ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಬೀದಿ ದೀಪ ಇತರೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 1.28 ಕೋಟಿ ರೂ. ಉಳಿ ತಾಯ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲಕೃಷ್ಣ ತಿಳಿಸಿದರು. ನಗರದ ಪುರಸಭೆ ಕಾರ್ಯಾಲಯದ ಸಭಾಂಗ ಣದಲ್ಲಿ 2019-2020 ನೇ ಸಾಲಿನ ಪುರಸಭೆ ಆಯವ್ಯಯ ಮಂಡಿಸಿ ಮಾತನಾಡಿದರು.
ಬಜೆಟ್‌ನ ಮೊತ್ತ 27.35 ಕೋಟಿ ರೂ.ಯಿದೆ. ಬಜೆಟ್ ವೆಚ್ಚ 26.07 ಕೋಟಿ ರೂ.ಇದ್ದು, ಉಳಿಕೆ ಬಜೆಟ್‌ನ ಮೊತ್ತ 1.28 ಕೋಟಿ ರೂ.ಆಗಿದೆ. 2019-20ನೇ ಸಾಲಿನಲ್ಲಿ 1.30 ಕೋಟಿ ರೂ. ತೆರಿಗೆ ನಿರೀಕ್ಷಿಸಲಾಗಿದೆ ಎಂದರು.
ಪೌರಕಾರ್ಮಿಕರಿಗೆ ವಿಶೇಷ ಸೌಲಭ್ಯ: ಬೆಳ ಗಿನ ಉಪಹಾರ ವ್ಯವಸ್ಥೆ, 3 ತಿಂಗಳಿಗೊಮ್ಮೆ ಕಡ್ಡಾಯ ವೈದ್ಯಕೀಯ ಪರೀಕ್ಷೆ, 20 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯ, ಹೊರ ಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರದ ಆದೇಶ ದಂತೆ ಕಾಯಂಗೊಳಿಸುವುದು, ಪೌರಕಾರ್ಮಿ ಕರಿಗೆ ರಕ್ಷಾ ಕವಚಗಳನ್ನು ಒದಗಿಸುವುದು, ಪೌರಕಾರ್ಮಿಕರ ದಿನಾಚರಣೆ ದಿನ ಅಗತ್ಯ ಪರಿಕರಗಳನ್ನು ವಿತರಿಸುವುದು, ಹೊರಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವುದು, ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣದ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡುವುದು, ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು ಶೇ.24.10 ರ ನಿಧಿಯಲ್ಲಿ ಭರಿಸಲಾಗುವುದು ಎಂದರು.
ನಾಗರಿಕರಿಗೆ ವಿಶೇಷ ಸೌಲಭ್ಯ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿ ಬಡ ಜನರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ವಿತರಿಸು ವುದು. ನಗರದಲ್ಲಿ ಈಗಾಗಲೇ 5 ಪ್ರಮುಖ ಸ್ಥಳಗಳಲ್ಲಿ ಧರ್ಮಸ್ಥಳ ಸಂಸ್ಥೆಯ ಸಹಯೋಗ ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚುವರಿಯಾಗಿ 3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸ ಲಾಗುವುದು. ಸರ್ಕಾರದ ಅನುಮತಿಯನ್ನು ಪಡೆದು 600 ಚ.ಅಡಿಗಿಂತ ಕಡಿಮೆ ಇರುವ ಬಡ ಕುಟುಂಬಗಳ ಆಸ್ತಿ ತೆರಿಗೆ ಪಾವತಿದಾ ರರು 2002-03ರಿಂದ 2018-19ನೇ ಸಾಲಿ ನ ವರೆಗೆ ಬಾಕಿ ಇರುವ ಕಂದಾಯ ಪಾವ ತಿಸಿದ್ದಲ್ಲಿ ಅವರಿಗೆ ಪ್ರಸಕ‌್ತ ಸಾಲಿನ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದರು.
