Advertisement

ಜಗತ್ತಿಗೇ ಕನ್ನಡ ಕಂಪಿನ ಬಿತ್ತರ

08:15 AM Feb 13, 2018 | Team Udayavani |

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ| ಚಂದ್ರಶೇಖರ ಕಂಬಾರರು “ಉದಯವಾಣಿ’ ಜತೆ ಮಾತನಾಡಿ ದೇಶದ ಸಾಹಿತ್ಯ ವಲಯದ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ಏರಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಅವರ ಜತೆ  ನಡೆಸಿದ ಕಿರು ಸಂದರ್ಶನ ಇಲ್ಲಿದೆ.

Advertisement

ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಬಗ್ಗೆ ನಿಮ್ಮ ಅನಿಸಿಕೆ?
ದೇಶದ ಅತ್ಯುನ್ನತ ಸಾಹಿತ್ಯ ಸಂಸ್ಥೆ ಯನ್ನು ಮುನ್ನಡೆಸುವ ಭಾಗ್ಯ ಸಿಕ್ಕಿರುವುದು ನನ್ನ ಸೌಭಾಗ್ಯ. ಇದು ಅತೀ ದೊಡ್ಡ ಜವಾ
ಬ್ದಾರಿ. ಇಂಥ ಹೊಣೆಗಾರಿಕೆ ವಹಿಸಿಕೊಳ್ಳು ತ್ತಿರುವುದು ನನಗೆ ಸಂತಸ ತಂದಿದೆ.

ಈ ಹುದ್ದೆ ನಿರೀಕ್ಷೆ ಇತ್ತಾ?
ನನ್ನ ಆಯ್ಕೆ ಸಮಸ್ತ ಕನ್ನಡಿಗರಿಗೆ ಸಂದ ಗೌರವ. ಮೊದಲಿನಿಂದಲೂ ನೀವು ಅಧ್ಯಕ್ಷರಾಗ ಬೇಕು ಎಂದು ಸಾಕಷ್ಟು ಸಾಹಿತಿಗಳು ಹೇಳುತ್ತಾ ಬಂದಿದ್ದರು. ಈಗ ದೇಶದ ಎಲ್ಲ ಸಾಹಿತಿ ಗಣ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನಿಮ್ಮ ಆದ್ಯತೆ ಏನು?
ಕೇಂದ್ರ ಸಾಹಿತ್ಯ ಅಕಾಡೆಮಿಯು ದೇಶ‌ದ ನೂರಾರು ಭಾಷೆಗಳನ್ನು ಒಂದೇ ವೇದಿಕೆಗೆ ತರುವ ಸಂಸ್ಥೆ. ಈ ಸಂಸ್ಥೆಯ ಮೂಲಕ  ಭಾರತದ ಭಾಷೆಗಳು ವಿದೇಶೀ ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು.

ಕನ್ನಡಕ್ಕೆ ನಿಮ್ಮ ಆದ್ಯತೆ ಏನು ?
ಒಂದೇ ಭಾಷೆ ಎಂದು ಟಾರ್ಗೆಟ್‌ ಮಾಡಿ ಕೆಲಸ ಮಾಡಲು ಆಗದು. ಆದರೆ, ಮುಖ್ಯವಾಗಿ ಕನ್ನಡ ಸಹಿತ  ಎಲ್ಲ ಪ್ರಾಂತೀಯ ಭಾಷೆಗಳಿಗೆ ಸಮಸ್ಯೆ ಎದು ರಾಗಿದೆ. ರಾಜ್ಯ ಭಾಷೆಗಳನ್ನು ಉಳಿಸುವ ಹಾಗೂ ಆಯಾ ರಾಜ್ಯಗಳಲ್ಲಿ ಮಾತೃ
ಭಾಷೆಗೆ ಹೆಚ್ಚು ಆದ್ಯತೆ ಸಿಗುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಖಂಡಿತ ವಾಗಿಯೂ ಕೆಲಸ ಮಾಡಲಿದ್ದೇನೆ.

Advertisement

ಹಿಂದೆಯೂ ಇದು ನಡೆದಿತ್ತಾ?
ಹೌದು, ಪ್ರಾಂತೀಯ ಭಾಷೆಗಳಿಗೆ ಆದ್ಯತೆ ಹಾಗೂ ಮಾತೃಭಾಷೆಯಲ್ಲಿ ಶಿಕ್ಷಣ ಕಡ್ಡಾಯ ವಿಚಾರದಲ್ಲಿ ಐದು ಲಕ್ಷ ಸಹಿ ಸಂಗ್ರಹಿಸಿ ಹಿಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಸಲ್ಲಿಸಲಾಗಿತ್ತು. ಕರ್ನಾಟಕ ಆ ವಿಚಾರದಲ್ಲಿ ದೇಶದ ಇತರ ರಾಜ್ಯಗಳ ಜತೆ ಮಾತುಕತೆ ನಡೆಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಮುಂದೆಯೂ ಇದಕ್ಕೆ ಪೂರಕವಾಗಿಯೇ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದೆ.

ಈ ಹುದ್ದೆಗೇರಿದ ಮೂರನೇ ಕನ್ನಡಿಗರು ನೀವು?
ಹೌದು, ನಾನು ಆಗಲೇ ಹೇಳಿ ದಂತೆ ಇದು ಕನ್ನಡಿಗರಿಗೆಲ್ಲವೂ ಹೆಮ್ಮೆ. ವಿ.ಕೃ. ಗೋಕಾಕ್‌, ಡಾ| ಅನಂತಮೂರ್ತಿ ಸೇವೆ ಸಲ್ಲಿಸಿರುವ ಸಂಸ್ಥೆ. ಅನೇಕ ಹಿರಿಯ ಸಾಹಿತಿಗಳು ಸಾಹಿತ್ಯ ಅಕಾಡೆಮಿಯ ಹಿರಿಮೆ ಹೆಚ್ಚಿಸಿ ದ್ದಾರೆ. ಆ ಎಲ್ಲ ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಕೆಲಸ ಮಾಡು ತ್ತೇನೆ.

ಕಂಬಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಾರಥ್ಯ
ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ 25 ವರ್ಷಗಳ ಅನಂತರ ಕನ್ನಡಿಗರಿಗೆ ದೊರೆತಿದ್ದು, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಕಾಡೆಮಿಯ 89 ಗವರ್ನಿಂಗ್‌ ಕೌನ್ಸಿಲ್‌ ಸದಸ್ಯರು ಕಂಬಾರ, ನೆಮಾಡೆ ಮತ್ತು ಪ್ರತಿಭಾ ಅವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದರು. ಅಂತಿಮವಾಗಿ ಗೌಪ್ಯ ಮತದಾನ ನಡೆದು ಕಂಬಾರರು 89 ಮತಗಳ ಪೈಕಿ 56 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಒರಿಯಾ ಲೇಖಕಿ ಪ್ರತಿಭಾ ರೊಯ್‌ 29 ಹಾಗೂ ಮರಾಠಿ ಲೇಖಕ ಬಾಲಚಂದ್ರ ನೆಮಾಡೆ 4 ಮತಗಳನ್ನು ಮಾತ್ರ ಗಳಿಸಿದರು. ಕಂಬಾರರು ಐದು ವರ್ಷಗಳ ಕಾಲ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿ ಉಪಾಧ್ಯಕ್ಷರಾಗಿದ್ದ ಕಂಬಾರರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಿ ಲೇಖಕ ಮಾಧವ ಕೌಶಿಕ್‌ ಆಯ್ಕೆಯಾಗಿದ್ದಾರೆ.

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next