Advertisement
ಯೋಜನೆ ತಲುಪಿಸಿನೀರು, ಒಳಚರಂಡಿ ನಿವಾರಣೆ, ಕಸ ವಿಲೇವಾರಿ, ಸಾರಿಗೆ ವ್ಯವಸ್ಥೆ, ವಸತಿ, ಶಿಕ್ಷಣ, ಉದ್ಯೋಗ, ಉದ್ಯಮ, ಕೈಗಾರಿಕೆ, ಮಹಿಳಾ ಸುರಕ್ಷತೆ, ಐಟಿ ಪಾರ್ಕ್‌ಗಳ ರಚನೆ, ಪ್ರವಾಸೋದ್ಯಮ, ಮಳೆ ನೀರು ಕೊಯ್ಲು ಬಳಕೆ, ಸೌರಶಕ್ತಿ, ಬಂದರು, ಮೀನುಗಾರಿಕ ಹಾಗೂ ಸರಕಾರದ ಪ್ರತಿ ಯೋಜನೆ ಪ್ರತಿಯೊಬ್ಬರಿಗೂ ತಲುಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
-ವಿಕ್ಟರ್, ಪಿಲಿಕುಳ ವಾಮಂಜೂರು
ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಸದ್ವಿನಿಯೋಗಿಸಿಕೊಂಡು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು.
ನಂತೂರು ಮತ್ತು ಕೆಪಿಟಿ ವೃತ್ತದಲ್ಲಿ ನಿರಂತರ ಟ್ರಾಫಿಕ್ ಜಾಂ ಪರಿಹಾರಿಸಲು ಕ್ರಮೈಗೊಳ್ಳಿ.
ದಶಕಗಳಿಂದ ಘೋಷಣೆಯಾಗುತ್ತಿರುವ ಹಂಪನಕಟ್ಟೆಯಲ್ಲಿ ಕಾರು ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಗಮನಹರಿಸಿ.
ಸರ್ಕಲ್‌ಗಳನ್ನು ನಿರ್ಮಾಣ ಮಾಡುವಾಗ ವೈಜ್ಞಾನಿಕವಾಗಿ ಅವಲೋಕನ ಮಾಡಿಕೊಂಡೇ ನಿರ್ಮಿಸಬೇಕು.
-ಬಿ. ಆರ್. ಭಟ್, ಹಿರಿಯ ನಾಗರಿಕರು ಜನರ ಸಮಸ್ಯೆ ಪರಿಹರಿಸಿ
ಗೆದ್ದ ಅಭ್ಯರ್ಥಿಗಳು ಜಾತಿ, ಮತ, ಪಕ್ಷ ಭೇವಿಲ್ಲದೆ ಸಮಾಜಮುಖೀಯಾಗಿ ತೊಡಗಿಸಿಕೊಳ್ಳಬೇಕು.
ಪ್ರತಿ ನಾಗರಿಕನ ಸಮಸ್ಯೆಗೂ ಸ್ಪಂದಿಸಬೇಕು.
ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
-ಅನುರಾಧಾ ರಾಜೀವ್, ಸುರತ್ಕಲ್
Related Articles
ಚುನಾಯಿತ ಅಭ್ಯರ್ಥಿಗಳು ತಮ್ಮ ವಾರ್ಡ್‌ಗೆ ಪ್ರತಿನಿತ್ಯ ಭೇಟಿ ನೀಡಬೇಕು.
ಜನರ ಸಮಸ್ಯೆಗಳನ್ನು ಆಲಿಸಿ ಸುಮ್ಮನಾಗದೆ, ಅದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು.
-ಜಿ. ಆರ್. ಪ್ರಭು, ಬಿಜೈ
Advertisement
ಒಳಚರಂಡಿ ವ್ಯವಸ್ಥೆ ಕಲ್ಪಿಸಿಕಾಂಕ್ರಿಟ್ ರಸ್ತೆಯ ಇಕ್ಕೆಲಗಳಲ್ಲಿ ಫುಟ್‌ಪಾತ್ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು.
ಪಂಪ್‌ವೆಲ್‌ನಲ್ಲಿ ನೆನೆಗುದಿಗೆ ಬಿದ್ದಿರುವ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಶೀಘ್ರಕೈಗೊಳ್ಳಿ.
