Advertisement

ಪ್ರವಾಸೋದ್ಯಮ, ಐಟಿ ಕ್ಷೇತ್ರ, ಮೂಲಭೂತ ಸೌಲಭ್ಯಕ್ಕೆ ಆದ್ಯತೆ: ವೇದವ್ಯಾಸ ಕಾಮತ್‌

06:23 PM May 05, 2023 | Team Udayavani |

ಮಂಗಳೂರು: ತುಂಬೆ ಡ್ಯಾಂ ಜಲಸಂಗ್ರಹ ಮಟ್ಟ ಪೂರ್ಣ ಸಾಮರ್ಥ್ಯದ 7 ಮೀಟರ್‌ಗೆ ಏರಿಕೆ, 24 ಗಂಟೆ ಕುಡಿಯುವ ನೀರು ಪೂರೈಕೆ, ಕುದ್ರುಗಳ ಅಭಿವೃದ್ಧಿ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ, ಲಕ್ಷದೀÌಪಕ್ಕೆ ಕ್ರೂಸ್‌ ನಿರ್ವಹಣೆ, ಮಂಗಳೂರಿನಲ್ಲಿ ಐಟಿ ಪಾರ್ಕ್‌ ನಿರ್ಮಾಣ, ಬಡ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಜವಳಿ ಪಾರ್ಕ್‌ ಮಾದರಿಯಲ್ಲೇ ಸಣ್ಣ ಉದ್ದಿಮೆ ಘಟಕ ಸ್ಥಾಪನೆಗೆ ಆದ್ಯತೆ….ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕುರಿತ ಶಾಸಕ, ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರ ಆದ್ಯತೆಗಳನ್ನು ಪ್ರಣಾಳಿಕೆಯ ಮೂಲಕ ಪ್ರಸ್ತುತ ಪಡಿಸಿದ್ದು ಹೀಗೆ.

Advertisement

ಗುರುವಾರ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ, ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು, ನಗರದ ನೈರ್ಮಲ್ಯ, ಸಂಚಾರ ವ್ಯವಸ್ಥೆಯ ಸಮಗ್ರ ಸುಧಾರಣೆ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ನಗರವನ್ನು ಇನ್ನಷ್ಟು ಸ್ವತ್ಛ, ಸುಂದರ ನಗರವನ್ನಾಗಿಸುವ ಚಿಂತನೆ ಇದೆ ಎಂದರು.

ಮುಖಂಡರಾದ ಸಂತೋಷ್‌ ಕುಮಾರ್‌ ರೈ ಬೊಳಿಯಾರ್‌,ರವಿಶಂಕರ್‌ ಮಿಜಾರ್‌, ಸುಪ್ರಸಾದ್‌ ಶೆಟ್ಟಿ, ವಿಜಯ್‌ ಕುಮಾರ್‌ ಶೆಟ್ಟಿ, ನಿತಿನ್‌ ಕುಮಾರ್‌, ರೂಪ ಡಿ.ಬಂಗೇರ, ಸುರೇಂದ್ರ ಜೆಪ್ಪಿನಮೊಗರು ಮುಂತಾದವರಿದ್ದರು.

