Advertisement

ಮಾಸ್ಕ್ ಗಳಿಗೆ ಹೆಚ್ಚಿದ ಬೇಡಿಕೆ :ಕೊರತೆ ನೀಗಿಸಲು ಮಹಾರಾಷ್ಟ್ರ ಕೈದಿಗಳಿಂದ ಮಾಸ್ಕ್ ತಯಾರಿ

12:32 AM Mar 21, 2020 | sudhir |

ಮುಂಬಯಿ: ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕೋಪದ ಸಮಯದಲ್ಲಿ ಮಾಸ್ಕ್ ಗಳ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ರಾಜ್ಯದ ಕಾರಾಗೃಹಗಳು ಈ ರಕ್ಷಣಾತ್ಮಕ ಸಾಧನಗಳನ್ನು ತಯಾರಿಸಲು ಮುಂದಾಗಿವೆ.

Advertisement

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾಸ್ಕ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಮಹಾರಾಷ್ಟ್ರದಾದ್ಯಂತ ಕೇಂದ್ರ ಕಾರಾಗೃಹಗಳಲ್ಲಿನ ಕೈದಿಗಳಿಗೆ ಅವುಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ ಎಂದು ಗೃಹ ಸಚಿವ ಅನಿಲ್‌ ದೇಶ್ಮುಖ್‌ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜೈಲು ಆಡಳಿತವು ಈ ಕಲ್ಪನೆಯನ್ನು ಅಂಗೀಕರಿಸಿದೆ ಮತ್ತು ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಸಚಿವರು ಹೇಳಿದರು. ಈ        ಮಾಸ್ಕ್ ಗಳಲ್ಲಿ ಕೆಲವು ಕೈದಿಗಳು ಮತ್ತು ಜೈಲು ಅಧಿಕಾರಿಗಳಿಗೆ ಬಳಕೆಯಾಗುತ್ತಿವೆ. ಅದೇ, ಉಳಿದವುಗಳನ್ನು ಸರಬರಾಜುದಾರರಿಗೆ ಮಾರಾಟ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ಕೈದಿಗಳಿಗೆ ಸಂಬಳ ನೀಡಲಾಗುತ್ತಿದೆ ಎಂದು ದೇಶ್ಮುಖ್‌ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಹೊಸ ಕೈದಿಗಳನ್ನು ಪರೀಕ್ಷಿಸುವಂತೆ ಗೃಹ ಸಚಿವರು ಜೈಲು ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಜೈಲುಗಳಲ್ಲಿರುವ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

ಇದಲ್ಲದೆ, ಜನದಟ್ಟಣೆಯನ್ನು ತಡೆಗಟ್ಟಲು ಕೆಲವು ಕೈದಿಗಳನ್ನು ಇತರ ಜೈಲುಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಮುಂಬಯಿಯ ಹೊಸ ಕೈದಿಗಳನ್ನು ತಲೋಜಾ ಜೈಲಿಗೆ ಸ್ಥಳಾಂತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಸದ್ಯಕ್ಕೆ ಕೈದಿಗಳನ್ನು ಭೇಟಿ ಮಾಡಲು ಕುಟುಂಬಗಳಿಗೆ ಅವಕಾಶ ನೀಡಲಾಗುವುದಿಲ್ಲ. ನ್ಯಾಯಾಲಯಗಳಿಗೂ ವೀಡಿಯೊ ಕಾನ್ಫರೆನ್ಸಿಂಗ್‌ ಮೂಲಕ ವಿಚಾರಣೆಗಳನ್ನು ನಡೆಸಲು ಕೋರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next