ನಗರ ವ್ಯಾಪ್ತಿಯೊಳಗಿರುವ ಹೊಂಡಗುಂಡಿ ಬಿದ್ದಿರುವ ರಸ್ತೆಗಳನ್ನು ಶೀಘ್ರ ದುರಸ್ಥಿಪಡಿಸಬೇಕು.
ರಾಷ್ಟ್ರೀಯ ಹೆದ್ದಾರಿ, ಇತರ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಬೀಚ್ ಅಭಿವೃದ್ಧಿ ಬಗ್ಗೆ ಅಗತ್ಯ ಗಮನ ಹರಿಸಬೇಕು.
ನೇತ್ರಾವತಿ ನದಿ ತಟದಲ್ಲಿ ರಿಂಗ್ ರಸ್ತೆ ಪ್ರಸ್ತಾವನೆ ಇನ್ನೂ ಕಡತದಲ್ಲಿ ಬಾಕಿಯಾಗಿದ್ದು, ಈ ಬಗ್ಗೆ ಗಮನ ಹರಿಸಬೇಕು.
– ಶ್ರೀಧರ ಕೆದಿಲಾಯ, ಗೋರಿಗುಡ್ಡೆ, ಕಂಕನಾಡಿ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ
ಪ್ಲಾಸ್ಟಿಕ್, ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಾಗಬೇಕು.
ಲಭ್ಯ ಸ್ಥಳಗಳಲ್ಲಿ ಉದ್ಯಾನವನ, ಆಟದ ಮೈದಾನ ನಿರ್ಮಿಸಬೇಕು.
ಕಾಂಕ್ರೀಟ್ ರಸ್ತೆಗಳನ್ನು ಅಗೆದು ಒಳಚರಂಡಿ ವ್ಯವಸ್ಥೆ ದುರಸ್ತಿಗೊಳಿಸುವ ಬದಲು ಪರ್ಯಾಯ ದಾರಿಗಳನ್ನು ಹುಡುಕಬೇಕು.
ಜನಸಾಮಾನ್ಯರು, ಬಿಲ್ಡರ್‌ಗಳು, ಕಾಂಟ್ರಾಕ್ಟ್ದಾರರು ಎಲ್ಲರಿಗೂ ಏಕ ನಿಯಮ ಪಾಲನೆ ಕಡ್ಡಾಯವಾಗಬೇಕು.
ಪಕ್ಷರಹಿತ ವಾರ್ಡ್ ಕಮಿಟಿ ರಚಿಸಿ ಜನಪ್ರತಿನಿಧಿಗಳು, ಸಾರ್ವಜನಿಕರು ನಗರಾಭಿವೃದ್ಧಿಗೆ ಒಟ್ಟಾಗಿ ಸಹಕರಿಸುವಂತಾಗಬೇಕು.
-ಡೆನ್ನಿಸ್ ಲೋಬೋ, ಕದ್ರಿ ಕೈಬಟ್ಟಲ್ ಚರಂಡಿ ವ್ಯವಸ್ಥೆ ಸರಿಪಡಿಸಿ
ಸುಭಾಸ್ ನಗರದಲ್ಲಿ ಕೃತಕ ನೆರೆಗೆ ಕಾರಣ ಎಮ್ಮೆಕೆರೆ ಕ್ರಾಸ್, ಮಂಗಳಾದೇವಿ, ಬೋಳಾರದಿಂದ ಎಮ್ಮೆಕೆರೆಗೆ ಬರುವ ನೀರಿನ ಹರಿವು. ಈ ನೀರನ್ನು ನಿಯಂತ್ರಿಸಿ ಪರ್ಯಾಯ ವ್ಯವಸ್ಥೆ ರೂಪಿಸಬೇಕು.
ಮಂಗಳಾದೇವಿ, ಬೋಳಾರ ಕಡೆಯಿಂದ ಬರುವ ನೀರಿಗೆ ಪರ್ಯಾಯ ಚರಂಡಿ ರಚಿಸಿ, ಶೀಘ್ರ ಅನುಷ್ಠಾನಕ್ಕೆ ತರಬೇಕು.
