ಹುಣಸೂರು: ನಗರದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದ ಹಿನ್ನೆಲೆ ಯಲ್ಲಿ ಪೌರಾಯುಕ್ತೆ ವಾಣಿ ವಿ. ಆಳ್ವ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಖಾಸಗಿ ಬೋರ್‌ವೆಲ್ಗಳ ಮೂಲಕ ಸಮರ್ಪಕ ನೀರು ಪೂರೈಕೆಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಎಇಇ ಮಂಜುನಾಥ್, ಕುಡಿಯುವ ನೀರು ಯೋಜನೆಯ ಉಸ್ತುವಾರಿ ಎಂಜಿನಿಯರ್ ಅನುಪಮ ಮತ್ತಿತರರು ಉಪಸ್ಥಿತರಿದ್ದರು.
ಸಹಕರಿಸಲು ಮನವಿ: ನಗರದ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮನೆಗಳಲ್ಲಿ ಬೋರ್‌ವೆಲ್ ಅಳವಡಿಸಿಕೊಂಡಿರುವವರು ಕುಡಿಯುವ ನೀರು ಸರಬರಾಜಿಗೆ ಸಹಕಾರ ನೀಡು ವಂತೆ ಪೌರಾಯುಕ್ತೆ ವಾಣಿ ವಿ. ಆಳ್ವ ಮನವಿ ಮಾಡಿದ್ದಾರೆ.
ಕುಡಿಯುವ ನೀರು ಸಮಸ್ಯೆ ಹಿನ್ನೆಲೆಯಲ್ಲಿ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲು ಪೌರಾಯುಕ್ತೆ ವಾಣಿ ವಿ.ಆಳ್ವ ಮೋಟರ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ನಗರಸಭೆ ಎಇಇ ಮಂಜುನಾಥ್, ಎಂಜಿನಿಯರ್ ಅನುಪಮಾ ಇತರರು ಹಾಜರಿದ್ದರು.
Advertisement
ನಗರದ ನ್ಯೂ ಮಾರುತಿ ಬಡಾವಣೆ, ನರಸಿಂಹಸ್ವಾಮಿ ತಿಟ್ಟು, ಮಂಜುನಾಥ ಬಡಾವಣೆ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿ ಸಿರುವ ಬಗ್ಗೆ ಉದಯವಾಣಿಯಲ್ಲಿ ಏ.27 ರಂದು ‘ಸುಡು ಬಿಸಿಲಿನ ತಾಪ: ನೀರಿಗಾಗಿ ಪರಿತಾಪ’ ಶೀರ್ಷಿಕೆ ಯಡಿ ವಿಶೇಷ ವರದಿ ಪ್ರಕಟ ವಾಗಿತ್ತು. ಇದಕ್ಕೆ ಸ್ಪಂದಿಸಿರುವ ಪೌರಾಯುಕ್ತೆ ವಾಣಿ ವಿ. ಅಳ್ವ ಅವರು, ನಗರದ ನ್ಯೂ ಮಾರುತಿ ಬಡಾ ವಣೆಯ ಚೌಡೇಶ್ವರಿ ದೇವಸ್ಥಾನದ ಬಳಿಯ ಚೌಡೇಶ್ವರಿ ಬಡಾವಣೆಯ ಕಾಂಗ್ರೆಸ್ ಮುಖಂಡ ರಾಜೇಶ್ ಅವರ ಮನ ವೊಲಿಸಿ, ಬಡವಾಣೆಯಲ್ಲಿದ್ದ ಖಾಸಗಿ ಬೋರ್‌ವೆಲ್ ಮೂಲಕ ನ್ಯೂ ಮಾರುತಿ ಬಡಾವಣೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿ ಸಿದರು. ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವತಃ ಬೋರ್‌ವೆಲ್ನ ಮೋಟರ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.
Related Articles
Advertisement