Advertisement

ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧುಗೆ ತೂಕ ಇಳಿಸಲು ಸಲಹೆ ನೀಡಿದ ವೈದ್ಯರು

08:57 PM Jul 16, 2022 | Team Udayavani |

ಚಂಡೀಗಢ: ಬೀದಿ ಜಗಳ ಮಾಡಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಪಟಿಯಾಲಾ ಕೇಂದ್ರೀಯ ಜೈಲು ಸೇರಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧುಗೆ ಮೊಣಕಾಲು ನೋವು ಕಾಣಿಸಿಕೊಂಡಿದೆ.

Advertisement

ಅವರನ್ನು ಮೂಳೆ ತಜ್ಞರು ವೈದ್ಯಕೀಯ ಪರಿಶೀಲನೆ ಮಾಡಿದ್ದು, ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಧು ಜೈಲು ಸೇರಿದಾಗಿನಿಂದ ನೆಲದ ಮೇಲೆಯೇ ಮಲಗುತ್ತಿದ್ದು, ಏಳುವುದಕ್ಕೆ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.

ಹಾಗಾಗಿ ವೈದ್ಯರು ಅವರಿಗೆ ಹಾಸಿಗೆ ಮೇಲೆ ಮಲಗಲು ಸೂಚಿಸಿದ್ದು, ಅದರಂತೆ ಜೈಲಧಿಕಾರಿಗಳು ಅವರಿಗೆ ಹಾಸಿಗೆ ಪೂರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next