ಆರಂಭದಲ್ಲಿ ಇದ್ದ ಇತರ ಮೂಲ ಚರಂಡಿಗಳನ್ನು ಹುಡುಕಿ ಆ ಚರಂಡಿಗಳನ್ನು ಪುನರ್ ರಚಿಸಬೇಕು.
ಎಮ್ಮೆಕೆರೆಯಲ್ಲಿ ಈಗ ಇರುವ ಕೆರೆಯ ಖಾಲಿ ಜಾಗದಲ್ಲಿ ಹರಿದು ಬರುವ ಚರಂಡಿ ನೀರನ್ನು ಅಣೆಕಟ್ಟು ಮಾದರಿಯಲ್ಲಿ ಶೇಖರಿಸಿ, ನೀರಿನ ಇಂಗುವಿಕೆಗೆ ಅನುವು ಮಾಡಿಕೊಡಬೇಕು.
-ಮಾರ್ಸೆಲ್ ಎಂ. ಡಿ’ಸೋಜಾ, ಸುಭಾಸ್‌ನಗರ, ಪಾಂಡೇಶ್ವರ ಮಾದಕ ವಸ್ತುಗಳಿಗೆ ಕಡಿವಾಣ ಅಗತ್ಯ
ಕೆಲರಾಯಿಯಿಂದ ತಾರೆಗುಡ್ಡೆಗೆ ಹೋಗುವ ರಸ್ತೆ ದುರಸ್ತಿಗೊಳಿಸಲು ಆದ್ಯತೆ ನೀಡಿ.
ಶಾಲೆಯ ಸುತ್ತಮುತ್ತ ಮಾದಕ ದ್ರವ್ಯ ವ್ಯಸನಿಗಳು ಅನೈತಿಕ ವಾಗಿ ವ್ಯವಹರಿಸುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಿ.
ವಾಮಂಜೂರಿನಿಂದ ನಂತೂರಿನ ತನಕ ಹೊಂಡಗುಂಡಿರಹಿತ ರಸ್ತೆಯನ್ನು ಕಲ್ಪಿಸಿ.
-ಎಡ್ವಿನ್ ಬೆನಿಗ್ನಸ್ ಗೊಜೇರ್, ಕೆಲರಾಯಿ ನೀರುಮಾರ್ಗ ಗ್ರಾಹಕಸ್ನೇಹಿ ವರ್ತನೆಗೆ ಒತ್ತು ನೀಡಿ
ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಮಳೆಗಾಲದ ಮೊದಲು ತೋಡುಗಳ ಹೂಳೆತ್ತಬೇಕು.
ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಬೇಕು.
ಅನಧಿಕೃತ ಕಟ್ಟಡಗಳ ಮಾಲಕರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು.
ನಂತೂರು ಮತ್ತಿತರೆಡೆ ಸರಿಯಾದ ಟ್ರಾಫಿಕ್ ಸಿಗ್ನಲ್ ಬೇಕು.
ನೀರಿನ ದುರುಪಯೋಗ ಮತ್ತು ಅನಧಿಕೃತ ಬಳಕೆಗೆ ಕಡಿವಾಣ ಹಾಗೂ ದಂಡ ವಸೂಲಿ.
ಪಾಲಿಕೆ ಸಿಬಂದಿಗೆ ಸರಿಯಾದ ತರಬೇತಿ ಮತ್ತು ಗ್ರಾಹಕಸ್ನೇಹಿ ವರ್ತನೆಗೆ ಒತ್ತು ನೀಡಬೇಕು.
-ಕೆ. ವಿ. ಸೀತಾರಾಮ್, ಬಿಜೈ ರಸ್ತೆ,ಸರಿಪಡಿಸಿ
ಜನರ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು.
ಜಾತಿ, ಮತ, ಪಕ್ಷ ನೋಡದೆ ಜನರ ಒಳಿತಿಗಾಗಿ ಕೆಲಸ ಮಾಡಬೇಕು.
ರಸ್ತೆ, ಕುಡಿಯುವ ನೀರು, ದಾರಿದೀಪ, ಒಳಚರಂಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು.
