ಕುಣಿಗಲ್: ಪ್ರತಿಯೊಬ್ಬರೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿ ಬಹಿರ್ದೆಸೆ ತಪ್ಪಿಸಬೇಕೆಂದು ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ತಾಲೂಕು ಅಂಚೇಪಾಳ್ಯ ಕೈಗಾರಿಕ ವಸಹತ್ತು ಪ್ರದೇ ಶದ ಎಚ್.ಆರ್ ಆ್ಯಂಡ್ ಜಾನ್‌ಸನ್ ಕಾರ್ಖಾನೆಯಿಂದ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಿರ್ಮಿಸಿ ರುವ ನೂತನ ಮಾದರಿ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿ, ಮಲಭಾದೆ ಉಂಟಾದಾಗ ಪ್ರತಿಯೊಬ್ಬರು ಶೌಚಾಲಯವನ್ನು ಬಳಸುತ್ತಾರೆ. ಈ ನಿಟ್ಟಿನಲ್ಲಿ ಎಚ್. ಆರ್ ಆ್ಯಂಡ್ ಜಾನ್‌ಸನ್ ಕಾರ್ಖಾನೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಉತ್ತಮ ಶೌಚಾಲಯ ನಿರ್ಮಿಸಿ ಕೊಟ್ಟು ಅನುಕೂಲ ಮಾಡಿದ್ದಾರೆ ಎಂದರು.
ಶತಮಾನದ ಶಾಲೆ: ಜಿಕೆಬಿಎಂಎಸ್ ಶಾಲೆ ಪ್ರಾರಂಭ ವಾಗಿ ನೂರು ವರ್ಷಗಳು ಕಳೆದಿದೆ. ನಾನು ಸೇರಿದಂತೆ ಸಮಾಜದ ಕಟ್ಟಕಡೆಯ ಸಾವಿವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ಅತ್ಯುನ್ನತ ಸ್ಥಾನಕ್ಕೆ ಹೋಗಿ ದ್ದಾರೆ. ಖಾಸಗಿ ಶಾಲೆ ಪೈಪೋಟಿಯಿಂದ ಈ ಶಾಲೆಯಲ್ಲಿ ಹಾಜರಾತಿ ಕಡಿಮೆಯಾಗಿತ್ತು. ಹಳೇ ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರು ಸೇರಿ ಶಾಲೆಯ ಸರ್ವ ತೋಮುಖ ಅಭಿವೃದ್ಧಿಗೆ ಮುಂದಾದ ಕಾರಣ ಈಗ 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಕ್ಯಾಲಪ್ಪ ಮಾತನಾಡಿ, ಶೌಚಾಲಯ ಸಮರ್ಪಕವಾಗಿ ಸದ್ಬಳಕ್ಕೆ ಮಾಡಿಕೊಳ್ಳುವುದರ ಜೊತೆಗೆ ಸ್ವತ್ಛವಾಗಿ ಇಟ್ಟು ಕೊಳ್ಳಬೇಕು ಎಂದರು. ಸೌಲಭ್ಯ ದೊರಕಿಸಿ ಕೊಡುವೆ: ಕಾರ್ಖಾನೆಯ ಡಿಜಿಎಂ ವೆಂಕಟೇಶ್ ಮೂರ್ತಿ ಮಾತನಾಡಿ, ನಾನು ಈ ಶಾಲೆ ಯಲ್ಲಿ ಓದಿರುವ ಹಳೇ ವಿದ್ಯಾರ್ಥಿ ಆಗಿದ್ದೇನೆ. ಈ ಜೀರ್ಣೋದ್ಧಾರಕ್ಕೆ ನಮ್ಮ ಕಾರ್ಖಾನೆಯ ಜೊತೆಗೆ ಬೇರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಶಾಲೆಗೆ ಅಗತ್ಯವಿರುವ ಡೆಸ್ಕ್ ಹಾಗೂ ಮೊದಲಾದ ಸೌಲಭ್ಯ ದೊರಕಿಸಿ ಕೊಡುವುದಾಗಿ ತಿಳಿಸಿದರು.
ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ: ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಗೋಪಾಲ್‌ಕೃಷ್ಣ ಮಾತನಾಡಿ, ಗ್ರಾಮೀಣ ಹಾಗೂ ಪಟ್ಟಣದ ಬಡ ವರ್ಗದ ಮಕ್ಕಳ ಶೈಕ್ಷಣಿಕ ಅಭಿ ವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಇದರೊಂದಿಗೆ ಖಾಸಗಿ ಕಾರ್ಖಾನೆ ಕೈ ಜೋಡಿಸಿರುವುದು ಅಭಿನಂದನಾರ್ಹ ಎಂದರು. ಕಾರ್ಖಾನೆ ವ್ಯವಸ್ಥಾಪಕ ಉದಯ್ ಉಪಾಧ್ಯ, ಕೆ.ಎಂ.ಪ್ರಸಾದ್, ಮುಖ್ಯಶಿಕ್ಷಕ ಪುಟ್ಟಸ್ವಾಮಯ್ಯ, ಕಸಾಪ ಮಾಜಿ ಅಧ್ಯಕ್ಷ ದಿನೇಶ್‌ಕುಮಾರ್ ಹಾಗೂ ಮತ್ತಿತರರು ಇದ್ದರು.