Advertisement

ಖಾಸಗಿ ಬಸ್‌ಗಳಲ್ಲಿ ದರ ಹೆಚ್ಚಳ: ಪರಿಶೀಲನೆ

02:04 PM Oct 14, 2019 | Team Udayavani |

ಭಟ್ಕಳ: ಖಾಸಗಿ ಬಸ್‌ಗಳಲ್ಲಿ ಹಬ್ಬ ಹಾಗೂ ಸರಣಿ ರಜಾ ಇರುವ ಸಮಯಗಳಲ್ಲಿ ಬೆಂಗಳೂರು,ಮೈಸೂರು, ಮುಂಬೈಯಂತಹ ದೂರದ ಊರುಗಳ ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಯಾಣಿಕರು ದೂರಿದ್ದರು.

Advertisement

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ವಿ.ಪಿ. ಕೊಟ್ರಳ್ಳಿಯವರು ಖಾಸಗಿ ಬಸ್‌ ಕಚೇರಿಗಳಿಗೆ ಹಾಗೂ ಬಸ್‌ ಚಾಲಕರು, ಎಜೆಂಟರುಗಳಲ್ಲಿ ತೆರಳಿ ಪರಿಶೀಲನೆ ನಡೆಸಿದರು.

ತಮ್ಮ ಬಸ್‌ಗಳಲ್ಲಿ ಪ್ರತಿದಿನ ದರ ಬದಲಾಗುತ್ತವೆ. ನಮಗೆ ಮುಖ್ಯ ಕಚೇರಿಯಿಂದ ಯಾವ ಮಾಹಿತಿ ಬರುತ್ತದೆ ಅದೇ ರೀತಿಯಾಗಿ ನಾವು ಸೀಟ್‌ ಬುಕಿಂಗ್‌ ಮಾಡುತ್ತೇವೆ. ಹಾಲಿ ಆನ್‌ಲೈನ್‌ ಬುಕ್ಕಿಂಗ್‌ ಆಗಿರುವುದರಿಂದ ಅಲ್ಲಿ ನಮೂದಿಸಿರುವ ಹಣವನ್ನೇ ನಾವು ಪಡೆಯಬೇಕಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು.

ಬೇರೆ ಸಮಯದಲ್ಲಿ ನಾವು ಖಾಲಿ ಬಸ್‌ ಓಡಿಸಬೇಕಾಗುತ್ತದೆ. ಆಗ ನಮಗೆ ತೀವ್ರ ಹಾನಿಯಾಗುತ್ತಿದ್ದು, ಪ್ರಯಾಣಿಕರ ಒತ್ತಡವಿದ್ದಾಗ ದರ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತೇವೆ ಎಂದು ಒಪ್ಪಿಕೊಂಡರಲ್ಲದೇ ಸರಕಾರ ಕೂಡಾ ತಮ್ಮ ಓಲ್ವೋ ಬಸ್‌ ದರವನ್ನು ಪ್ರಯಾಣಿಕರ ಒತ್ತಡದ ಮೇಲೆ ಹೆಚ್ಚು ಕಡಿಮೆ ಮಾಡುತ್ತಿರುವುದಾಗಿಯೂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next