Advertisement
ಅನುದಾನ ರಹಿತ ಶಾಲೆಗಳು ಡಿ.31ರೊಳಗೆ ಶೈಕ್ಷಣಿಕ ವರ್ಷದ ನಿಗದಿತ ಶುಲ್ಕಗಳ ಸಂಪೂರ್ಣ ವಿವರಗಳನ್ನು ಇಲಾಖೆಗೆ ಒದಗಿಸಿವೆ. ಆದರೆ ಶಾಲೆಗೆ ಮಕ್ಕಳು ದಾಖಲೆಯಾಗುತ್ತಿರುವ ಈ ವೇಳೆಯಲ್ಲಿ ನೋಟಿಸ್ ಬೋರ್ಡ್ ಅಥವಾ ವೆಬ್‌ಸೈಟ್‌ಗಳಲ್ಲಿ ಶುಲ್ಕದ ವಿವಿರಗಳನ್ನು ಪ್ರಕಟಿಸಬೇಕೆಂಬ ಸರ್ಕಾರ ಆದೇಶಕ್ಕೆ ಮನ್ನಣೆ ನೀಡದೇ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಪ್ರಸಕ್ತ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದು, ಪಾಲಕರಿಂದ ಮನಸೋ ಇಚ್ಛೆ ಹಣ ವಸೂಲಿಗೆ ಇಳಿದಿವೆ.
Related Articles
Advertisement
ಪಾರದರ್ಶಕತೆ ಇಲ್ಲ: ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಮೇಲೆ ನಿಗಾ ವಹಿಸಲು ಮತ್ತು ಶಾಲಾ ಪ್ರವೇಶಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕೆಂಬ ಉದ್ದೇಶದಿಂದ ಪ್ರವೇಶಾತಿ ಶುಲ್ಕ ನಿಗದಿ ಮಾಡಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒದಗಿಸುವುದು ಮತ್ತು ನಿಗದಿ ಪಡಿಸಿರುವ ಶುಲ್ಕದ ವಿವರಗಳನ್ನು ಶಾಲೆಗಳ ವೆಬ್‌ಸೈಟ್, ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟಿಸುವಂತೆ ನಿಯಾಮಾವಳಿ ಜಾರಿಯಲ್ಲಿದೆ, ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಶುಲಕ ನಿಗದಿ ದಾಖಲೆಯನ್ನು ಇಲಾಖೆಗೆ ನೀಡಿರುವುದು ಬಿಟ್ಟರೆ ಶಾಲೆಗಳಲ್ಲಿ ಶುಲ್ಕದ ವಿವಿರಗಳ ಸಂಪೂರ್ಣ ಮಾಹಿತಿ ಯನ್ನು ನೋಟಿಸ್ ಬೋರ್ಡ್‌ಗಳಿಗೆ ಹಾಕದೇ ಇರುವು ದರಿಂದ ಪಾರದರ್ಶಕ ಪ್ರಕ್ರಿಯೆಗೆ ತೊಡಕನ್ನು ಉಂಟು ಮಾಡುತ್ತಿದೆ.
ಪೋಷಕರು ಪ್ರಶ್ನಿಸುತ್ತಿಲ್ಲ: ಮಕ್ಕಳ ಶಾಲೆಗೆ ದಾಖಲಿ ಸಲು ಆಗಮಿಸುವ ಪೋಷಕರಿಗೆ ನಿಯಮಾನು ಸಾರ ಮಾಡಿದ ಶುಲ್ಕದ ಸ್ವರೂಪ, ಬೋಧನಾ ಸಂಪನ್ಮೂಲ ಸೇರಿದಂತೆ ಇತರೆ ವಿವಗಳನ್ನು ಮನದಟ್ಟು ಮಾಡ ಬೇಕು. ಆದರೆ ತಮ್ಮ ಮಕ್ಕಳ ಭವಿಷ್ಯದ ಮುಂದೆ ಉಳಿದೆಲ್ಲವನ್ನು ನಗಣ್ಯವೆಂದು ಕೆಲ ಪೋಷಕರು ಕೂಡಾ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಶುಲ್ಕ ನಿಗದಿಗೆ ಸಂಬಂಧಿಸಿದಂತೆ ವಿರೋಧಗಳು ಎದು ರಾಗದಂತೆ ಕೆಲವು ಖಾಸಗಿ ಶಾಲೆಗಳು ನೋಡಿ ಕೊಳ್ಳುತ್ತಿವೆ. ಒಟ್ಟು ಶುಲ್ಕವನ್ನಷ್ಟೇ ತಿಳಿಸುತ್ತಿವೆ ಎಂಬ ಆರೋಪಗಳು ಪೋಷಕರಿದ ಕೇಳು ಬರುತ್ತಿದೆ.
ಖಾಸಗಿ ಶಾಲೆಗಳ ಶುಲ್ಕದ ವಿವರ: ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ ಎಲ್ಕೆಜಿ ಅಥವಾ 1ನೇ ತರಗತಿಗೆ 6,300 ರೂ. ಶುಲ್ಕ ಪಡೆದರೆ, ಕೆಲವು ಶಾಲೆಗಳು 1ನೇ ತರಗತಿಗೆ 34,800 ರೂ. ಶುಲ್ಕ ನಿಗದಿ ಮಾಡಿರುವುದಾಗಿ ಇಲಾಖೆಗೆ ಮಾಹಿತಿ ನೀಡಿವೆ.
ನ್ಯಾಯಾಲದ ಮೊರೆ: ಶಾಲಾ ಪ್ರವೇಶಾತಿಗೆ ಯಾವ ಪ್ರಮಾಣದಲ್ಲಿ ಶುಲ್ಕ ನಿಗದಿ ಮಾಡಬೇಕೆಂಬ ನಿಯಮ ಸಂಬಂಧ ಖಾಸಗಿ ಶಾಲೆಗಳು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಅಂತಿಮ ಅಧಿಸೂನೆಯನ್ನು ಸರ್ಕಾರ ಹೊರಡಿಸಿಲ್ಲ. ಇಷ್ಟೇ ಶುಲ್ಕ ಪಡೆಯಬೇಕೆಂಬ ನಿಮಯಕ್ಕೂ ಒಪ್ಪದೇ ಇತ್ತ ತಾವೇ ವಿಧಿಸುವ ಶುಲ್ಕದ ವಿವರಗಳನ್ನು ಇಲಾಖೆಗೂ ನೀಡಿದ್ದಕ್ಕಿಂತ ಹೆಚ್ಚು ಹಣವನ್ನು ಪೀಕಿಸುತ್ತಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಗಮನಕ್ಕೆ ತಂದರೆ ಲಿಖೀತರೂಪದಲ್ಲಿ ದೂರು ನೀಡುವಂತೆ ಹೇಳುತ್ತಾರೆ ಇದರಿಂದ ಊರ ಉಸಾಬರಿ ನಮಗ್ಯಾಕೆ ಎಂದು ಹಲವು ಪೋಷಕರು ಸುಮ್ಮನಾಗುತ್ತಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳು ತಮ್ಮ ನೋಟಿಸ್ ಬೋರ್ಡ್‌ನಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಶುಲ್ಕದ ವಿವರಗಳನ್ನು ಹಾಕದಿರುವ ಸಂಸ್ಥೆಯ ವಿರುದ್ಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಪೋಷಕ ರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.
ಶಾಮಸುಂದರ್ ಕೆ. ಅಣ್ಣೇನಹಳ್ಳಿ