-ಮೀನಾ ಪಿಂಟೋ, ಬಜ್ಜೋಡಿ ರಸ್ತೆ ಉತ್ತಮವಾಗಲಿ
ಉತ್ತಮ ದರ್ಜೆಯ ಕಾಂಕ್ರೀಟ್ ರಸ್ತೆ ನಿರ್ಮಿಸಿ.
ಪಡೀಲ್ ಜಂಕ್ಷನ್‌ನಿಂದ ಪಂಪ್‌ವೆಲ್ ಜಂಕ್ಷನ್‌ವರೆಗಿನ ರಸ್ತೆಯನ್ನು ಚತುಷ್ಪತಗೊಳಿಸಿ ಸುಂದರೀಕರಣಗೊಳಿಸಿದರೆ ಬೇರೆ ನಗರಗಳಿಂದ ಬರುವ ಪ್ರವಾಸಿಗರಿಗೆ ಸುಲಭವಾದೀತು.
-ಮೋಹನ್,ಬೋಳೂರು ನಗರದ ನೀರಿನ ಸಮಸ್ಯೆ ಬಗೆ ಹರಿಸಿ
ರಸ್ತೆ ಹೊಂಡಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸಬೇಕು.
ತಿಂಗಳಿಗೆ ಸರಿಯಾಗಿ ನೀರಿನ ಬಿಲ್ ನೀಡಬೇಕು.
ನಗರದ ನೀರಿನ ಸಮಸ್ಯೆ ಬಗೆ ಹರಿಸಬೇಕು.
-ಶುಭಾ ಭರತ್, ಉರ್ವಸ್ಟೋರ್ ಮೂಲ ಸೌಕರ್ಯ ಒದಗಿಸಿ
ಮೂಲ ಆವಶ್ಯಕತೆಗಳನ್ನು ಕುಂದುಕೊರತೆ ಇಲ್ಲದೆ ಪೂರೈಸುವುದು ಆದ್ಯತೆಯಾಗಲಿ.
ಕಳಪೆ ಮತ್ತು ಅವೈಜ್ಞಾನಿಕ
ಕಾಮಗಾರಿಗಳನ್ನು ನಿಯಂತ್ರಿಸಬೇಕು.
ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತಕ್ಕೆ ಒತ್ತು ನೀಡಬೇಕು.
ಸ್ಮಾರ್ಟ್‌ಸಿಟಿ ಯೋಜನ ವಿನ್ಯಾಸಗಳಿಗೆ ಅನುಗುಣವಾಗಿ ರೂಪಿಸಿ ಜಾರಿಗೊಳಿಸಬೇಕು.
ಕಸ ನಿರ್ವಹಣೆ ಸಮರ್ಪಕವಾಗಬೇಕು ಮತ್ತು ರೀಸೈಕ್ಲಿಂಗ್ ಘಟಕಗಳನ್ನು ಸ್ಥಾಪಿಸಿ ಪರಿಸರಕ್ಕೆ ಒತ್ತು ನೀಡಬೇಕು.
ಖಾಲಿ ಇರುವ ಸರಕಾರಿ ಜಾಗಗಳನ್ನು ಉದ್ಯಾನಗಳನ್ನಾಗಿ ಪರಿವರ್ತಿಸಬೇಕು.
-ಸಾಂತಪ್ಪ ಯು., ಬಾಬುಗುಡ್ಡ ಅತ್ತಾವರ ಕುಡಿಯುವ ನೀರಿನ ಸೋರಿಕೆ ತಡೆಗಟ್ಟಿ
ಸೆಂಟ್ರಲ್ ಮಾರ್ಕೆಟ್‌ನ್ನು ಬೆಂಗಳೂರು ಜಯನಗರ ಫೋರ್ತ್ ಬ್ಲಾಕ್ ಮಾದರಿಯಲ್ಲಿ ಸುಂದರೀ ಕರಣಗೊಳಿಸಬೇಕು.
ರಸ್ತೆ, ತೋಡು, ಕೇಬಲ್, ಒಳಚರಂಡಿ, ಕುಡಿಯುವ ನೀರಿನ ಟ್ಯಾಂಕಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಓರ್ವರಿಗೇ ಗುತ್ತಿಗೆ ನೀಡಿ ಐದು ವರ್ಷಗಳ ನಿರ್ವಹಣೆಯನ್ನೂ ಅವರಿಗೆ ನೀಡಬೇಕು.
