Advertisement

ಜಲಪಾತದ ಅಭಿವೃದ್ಧಿಗೆ ಆದ್ಯತೆ

02:43 PM Nov 14, 2021 | Team Udayavani |

ಗುರುಮಠಕಲ್‌: ಬೇರೆ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಹೇಗೆ ಅಭಿವೃದ್ಧಿಗೊಳಿಸಿದ್ದಾರೆಯೋ ಹಾಗೆಯೇ ಗುರುಮಠಕಲ್‌ ತಾಲೂಕಿನ ನೈಸರ್ಗಿಕ ದಬ್‌ದಭೆ ಜಲಪಾತವನ್ನೂ ಪ್ರವಾಸಿ ತಾಣವಾಗಿಸಲು ಆದ್ಯತೆ ನೀಡುವುದಾಗಿ ಜೆಡಿಎಸ್‌ ಮುಖಂಡ ಶರಣಗೌಡ ಕಂದಕೂರ ಭರವಸೆ ನೀಡಿದರು.

Advertisement

ದಬ್‌ದಭೆ ಜಲಪಾತಕ್ಕೆ ಭೇಟಿ ನೀಡಿ ನಜರಾಪುರ ಗ್ರಾಮಸ್ಥರೊಡನೆ ಚರ್ಚಿಸಿದರು. ಇಲ್ಲಿಗೆ ಬಂದ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ವಿಷಯ. ಕೂಡಲೆ ಜಲಪಾತದಲ್ಲಿ ಮತ್ತೆ ಅಂಥ ಅನಾಹುತಗಳು ಜರುಗದಂಗತೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಜಲಪಾತದ ಅಭಿವೃದ್ಧಿಗಾಗಿ ಶಾಸಕರು ಪ್ರಯತ್ನಿಸಿದ್ದರಿಂದ 1.5 ಕೋಟಿ ರೂ. ಅನುದಾನವನ್ನು ಪ್ರವಾಸೋದ್ಯಮ ಇಲಾಖೆ ನೀಡಿದೆ ಎಂದು ಶರಣಗೌಡ ತಿಳಿಸಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಜೆಡಿಎಸ್‌ ಮತಕ್ಷೇತ್ರದ ಯುವ ಘಟಕ ಅಧ್ಯಕ್ಷ ಜ್ಞಾನೇಶ್ವರಡ್ಡಿ, ಹಿರಿಯ ಮುಖಂಡ ಬಾಲಪ್ಪ ನೀರೆಟ್ಟಿ, ಬಸಣ್ಣ ದೇವರಹಳ್ಳಿ, ಪುರಸಭೆ ಸದಸ್ಯ ಬಾಲಪ್ಪ ದಾಸರಿ, ಸಿರಾಜ್‌ ಚಿಂತಕುಂಟಿ, ರಘನಾಥರೆಡ್ಡಿ ಗವಿನೋಳ್‌, ಶಿವರೆಡ್ಡಿ ಪಾಟೀಲ್‌ ನಜರಾಪುರ, ಭೀಮರೆಡ್ಡಿ ಪಾಟೀಲ್‌, ಮಲ್ಲಿಕಾರ್ಜುನ ಅಡಿಕಿ, ಮಹೇಶ ಗೌಡ, ನರಸಪ್ಪ ಧನವಾಢ, ನಜರಾಪುರ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next