Advertisement

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

02:14 PM May 17, 2024 | Team Udayavani |

ಹೈದರಾಬಾದ್:‌ ಟಾಲಿವುಡ್‌ ನಟ ಡಾರ್ಲಿಂಗ್‌ ಪ್ರಭಾಸ್‌ ಇತ್ತೀಚೆಗಷ್ಟೇ ʼಸಲಾರ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಹವಾ ಸೃಷ್ಟಿಸಿದ್ದಾರೆ. ʼಬಾಹುಬಲಿʼ ಬಳಿಕ ಪ್ರಭಾಸ್‌ ವೃತ್ತಿ ಬದುಕಿನಲ್ಲಿ ʼಸಲಾರ್‌ʼ ಬಿಗ್‌ ಹಿಟ್‌ ತಂದುಕೊಟ್ಟಿದೆ.

Advertisement

ತನ್ನ ಅಭಿನಯದಿಂದ ಸದಾ ಪ್ರೇಕ್ಷಕರನು ರಂಜಿಸುವ ಪ್ರಭಾಸ್‌ ಅವರಿಗೆ ವಯಸ್ಸು 40 ದಾಟಿದೆ. ಟಾಲಿವುಡ್‌ ನಲ್ಲಿ ಪ್ರಭಾಸ್‌ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಆಗಿದ್ದಾರೆ. ತನ್ನ ನೆಚ್ಚಿನ ನಟ ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಡಾರ್ಲಿಂಗ್‌ ಪ್ರಭಾಸ್‌ ಹಾಗೂ ಅನುಷ್ಕಾ ಶೆಟ್ಟಿ ಆತ್ಮೀಯ ಸ್ನೇಹಿತರು. ಇವರಿಬ್ಬರ ನಡುವಿನ ಆತ್ಮೀಯತೆಯಲ್ಲಿ ಏನೋ ವಿಶೇಷವಾದದ್ದು ಇದೆ ಎನ್ನಲಾಗುತ್ತಿತ್ತು. ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದಾರೆ, ಡೇಟಿಂಗ್‌ ನಲ್ಲಿದ್ದಾರೆ ಎನ್ನುವ ವಿಚಾರ ಟಾಲಿವುಡ್‌ ವಲಯದಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು.

ಇದನ್ನೂ ಓದಿ: Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಆದರೆ ಇಲ್ಲ ನಾವಿಬ್ಬರು ಸ್ನೇಹಿತರಷ್ಟೇ ಎಂದು ಹೇಳಿ ಗಾಳಿ ಸುದ್ದಿಗಳನ್ನು ತಳ್ಳಿಹಾಕಿದ್ದರು. ಇದೀಗ ಪ್ರಭಾಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್‌ ವೊಂದು ಅಭಿಮಾನಿಗಳ ಗಮನ ಸೆಳೆದಿದೆ.

Advertisement

“ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ.. ಕಾಯ್ತಾ ಇರಿ” ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಭಾಸ್‌ ಮದುವೆ ಆಗಲಿದ್ದಾರೆ. ಮದುವೆ ಬಗೆಗಿನ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್‌ ವಲಯದಲ್ಲಿ ಮಾತುಗಳು ಹರಿದಾಡಿದೆ.

ಪ್ರಭಾಸ್‌ ಅವರ  ದೊಡ್ಡಮ್ಮ ಶ್ಯಾಮಲಾ ದೇವಿ ಇದೇ ವರ್ಷ ಪ್ರಭಾಸ್‌ ವಿವಾಹ ಆಗಲಿದ್ದಾರೆ ಎಂದಿದ್ದರು.

ಸದ್ಯ ಪ್ರಭಾಸ್‌ ನಾಗ್‌ ಅಶ್ವಿನ್‌ ಅವರ ‘ಕಲ್ಕಿ 2898 AD’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜೂನ್.27‌ ರಂದು ರಿಲೀಸ್‌ ಆಗಲಿದೆ. ಇದಾದ ಬಳಿಕ ʼರಾಜಾಸಾಬ್‌ʼ ಹಾಗೂ ʼಸಲಾರ್‌ -2ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾಗಳ ಬಗ್ಗೆಯೇ ಪ್ರಭಾಸ್‌ ಯಾವುದಾದರೂ ಒಂದು ಅಪ್ಡೇಟ್‌ ನ್ನು ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next