ಮೆಜೆಸ್ಟಿಕ್ ಮಾದರಿಯ ಬಸ್ ನಿಲ್ದಾಣ ಆವಶ್ಯಕತೆ ಇದೆ.
ಎಲ್ಲ ಕುಡಿಯುವ ನೀರಿನ ಪಂಪ್‌ಹೌಸ್‌ಗಳಲ್ಲಿ ಆಧುನಿಕ ಮಾದರಿಯ ಪಂಪ್‌ಗ್ಳನ್ನು ಅಳವಡಿಸಿ ಸೋರಿಕೆ ತಡೆಗಟ್ಟಬೇಕು.
-ನರೇಶ್ ಆರ್. ಕಿಣಿ, ಮಂಗಳೂರು ಚರಂಡಿ ವ್ಯವಸ್ಥೆ ಕಲ್ಪಿಸಿ
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ.
ಎಲ್ಲ ವಾರ್ಡ್‌ಗಳ ರಸ್ತೆಗಳಲ್ಲಿಯೂ ಕಾಲುದಾರಿ ರಚನೆಯಾಗಬೇಕು.
ರಸ್ತೆ ಬದಿಯಲ್ಲಿ ವಿದ್ಯುತ್ ದೀಪ ಸದಾ ಉರಿಯುವಂತೆ ನೋಡಿಕೊಳ್ಳಲು ವಿಚಕ್ಷಣಾ ಕಣ್ಣು ಇಡಬೇಕು.
ಪಾಲಿಕೆಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧರಿರುವಂತೆ ಸೂಚಿಸಬೇಕು.
ಪಾಲಿಕೆ ಭಾಗವನ್ನು ಅತಿಕ್ರಮಿಸಿ ವ್ಯಾಪಾರ ಉದ್ದೇಶಕ್ಕೆ ಕಟ್ಟಡ, ಚಾವಣಿ ವಿಸ್ತರಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮಕ್ಕೆ ಮುಂದಾಗಬೇಕು.
-ಸುಭಾಶ್ಚಂದ್ರ ಕಣ್ವತೀರ್ಥ, ಅಳಪೆ ಕರ್ಮಾರ್ ರಸ್ತೆ ಸರಿಪಡಿಸಿ
ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು.
ರಸ್ತೆಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು.
-ಚಂದ್ರಶೇಖರ್ ,ಬಜಾಲ್ ಪಾರ್ಕಿಂಗ್ ಸೌಲಭ್ಯ ಒದಗಿಸಿ
ಹೊಂಡಗುಂಡಿಗಳಿಲ್ಲದ ರಸ್ತೆ, ಕಾಲುದಾರಿ ಕಲ್ಪಿಸಬೇಕು.
ಕುಡಿಯುವ ನೀರು, ದಾರಿದೀಪ ಒದಗಿಸಬೇಕು.
ಸುಸಜ್ಜಿತ ವಾಹನ ಪಾರ್ಕಿಂಗ್ ಸೌಲಭ್ಯವನ್ನು ಜನರಿಗೆ ಕಲ್ಪಿಸಬೇಕು.
ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗದಂತೆ ಸೂಕ್ತ ಗಮನ ಹರಿಸಬೇಕು.
-ಶಶಿಕಾಂತ್ ಶೆಟ್ಟಿ, ಕಟ್ಲ ಸುರತ್ಕಲ್ ರಸ್ತೆ ಪೂರ್ಣಗೊಳಿಸಿ
ಕೊಟ್ಟಾರದಿಂದ ಸುರತ್ಕಲ್‌ವರೆಗೆ ಸರ್ವಿಸ್ ರಸ್ತೆ ಪೂರ್ಣ ಗೊಳಿಸಬೇಕು.
ಹೊಸಬೆಟ್ಟು ನಲ್ಲಿ ಒಳಚರಂಡಿ ವ್ಯವಸ್ಥೆ ಕಾರ್ಯ ಗತಗೊಳಿಸಬೇಕು.
-ಸಂಜೀವ ಸುವರ್ಣ, ಹೊಸಬೆಟ್ಟು