ಯೋಗಿಕ ಪ್ರಗತಿ ಸಾಧಿಸಬೇಕು. ಇದಕ್ಕೆ ಸರ್ಕಾರಿ ಶಾಲೆಗಳೊಂದಿಗೆ ಖಾಸಗಿ ಶಾಲೆಗಳ ಪಾತ್ರವೂ ಪ್ರಮುಖವಾಗಿದೆ. ಮಂಡಳಿಯಲ್ಲಿ ಉಳಿಯುವ
ಅನುದಾನವನ್ನು ಖಾಸಗಿ ಶಾಲೆಗಳಿಗೆ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
Advertisement
ಪ್ರತಿ ವರ್ಷ ಮಂಡಳಿಗೆ ಬಂದ ಹಣದಲ್ಲೇ ಉಳಿಯುವ ಅನುದಾನದಲ್ಲಿ ಖಾಸಗಿ ಶಾಲೆಗಳಿಗೆ ಪಾಲು ನೀಡಬೇಕು. ಇದರಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳಿಗೆ ಆರ್ಥಿಕ ಬಲ ತುಂಬಿದಂತೆ ಆಗುತ್ತದೆ. ಜತೆಗೆ 1995ರಿಂದ 2015ರವರೆಗೆ ನೋಂದಣಿಯಾದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳಿಗೆ ಈಡೇರಿಸುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಫೆ.15ರವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಸ್ಪಂದಿಸದಿದ್ದರೆ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚುವ ಮೂಲಕ ಹೋರಾಟ ನಡೆಸಲುಹಿಂಜರಿಯೋದಿಲ್ಲ. ಇದು ಸರ್ಕಾರಕ್ಕೆ ನೀಡುವ ಎಚ್ಚರಿಕೆ ಅಲ್ಲ. ಖಾಸಗಿ ಶಾಲೆಗಳ ಗಂಭೀರತೆ ಅರ್ಥ ಮಾಡಿಸುವ ಹೋರಾಟವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ನಂತರ ಸ್ಥಳಕ್ಕೆ ಬಂದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಮನವಿ ಸಲ್ಲಿಸಿ, ಅನುದಾನ ಕಲ್ಪಿಸಲು ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗವುದು ಭರವಸೆ ನೀಡಿದರು. ಪ್ರತಿಭಟನೆಗೆ ತಡೋಳಾ ರಾಜೇಶ್ವರ ಶಿವಾಚಾರ್ಯರು, ಗೊಬ್ಬರವಾಡಿಯ ಬಳಿರಾಮ ಮಹಾರಾಜರು, ಅಲಿಬಾಬು ಮಾಪಸಾ ದರ್ಗಾ ಕಪನೂರ, ಪ್ರಣವಾನಂದ ಶಿವಾಚಾರ್ಯರು ಮುಚಳಂಬ, ಮಾದನ ಹಿಪ್ಪರಗಾ ಶ್ರೀಗಳು ಬೆಂಬಲ ಸೂಚಿಸಿ, ಹೋರಾಟದಲ್ಲಿ ಪಾಲ್ಗೊಂಡಿದ್ದರು. ರುಪ್ಸಾ ಅಧ್ಯಕ್ಷ ಲೋಕೇಶ ತಾಳಿಕಟ್ಟೆ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನೀಲ ಹುಡಗಿ
ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ರಾಮಮನೋಹನ ಬಳ್ಳಾರಿ, ವಿಜಯ ರಾಠೊಡ ಯಾದಗಿರಿ, ಬಸವರಾಜ ಭರಶೆಟ್ಟಿ ಬೀದರ, ಬಸವರಾಜ ರಾಯಚೂರು, ರಾಜಾ ಶ್ರೀನಿವಾಸ ರಾಯಚೂರು, ಜಗನ್ನಾಥ ಅಲಂಪಳ್ಳಿ ಕೊಪ್ಪಳ, ಬಸವರಾಜ ಹುಳಿಮಜ್ಜಿಗೆ ವಿಜಯನಗರ ಹಾಗೂ ಪ್ರಮುಖರಾದ ಅರುಣಕುಮಾರ ಪೋಚಾಲ, ಚನ್ನಬಸಪ್ಪ ಗಾರಂಪಳ್ಳಿ. ಶಾಹೀದ್ ಹುಸೇನ್ ತಹಸೀಲ್ದಾರ್, ಚಂದ್ರಕಾಂತ ಭಂಡಾರೆ, ಸಾಹೇಬಗೌಡ ಪುರದಾಳ, ಶಿವಕುಮಾರ ಫಾವರಿಯಾ, ಭೀಮಶೆಟ್ಟಿ ಮುರುಡಾ, ಬಾಬುರಾವ ಸುಳ್ಳದ ಮತ್ತಿತರರು ಭಾಗವಹಿಸಿದ್ದರು. ಸರ್ಕಾರ ಖಾಸಗಿ ಶಾಲೆಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅನುದಾನ ನೀಡಬೇಕು. ಶಿಕ್ಷಕರನ್ನು ಭಿಕ್ಷೆ ಬೇಡಲು ಹಚ್ಚಿದರೆ ಸದೃಢ ನಾಡು ಕಟ್ಟಲು ಆಗಲ್ಲ. ಗುಣಮಟ್ಟದ ಶಿಕ್ಷಣ ಸಿಕ್ಕು ದೇಶ ಉದ್ದಾರವಾಗಬೇಕಾದರೆ, ಸರ್ಕಾರ ಖಾಸಗಿ ಶಾಲೆಗಳಿಗೂ ಅನುದಾನ ನೀಡಬೇಕು.
ರಾಜೇಶ್ವರ ಶಿವಾಚಾರ್ಯ ಶ್ರೀ
ತಡೋಳಾ ಮಠ