Advertisement

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

12:17 PM May 08, 2024 | Team Udayavani |

ಹೈದರಾಬಾದ್: ಪ್ರಶಾಂತ್‌ ನೀಲ್‌ ಅವರ ʼಸಲಾರ್‌ʼ ಪ್ಯಾನ್‌ ಇಂಡಿಯಾದಲ್ಲಿ ದೊಡ್ಡ ಹಿಟ್‌ ಆಗಿತ್ತು. ಪ್ರಭಾಸ್‌ – ಪೃಥ್ವಿರಾಜ್‌ ಅವರನ್ನು ಒಂದೇ ಸ್ಕ್ರೀನ್‌ ನಲ್ಲಿ ನೋಡಿ ಅಭಿಮಾನಿಗಳು ʼಖಾನ್ಸಾರ್‌ʼ ಸಾಮ್ರಾಜ್ಯದ ಕಥೆಗೆ ಜೈಕಾರ ಹಾಕಿದ್ದರು.

Advertisement

ಸಿನಿಮಾ ಅಮೋಘ ದೃಶ್ಯಾವಳಿ, ಹಾಡು, ಸಾಹಸ ದೃಶ್ಯ, ಅಭಿನಯ ಎಲ್ಲಾ ವಿಭಾಗದಲ್ಲೂ ʼಸಲಾರ್‌ʼ ಗಮನ ಸೆಳೆದಿತ್ತು. ʼಸಲಾರ್‌ -2ʼ ಗಾಗಿ ತೆರೆಮೆರೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಸಿನಿಮಾದಲ್ಲಿನ ಪ್ರಭಾಸ್‌ ಹಾಗೂ ಪೃಥ್ವಿರಾಜ್‌ ಅವರ ಪಾತ್ರಗಳ ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು.

ʼಸಲಾರ್‌ʼ ರಿಲೀಸ್‌ ವೇಳೆ ಕುತೂಹಲ ಹೆಚ್ಚಿತ್ತು. ʼಕೆಜಿಎಫ್‌ʼ ನ ಪ್ರಶಾಂತ್‌ ನೀಲ್‌ ʼಸಲಾರ್‌ʼ ಕಥೆಯಲ್ಲಿ ಯಶ್‌ ವಿಶೇಷ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹಾ ಎಲ್ಲೆಡೆ ಹಬ್ಬಿತ್ತು. ಇದಲ್ಲದೆ ʼಸಲಾರ್‌ʼ ನಲ್ಲಿ ʼಕೆಜಿಎಫ್‌ʼ ಕಥೆ ಇರಲಿದೆ ಎಂದು ಟೀಸರ್‌ ನಲ್ಲಿನ ಕೆಲ ಝಲಕ್ ನೋಡಿ ನೆಟ್ಟಿಗರು ಮಾತನಾಡಿಕೊಂಡಿದ್ದರು.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾ ಬಳಕೆದಾರನೊಬ್ಬ ʼಸಲಾರ್‌ʼ ಸಿನಿಮಾದಲ್ಲಿನ ʼಶಿವ್‌ ಮನ್ನಾರ್(ಪೃಥ್ವಿರಾಜ್)‌ ಪಾತ್ರ ಹೆಚ್ಚಾಗಿ ನೋಡಲು ಸಿಕ್ಕಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಟ್ವೀಟ್‌ ವೊಂದನ್ನು ಮಾಡಿದ್ದರು.

ಇದಕ್ಕೆ ನಟ ಪೃಥ್ವಿರಾಜ್‌ ಪ್ರತಿಕ್ರಿಯೆ ನೀಡಿರುವುದು ಈಗ ವೈರಲ್‌ ಆಗುವುದರ ಜೊತೆಗೆ ಕುತೂಹಲವನ್ನು ಹೆಚ್ಚಿಸಿದೆ.

Advertisement

“ಪ್ರಶಾಂತ್ ನನಗೆ ಹೇಳಿದ ಎಲ್ಲಾ ಕಥೆಗಳಲ್ಲಿ. ಶಿವ್ ಮನ್ನಾರ್ ಕಥೆ ಬಹಳ ಚೆನ್ನಾಗಿದೆ. ಇದು ಮತ್ತೊಂದು ಯೂನಿವರ್ಸ್(ಸಿನಿಮಾ) ಜೊತೆ ಕ್ರಾಸ್‌ ಓವರ್‌(ಲಿಂಕ್) ಆಗಿರುತ್ತದೆ” ಎಂದು ಟ್ವೀಟ್‌ ಮಾಡಿದೆ.

ಈ ಟ್ವೀಟ್‌ ಬಳಿಕ ಪ್ರಶಾಂತ್‌ ನೀಲ್‌ ಅವರು ʼಸಲಾರ್‌ʼ ಶಿವ್‌ ಮನ್ನಾರ್‌ ಪಾತ್ರವನ್ನು ಯಾವ ಸಿನಿಮಾದೊಂದಿಗೆ ಲಿಂಕ್‌ ಮಾಡಲಿದ್ದಾರೆ ಎನ್ನುವ ಪ್ರಶ್ನೆಯನ್ನು ಹಾಕಿದ್ದಾರೆ.

“ಈಗ ʼಸಲಾರ್‌ʼ ಶಿವ ಮನ್ನಾರ್ ಅವರ ಪಾತ್ರ ಯಾವ ಸಿನಿಮಾದೊಂದಿಗೂ ಲಿಂಕ್ ಆಗಬಹುದು. ಪೃಥ್ವಿರಾಜ್‌ ಸರ್‌ ನೀವು ನಮ್ಮ ನಿರೀಕ್ಷೆಗಳನ್ನು ಗಗನಕ್ಕೇರಿಸಿದ್ದೀರಿ. ಸಿನಿಮಾದ ಫಸ್ಟ್‌ ಡೇ ಫಸ್ಟ್‌ ಶೋ ಹೇಗಿರುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ” ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

“ಶಿವಮನ್ನಾರ್ ಆಳ್ವಿಕೆಯ ಅವಧಿ 1970 ರದು. ಕೆಜಿಎಫ್ – ಖಾನ್ಸಾರ್ ಜೊತೆ ಆಗುತ್ತದೆಯೇ???” ಎಂದು ಮತ್ತೊಬ್ಬರು ಕುತೂಹಲದಿಂದ ಪ್ರಶ್ನಿಸಿದ್ದಾರೆ.

ʼಸಲಾರ್‌ʼ ಯಶ್‌ ಅವರ ʼಕೆಜಿಎಫ್‌ -3ʼ, ಜೂ.ಎನ್‌ ಟಿಆರ್‌ ಅವರ ʼಎನ್‌ ಟಿಆರ್‌ 31ʼ ಅಥವಾ ಶ್ರೀಮುರಳಿ ಅವರ ʼಬಘೀರʼದೊಂದಿಗೆ ಸಂಪರ್ಕವಿರುವುದು ಪಕ್ಕಾ ಎನ್ನಲಾಗುತ್ತಿದೆ.

ʼಸಲಾರ್‌ʼ ಪಾರ್ಟ್‌ -1 ಇದೇ ವರ್ಷದ ಜುಲೈ. 5 ರಂದು ಜಪಾನ್‌ ನಲ್ಲಿ ರಿಲೀಸ್‌ ಆಗಲಿದೆ.

ಪ್ರಭಾಸ್ ಮತ್ತು ಪೃಥ್ವಿರಾಜ್ ಜೊತೆಗೆ, ಈ ಚಿತ್ರದಲ್ಲಿ ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಟಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next