ಮುಖ್ಯಾಂಶಗಳು
*ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲು ರಿವರ್‌ ಫ್ರಂಟ್‌ ಯೋಜನೆ ಜಾರಿಗೆ ಕ್ರಮ, ಉಳ್ಳಾಲ ಸೇತುವೆ ಮೂಲಕ ಸುಲ್ತಾನ್‌ ಬತ್ತೇರಿ ವರೆಗಿನ ನದಿ ಪಾತ್ರಗಳ ಸಮಗ್ರ ಅಭಿವೃದ್ಧಿ.
*ಕುದ್ರುಗಳ ಸುಂದರೀಕರಣ ಮೂಲಕ ಪ್ರವಾಸೀ ಆಕರ್ಷಣೆ, ಫಿಲ್ಮ್ ಸಿಟಿ ನಿರ್ಮಾಣ. ಹಿನ್ನೀರಿನ ಸಮಗ್ರ ಬಳಕೆ ಮೂಲಕ ಪ್ರವಾಸಿಗರ ಆಕರ್ಷಣೆಗೆ, ಬೋಟ್‌ ಟೂರಿಸಂ ಅನುಷ್ಠಾನಕ್ಕೆ ಕ್ರಮ. ವಿದೇಶಿ ಹಾಗೂ ದೇಶೀ ಪ್ರವಾಸಿಗರ ಆಕರ್ಷಣೆಗೆ ಹೆಲಿಪೋರ್ಟ್‌ ನಿರ್ಮಾಣ.
*ನಗರದ ನೈರ್ಮಲ್ಯಕ್ಕೆ ವಿಶೇಷ ಆದ್ಯತೆ, ಘನತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆ
*ಹಲವು ಕಡೆ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌, ಕಮಾಂಡ್‌ ಕಂಟ್ರೋಲ್‌ ಮೂಲಕ ಟ್ರಾಫಿಕ್‌ ನಿರ್ವಹಣೆ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಯಾಮರಾ ಅಳವಡಿಸಿ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆ.
*ಮಂಗಳೂರಿನ ಒಳಚರಂಡಿ ಜಾಲ 50 ವರ್ಷಕ್ಕಿಂತಲೂ ಹಳೆಯದಾಗಿದ್ದು, ಅದನ್ನು ಹಂತ ಹಂತವಾಗಿ ಬದಲಾಯಿಸಿ ಒಳಚರಂಡಿ ಜಾಲ ಸಮಗ್ರ ಸುಧಾರಣೆ.
*ಸ್ಥಳೀಯ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಲು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಆದ್ಯತೆ, ಸಂಸ್ಕರಿತ ಮೀನು, ತರಕಾರಿ, ಹಣ್ಣು ರಫ್ತು ಮಾಡುವ ಯೋಜನೆಯನ್ನು ರೂಪಿಸಿ ಉದ್ದಿಮೆದಾರರಿಗೆ ಪ್ರೋತ್ಸಾಹ,
*ಇನ್ನಷ್ಟು ಈಜು ಕೊಳ ನಿರ್ಮಾಣ
*ಗ್ರೀನ್‌ ಕಾನ್ಸೆಪ್ಟ್ ಅಡಿಯಲ್ಲಿ ವಾರ್ಡ್‌ಗೆ ಒಂದು ಉದ್ಯಾನವನ ಅಭಿವೃದ್ಧಿ
*ನಗರದ ಎಲ್ಲ ಕೆರೆಗಳ ಪುನಃಶ್ಚೇತನ
*ನೆರೆ ಬಾಧಿತ ಪ್ರದೇಶಗಳಿಗೆ ತಡೆಗೋಡೆ ನಿರ್ಮಾಣ, ಕೃತಕ ನೆರೆ ತಡೆಗೆ ಪರಿಹಾರ
*ಮೀನುಗಾರಿಕಾ ಬೋಟಿನ ಸುಗಮ ಸಂಚಾರಕ್ಕೆ ಡ್ರೆಜ್ಜಿಂಗ್‌, ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ.
*ಟಿಡಿಆರ್‌ ಮೂಲಕ ಭೂ ಸ್ವಾಧೀನಪಡಿಸಿ ಆರ್ಥಿಕ ದುರ್ಬಲರಿಗೆ ಸೂರು
*ಮಂಗಳೂರಿನಲ್ಲಿ ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪನೆ
*ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ
*ಮಂಗಳೂರು ಪರಿಸರದಲ್ಲಿ ಟೆಕ್ಸ್‌ ಟೆ„ಲ್‌ ಪಾರ್ಕ್‌ ಮಾದರಿಯಲ್ಲಿ ಸಣ್ಣ ಉದ್ದಿಮೆ ಘಟಕಗಳ ಸ್ಥಾಪನೆಗೆ ಆದ್ಯತೆ

ಅಣೆಕಟ್ಟಲ್ಲಿ ನೀರು ಸಂಗ್ರಹ ಏರಿಕೆ
ತುಂಬೆ ಅಣೆಕಟ್ಟೆಯ ನೀರಿನ ಸಂಗ್ರಹದ ಮಟ್ಟವನ್ನು 6ರಿಂದ 7 ಮೀಟರ್‌ ಎತ್ತರಕ್ಕೆ ಏರಿಸಲು ಕ್ರಮ. ಮಂಗಳೂರಿಗೆ ದಿನದ 24 ಗಂಟೆಯೂ ನೀರು ಪೂರೈಕೆಗೆ ಕ್ರಮ. ಜಲಸಿರಿ ಯೋಜನೆಯಡಿ 792 ಕೋಟಿ ರೂ. ಮೊತ್ತ ವೆಚ್ಚ ಮಾಡಿ, ಆಗುತ್ತಿರುವ ಸೋರಿಕೆ ಕನಿಷ್ಠ ಪ್ರಮಾಣಕ್ಕೆ ಇಳಿಕೆ.

Advertisement

ಮಿಯಾವಾಕಿ ಅರಣ್ಯ
ಮಂಗಳೂರಿನ ಕಾಂಕ್ರಿಟ್‌ ರಸ್ತೆಗಳಲ್ಲಿ ಬೇಸಗೆಯ ವಿಪರೀತ ಉಷ್ಣ ವಾತಾವರಣ ತಗ್ಗಿಸಲು ಮಿಯಾವಾಕಿ ಅರಣ್ಯ ಬೆಳೆಸಲು ಚಿಂತನೆ ನಡೆಸಲಾಗಿದೆ. ನಗರದ ಐದು ಕಡೆಗಳಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next