ಮುಂಬಯಿ : ಅಬ್ಬರದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಮುಂಬರುವ ರಣಜಿ ಟ್ರೋಫಿ ಋತುವಿನ ಮೊದಲ ಎರಡು ಪಂದ್ಯಗಳಿಗೆ ಮುಂಬಯಿ ತಂಡದ ನಾಯಕರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
41 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡವು ಒಂಬತ್ತು ತಂಡಗಳ ಸಿ ಗುಂಪಿಲ್ಲಿ ಸ್ಥಾನ ಪಡೆದಿದು, ಜನವರಿ 13 ರಂದು ಮಹಾರಾಷ್ಟ್ರ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಜನವರಿ 20 ರಿಂದ ಕೋಲ್ಕತಾದಲ್ಲಿ ದೆಹಲಿ ವಿರುದ್ಧ ಸೆಣಸಲಿದ್ದಾರೆ.
ಪೃಥ್ವಿ ಒಬ್ಬ ಅದ್ಭುತ ನಾಯಕ ಮತ್ತು ಅದ್ಭುತ ಆರಂಭಿಕ ಬ್ಯಾಟ್ಸ್‌ಮನ್, ನಿಮಗೆ ಇನ್ನೇನು ಬೇಕು” ಎಂದು ಮುಂಬಯಿ ಮುಖ್ಯ ಆಯ್ಕೆಗಾರ ಸಲೀಲ್ ಅಂಕೋಲಾ ಪಿಟಿಐಗೆ ಹೇಳಿಕೆ ನೀಡಿದ್ದಾರೆ.
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸರ್ಫರಾಜ್ ಖಾನ್, ಅರ್ಮಾನ್ ಜಾಫರ್ ಮತ್ತು ಆಕರ್ಷಿತ್ ಗೊಮೆಲ್, ಅನುಭವಿ ಸ್ಟಂಪರ್-ಬ್ಯಾಟರ್ ಆದಿತ್ಯ ತಾರೆ ಅವರೊಂದಿಗೆ 20 ಸದಸ್ಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪೇಸ್ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಕೂಡ ತಂಡದ ಭಾಗವಾಗಿದ್ದಾರೆ.
ಒಂದು ಏಕದಿನ ಮತ್ತು 13 ಟಿ 20 ಇ ಪಂದ್ಯಗಳನ್ನು ಆಡಿರುವ ಆಲ್ ರೌಂಡರ್ ಶಿವಂ ದುಬೆ ಅವರನ್ನೂ ಆಯ್ಕೆ ಸಮಿತಿಯು ಪರಿಗಣಿಸಿದೆ. ಗುಲಾಮ್ ಪಾರ್ಕರ್, ಸುನಿಲ್ ಮೋರೆ, ಪ್ರಸಾದ್ ದೇಸಾಯಿ ಮತ್ತು ಆನಂದ್ ಯಲ್ವಿಗಿ ಸೇರಿದ್ದಾರೆ.
ಅನುಭವಿ ವೇಗಿ ಧವಲ್ ಕುಲಕರ್ಣಿ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಮಧ್ಯಮ ವೇಗಿ ಮೋಹಿತ್ ಅವಸ್ಥಿ, ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ, ಆಫ್ ಸ್ಪಿನ್ನರ್ ಶಶಾಂಕ್ ಅಟ್ಟಾರ್ಡೆ ಮತ್ತು ಎಡಗೈ ಮಧ್ಯಮ ವೇಗಿ ರಾಯ್ಸ್ಟಾನ್ ಡಯಾಸ್ ದಾಳಿಯನ್ನು ರೂಪಿಸಲಿದ್ದಾರೆ.