ದೊಡ್ಡಬಳ್ಳಾಪುರ: ರಾಜ್ಯದ ಎಲ್ಲಾ ಕೆರೆಕಟ್ಟೆಗಳು, ಕಲ್ಯಾಣಿಗಳನ್ನು ನರೇಗಾದಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ನರೇಗಾ ಕಾಮಗಾರಿಗಳ ಮುಖಾಂತರ ಕರ್ನಾಟಕ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತಾಲೂಕಿನ ಎಸ್.ಎಸ್.ಘಾಟಿಯಲ್ಲಿರುವ ರಾಷ್ಟ್ರೋತ್ಥಾನ ಗೋ ಶಾಲೆಯ ಮಾಧವ ಸೃಷ್ಟಿ, ಬೃಂದಾವನ-ಕೃಷಿ ಅರಣ್ಯ ಯೋಜನೆಯ ಸಸಿ ನೆಡುವ ಸಪ್ತಾಹದಲ್ಲಿ ಶನಿವಾರ ಗೋ ಮಾತೆಗೆ ಪೂಜೆ ಸಲ್ಲಿಸಿ, ಗಿಡ ನೆಟ್ಟು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಜನೆಯಂತೆ ಮಳೆ ನೀರನ್ನ ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮರುಪೂರಣ ಎಂಬ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಕೆರೆಕಟ್ಟೆಗಳು, ಕಲ್ಯಾಣಿಗಳನ್ನುನರೇಗಾದಡಿಯಲ್ಲಿ ಅಂತರ್ಜಲ ಮರುಪೂರಣಕ್ಕೆ ಆದ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ:ನಿಜಾಮರಿಗೆ ಸಡ್ಡು ಹೊಡೆದು ಧ್ವಜಾರೋಹಣ!
ನರೇಗಾದಡಿ ದುಡಿಯುವುದಕ್ಕೆ ಕೂಲಿ ಎಂದು ಹೇಳುವುದಕ್ಕೆ ಇಷ್ಟಪಡಲ್ಲ. ಯುದ್ಧ ಭೂಮಿಯಲ್ಲಿ ಸೈನಿಕರು ಕರ್ತವ್ಯ ನಿರ್ವಹಿಸುವ ರೀತಿಯಲ್ಲಿಯೇ, ಸಮಾಜದಲ್ಲಿ ಬಡವರು ಕೂಡ ಸೈನಿಕರ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು. ಗೋ ಮಾತೆಗೆ ಪೂರ್ಣ ಮಾತೆ ಸ್ಥಾನ ಸಿಗುತ್ತದೆಯೋ ಅಲ್ಲಿಯ ತನಕ ಸ್ವಾತಂತ್ರ್ಯ ಸಿಕ್ಕಿದಂತಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ.
ನಾವೆಲ್ಲರೂ ಪರಿಸರ ಬೆಳೆಸಲು, ಕೆರೆ,ಕಲ್ಯಾಣಿಗಳು ಅಭಿವೃದ್ಧಿ ಮಾಡಲು ಈ ಸ್ಫೂರ್ತಿ ನೀಡುತ್ತದೆ.ಇಲ್ಲಿ ತರಬೇತಿ ಕೇಂದ್ರ ತೆರೆಯಬೇಕು ಎಂದು ತೀರ್ಮಾನಿಸಿದೆ ಎಂದರು .
ತಾಪಂ ಇಒ ಮುರುಡಯ್ಯ, ರಾಷ್ಟೋತ್ತಾನ ಪರಿಷತ್ ಉಪಾಧ್ಯಕ್ಷ ದಿನೇಶ್ ಹೆಗ್ಗಡೆ, ಗೋ ಮಾತೆ ವ್ಯವಸ್ಥಾಪಕ ಡಾ.ಜೀವನ್ ಕುಮಾರ್ ಹಾಜರಿದ್ದರು.