ಉದ್ಯಾನವನ ನಿರ್ಮಾಣ: ಸಿಹಿ ನೀರಿನ ಕೆರೆಯ ಸುತ್ತಲೂ ವಾಯು ವಿಹಾರಕ್ಕಾಗಿ ಪಾದಚಾರಿ ಮಾರ್ಗ ಹಾಗೂ ಉದ್ಯಾನವನ ನಿರ್ಮಿಸಿ ವ್ಯಾಯಾಮ ಸಲಕರಣೆಯನ್ನು ಅಳವಡಿಸಲಾಗುವುದು. ಪೌರಾಡಳಿತದ ವಿಶೇಷ ಅನುದಾನದಡಿ ನಗರದ ಪ್ರಮುಖ ಉದ್ಯಾನವನಗಳಲ್ಲಿ ವ್ಯಾಯಾಮ ಸಲಕರಣೆ ಅಳವಡಿಸಲಾಗುವುದು. ಮುಕ್ತಿ ವಾಹನ ಮತ್ತು ಶವ ಸಂರಕ್ಷಣಾ ಪೆಟ್ಟಿಗೆ ಸೌಲಭ್ಯ ಕಲ್ಪಿಸುವುದು. ಪುರಸಭಾ ಕಚೇರಿ ಮುಂಭಾ ಗದಲ್ಲಿ 4 ಅಂತಸ್ತಿನ ವಾಣಿಜ್ಯ ಸಂಕೀರ್ಣ ಹಾಗೂ ಸಭಾಂಗಣವನ್ನು ನಿರ್ಮಿಸುವುದು. ಶೌಚಾಲಯ ಇಲ್ಲದ ಮನೆಗಳಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಶೌಚಾಲಯ ನಿರ್ಮಿಸುವುದು. ಜನಸಂದಣಿ ಮತ್ತು ಅಪ ಘಾತ ವಲಯಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪೊಲೀಸ್ ಇಲಾಖೆಗೆ ಹಸ್ತಾಂತ ರಿಸುವುದು. ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು ಹಾಗೂ ತಾಲೂಕಿನ ಇರಿಗೇನಹಳ್ಳಿ ಗ್ರಾಮದ ಬಳಿ ಗುರುತಿಸಿರುವ ಘನ ತ್ಯಾಜ್ಯ ನೆಲ ಭರ್ತಿ ಜಮೀನನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಪಾದಚಾರಿ ರಸ್ತೆ ಅಭಿವೃದ್ಧಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅನುದಾನ ದಡಿ ಕೆಂಪೇಗೌಡ ಸರ್ಕಲ್‌ನಿಂದ ನಗರದ ಮುಖಾಂತರ ರಾಣಿ ಸರ್ಕಲ್ ವರೆಗೆ ರಸ್ತೆ ಮತ್ತು ಪಾದಚಾರಿ ರಸ್ತೆ ಅಭಿವೃದ್ಧಿಪಡಿಸು ವುದು. ನಗರದಲ್ಲಿರುವ ಪ್ರಮುಖ ಸರ್ಕಲ್‌ಗಳಾದ ಹೊಸ ಬಸ್ ನಿಲ್ದಾಣದ ಪ್ರೊ. ನಂಜುಂಡಸ್ವಾಮಿ ವೃತ್ತ, ಹಳೇ ಬಸ್ ನಿಲ್ದಾಣ ಹಾಗೂ ಶಿವಕುಮಾರ ಸ್ವಾಮಿ ವೃತ್ತಗಳನ್ನು ಅಭಿವೃದ್ಧಿಪಡಿಸುವುದು. ಜನ ಸಂದಣಿಯ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾ ಲಯ ನಿರ್ಮಾಣ ಮಾಡಲಾಗುವುದು. ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳಿಗೆ 61.14 ಲಕ್ಷ ರೂ. ಮೀಸ ಲು ಹಾಗೂ ಬಡ ವರ್ಗದ ಕಲ್ಯಾಣ ಕಾರ್ಯ ಕ್ರಮಗಳಿಗೆ 26.76 ಲಕ್ಷ ರೂ. ಮೀಸಲಿಡ ಲಾಗಿದೆ ಎಂದು ಬಜೆಟ್ ಪಟ್ಟಿ ನೀಡಿದರು.
ಸ್ವಾಮೀಜಿಗೆ ಶ್ರದ್ಧಾಂಜಲಿ: ಸಭೆಗೂ ಮುನ್ನಾ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀ ಜಿಗೆ 2 ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿ ಸಲಾಯಿತು. ಈ ವೇಳೆ ಪುರಸಭಾ ಉಪಾಧ್ಯಕ್ಷೆ ಆಶಾ ರಾಣಿ, ಮುಖ್ಯಾಧಿಕಾರಿ ಹನಮಂತೇಗೌಡ, ಸದಸ್ಯರಾದ ಜಿ.ಎ.ರವೀಂದ್ರ, ಗೋಪಾಲ್, ಶಶಿಕುಮಾರ್, ನರಸಿಂಹಮೂರ್ತಿ, ಬೇಕರಿ ಮಂಜುನಾಥ್, ಎಂ.ನಾರಾಯಣಸ್ವಾಮಿ, ಪದ್ಮಾವತಿ, ಗಾಯತ್ರಿ, ಶಾರದಮ್ಮ, ರತ್ನಮ್ಮ, ಪುಷ್ಪಾ, ಭಾಗ್ಯಮ್ಮ, ಲಕ್ಷ್ಮೀ ಸೇರಿದಂತೆ ಪುರಸಭಾ ಸಿಬ್ಬಂದಿ ಭಾಗವಹಿಸಿದ್ದರು.