ನವದೆಹಲಿ : ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ತರಲು ವಾಟ್ಸಾಪ್ ಮುಂದಾಗಿದೆ. ಉದ್ಯಮಗಳು ಮತ್ತು ಗ್ರಾಹಕರಿಗೆ ಕಂಪೆನಿಯಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮತ್ತು ಉತ್ತಮ ಸೇವೆ ನೀಡುವುದರೊಂದಿಗೆ ಅದರ ಉಪಯೋಗವನ್ನು ಬಳಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಸ ಅಯ್ಕೆಗಳನ್ನು ಒದಗಿಸುವುದು ವಾಟ್ಸಾಪ್ ನ ಮುಖ್ಯ ಉದ್ದೇಶವಾಗಿದೆ ಎಂದು ವಾಟ್ಸಾಪ್ ನ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ
ವಾಟ್ಸಾಪ್ ಮೂಲಕ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ ನಲ್ಲಿರುವವರೊಂದಿಗೆ ನಡೆಸುವ ಖಾಸಗಿ ಸಂವಹನವನ್ನು ವಾಟ್ಸಾಪ್ ಅಥವಾ ಫೇಸ್ಬುಕ್ ನೋಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ವಾಟ್ಸಾಪ್ ನ ಖಾಸಗಿತನಕ್ಕೆ ಸಂಬಂಧಿಸಿದ ಪ್ರಸ್ತಾವಿತ ನಿಯಮಗಳನ್ನು ತರಬಾರದು ಎಂದು ಮಂಗಳವಾರ(ಜ.19) ವಾಟ್ಸಾಪ್ ಗೆ ಸೂಚನೆ ನೀಡಿ, ಹೊಸ ನಿಯಮದ ಬಗ್ಗೆ 14 ಪ್ರಶ್ನೆಗಳನ್ನಿರಿಸಿದ ಹಿನ್ನಲೆಯಲ್ಲಿ, ಖಾಸಗಿತನಕ್ಕೆ ಸಂಬಂಧಿಸಿದ ನೀತಿ ನಿಯಮಗಳಲ್ಲಿನ ಪ್ರಸ್ತಾವಿತ ಬದಲಾವಣೆಯು ಬಳಕೆದಾರರ ಮಾಹಿತಿಯನ್ನು ತನ್ನ ಸಹೋದರ ಸಂಸ್ಥೆ ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುವ ತನ್ನ ಸಾಮರ್ಥ್ಯವನ್ನು ಹೆಚ್ಚು ಮಾಡುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ.
ಇದನ್ನೂ ಓದಿ : ಸಚಿವರ ಖಾತೆ ಬದಲಾವಣೆ: ಮುನಿಸಿಕೊಂಡ ಮಾಧುಸ್ವಾಮಿ, ಸಂಪುಟ ಅತೃಪ್ತರ ಸಭೆ, ರಾಜೀನಾಮೆ?
ವಾಟ್ಸಾಪ್ ನ ಪ್ರಸ್ತಾವಿತ ಹೊಸ ನಿಯಮಗಳ ಬಗ್ಗೆ ಈಚೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಈಗ, ಅದನ್ನು ದೂರ ಸರಿಸಲು ಗ್ರಾಹಕರಲ್ಲಿರುವ ತಪ್ಪು ಗ್ರಹಿಕೆಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವುದಕ್ಕೆ ವಾಟ್ಸಾಪ್ ಸಿದ್ಧವಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಭಜರಂಗಿ-2, ಸಲಗ.. ಸ್ಟಾರ್ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್ ಫಿಕ್ಸ್