Advertisement

ಕಲ್ಲೂರು ಬಳಿ ಖಾಸಗಿ ಶಾಲಾ ವಾಹನ ಪಲ್ಟಿ

06:00 AM Nov 28, 2018 | Team Udayavani |

ಗದಗ/ಮುಳಗುಂದ: ಸ್ಟೇರಿಂಗ್‌ ತುಂಡಾದ ಪರಿಣಾಮ ಖಾಸಗಿ ಶಾಲಾ ವಾಹನವೊಂದು ಪಲ್ಟಿಯಾದ ಘಟನೆ ಸಮೀಪದ ಕಲ್ಲೂರ
ಗ್ರಾಮದ ಹೊರವಲಯದಲ್ಲಿ ಜರುಗಿದೆ. ತಾಲೂಕಿನ ಹೊಸಳ್ಳಿ ಬೂದೀಶ್ವರ ವಿದ್ಯಾ ಪೀಠಕ್ಕೆ ಸೇರಿದ ಬಸ್‌ ಇದಾಗಿದ್ದು, ಎಂದಿನಂತೆ
ಕಲ್ಲೂರು, ಚಿಂಚಲಿ, ಅಂತೂರ-ಬೆಂತೂರ ಗ್ರಾಮಗಳಿಂದ ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆತರಲಾಗುತ್ತಿತ್ತು. ಕಲ್ಲೂರ ಗ್ರಾಮದಿಂದ
ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಹೊರಟ ಸಂದರ್ಭದಲ್ಲಿ ಸ್ಟೇರಿಂಗ್‌ ಕಟ್‌ ಆಗಿದ್ದರಿಂದ ಎಚ್ಚೆತ್ತುಕೊಂಡ ಚಾಲಕ ಮುಂಜಾಗ್ರತಾ
ಕ್ರಮವಾಗಿ ಬಸ್‌ನ ವೇಗವನ್ನು ನಿಯಂತ್ರಣಕ್ಕೆ ತಂದಿದ್ದಾನೆ. ಬಳಿಕ ಬಸ್‌ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಒರಗಿದೆ. ಬಸ್‌ನಲ್ಲಿ 13 ಜನ
ವಿದ್ಯಾರ್ಥಿಗಳು ಇದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

Advertisement

ಬೆದರಿದ್ದ ಚಿಣ್ಣರು: ಘಟನೆಯಿಂದ ಮಕ್ಕಳು ಬೆದರಿದ್ದರು. ಚಿಣ್ಣರ ಚೀರಾಟ, ರೋದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಧಾವಿಸಿದ ಸುತ್ತಲಿನ
ಜಮೀನುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಮಕ್ಕಳನ್ನು ಕೆಳಗಿಳಿಸಿ ಸಮಾಧಾನ ಪಡಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.

ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 9-10 ಖಾಸಗಿ ಶಾಲಾ ಬಸ್‌ಗಳಿವೆ. ನ.28ರಂದು ಆಯಾ ಶಾಲೆಗಳಿಗೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಶಾಲಾ ಮುಖ್ಯಸ್ಥರನ್ನು ಎಚ್ಚರಿಸುವುದರೊಂದಿಗೆ ಸಾರಿಗೆ ಅಧಿಕಾರಿಗಳು ವಾಹನಕ್ಕೆ ನೀಡಿರುವ ಫಿಟ್ನೆಸ್‌
ಸರ್ಟಿಫಿಕೇಟ್‌ (ಎಫ್‌ಸಿ), ಚಾಲಕನ ಚಾಲನಾ ಪ್ರಮಾಣ ಪತ್ರದ ಪ್ರತಿ ಸಂಗ್ರಹಿಸುತ್ತೇವೆ. 

● ಎಂ.ಎ.ರಡ್ಡಿ, ಗದಗ ಗ್ರಾಮೀಣ ವಲಯ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next