Advertisement

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

04:42 PM Feb 04, 2021 | Team Udayavani |

ಬೆಳಗಾವಿ: ವೈಯಕ್ತಿಕ ಮತ್ತು ವೃತ್ತಿ ಬದುಕು ಎರಡನ್ನೂ ಸಮಾನಾಂತರವಾಗಿ ತೂಗಿಸಿಕೊಂಡು ಹೋಗಬೇಕು. ನಿತ್ಯದ ಕೆಲಸದ  ಜೊತೆಗೆ ಕುಟುಂಬಕ್ಕೂ ಕೆಲ ಸಮಯ ಮೀಸಲಿಡಬೇಕು. ಆಗ ಬದುಕು ಸುಂದರವಾಗಿರುತ್ತದೆ. ನಾವು ಕೆಲಸ ಮಾಡುವ ಜಾಗದಲ್ಲಿ  ಕುಟುಂಬಸ್ಥರು ಜೊತೆಗಿದ್ದರೆ ಅರ್ಧ ಪ್ರಪಂಚ ಗೆದ್ದಂತೆಯೇ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಬುಧವಾರ ಬೆಳಗಾವಿ ತಾತ್ಕಾಲಿಕ ಪೊಲೀಸ್‌ ತರಬೇತಿ 2ನೇ ತಂಡದ  ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ವಿವಿಧ ಹಂತದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ನೀಡಿ ಅವರು ಮಾತನಾಡಿದರು.

ಬೆಳಗಾವಿಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ 90 ಪ್ರಶಿಕ್ಷಣಾರ್ಥಿಗಳಿಗೆ ಒಂಬತ್ತು ತಿಂಗಳ ಕಾಲ ವಿವಿಧ ರೀತಿಯ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದವರ ಪೈಕಿ ಹೆಚ್ಚಿನವರು ಉನ್ನತ ವ್ಯಾಸಂಗ ಕೈಗೊಂಡಿದ್ದಾರೆ. ಆದರೂ ಕಾರಾಗೃಹ ವೀಕ್ಷಕ ಹುದ್ದೆ ಮಾಡಬೇಕಾಯಿತೇ ಎಂದು ಯಾರೂ ಕೀಳರಿಮೆ ಬೆಳೆಸಿಕೊಳ್ಳಬಾರದು. ಸರ್ಕಾರಿ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಈ ಅವಕಾಶ ಬಳಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು. ಕೈದಿಗಳ ಬಾಳಲ್ಲಿ ಸುಧಾರಣೆ ತರಬೇಕು. ಅಂತಹ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಯೋಗ, ಧ್ಯಾನ, ಕರಾಟೆ, ಆಯುಧಗಳೊಂದಿಗೆ ಕವಾಯತು, ಫೆ„ರಿಂಗ್‌, ಅಶ್ರವಾಯುಗಳ ಬಗ್ಗೆ ಬೋಧನೆ, ಕಂಪ್ಯೂಟರ್‌ ಮತ್ತಿತರ ವಿಷಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತರಬೇತಿಯನ್ನು ಯಶಸ್ವಿಯಾಗಿ ಸದುಪಯೋಗಪಡಿಸಿಕೊಂಡು ವೃತ್ತಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಶಿಸಿದರು.

ನಿಮ್ಮ ಸೇವೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಆಮಿಷ ಹಾಗೂ ಪ್ರಭಾವಕ್ಕೆ ಒಳಗಾಗಬೇಡಿ. ಬದಲಾಗಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಇಲಾಖೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

Advertisement

 ಇದನ್ನೂ ಓದಿ :ಕುಂಚಿಟಿಗ ಮಠದ ಸಂಸ್ಕೃತ ಶಾಲೆಗೆ ಮಿನಿಬಸ್‌ ದಾನ

ಇದಕ್ಕೂ ಮುನ್ನ ಆಕರ್ಷಕ ಪಥಸಂಚಲನ ನಡೆಸಿದ ಪ್ರಶಿಕ್ಷಣಾರ್ಥಿಗಳು ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.  ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು 90 ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾರಾಗƒಹ ಮತ್ತು ಸುಧಾರಣಾ ಸೇವಾ ಇಲಾಖೆ ಐಜಿಪಿ ಸೋಮಶೇಖರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,ಡಿಸಿಪಿ ಡಾ.ವಿಕ್ರಮ ಅಮಟೆ, ಚಂದ್ರಶೇಖರ ನಿಲಗಾರ, ಕೆಎಸ್‌ಆರ್‌ಪಿ ಕಮಾಂಡೆಂಟ್‌ ಹಮ್ಜಾಹುಸೇನ್‌, ಹೋಮ್‌ಗಾರ್ಡ್ಸ್ ಕಮಾಂಡಂಟ್‌ ಕಿರಣಕುಮಾರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next