Advertisement

ನೀರಿನ ಸಮಸ್ಯೆಗೆ ಆದ್ಯತೆ ನೀಡಿ: ತೇಲ್ಕೂರ

10:20 AM Mar 02, 2022 | Team Udayavani |

ಸೇಡಂ: ಬೇಸಿಗೆ ಸಮೀಪಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನೀರಿನ ಅಭಾವವಾಗದಂತೆ ಆದ್ಯತೆ ನೀಡಿ, ಕೆಲಸ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜಕುಮಾರ ತೇಲ್ಕೂರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೆçಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನೂರಾರು ಕೋಟಿ ರೂ. ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ. ಆದರೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸದೇ ಇರುವುದರಿಂದ ಅನುದಾನ ಲ್ಯಾಪ್ಸ್‌ ಆಗುವ ಹಂತಕ್ಕೆ ಬಂದು ತಲುಪಿವೆ. ಹೀಗಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಅಮಾನತು ಮಾಡಲಾಗುವುದು ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ಮಾಡುತ್ತಿರುವ ಕಾಮಗಾರಿಗೆ ಯಾರಾದರೂ ತೊಂದರೆ ಉಂಟು ಮಾಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿವಿಧ ಇಲಾಖೆಗಳಲ್ಲಿ ಇನ್ನೂ ಬಹುತೇಕ ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡಿದ್ದರೂ ಟೆಂಡರ್‌ ಕೂಡ ಕರೆದಿಲ್ಲ. ಈ ಎಲ್ಲ ಟೆಂಡರ್‌ ಪ್ರಕ್ರಿಯೆ ಕೂಡಲೇ ಆರಂಭವಾಗಬೇಕು ಎಂದು ಸೂಚಿಸಿದರು.

2016-17ರಲ್ಲಿ ಹತ್ತು ಭವನ ನಿರ್ಮಿಸಲು ಹಣ ನೀಡಿದರೂ ಈಗಲೂ ಪೂರ್ಣಗೊಳಿಸಲು ನಿಮ್ಮಿಂದ ಆಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಜೆಜೆಎಂ ಯೋಜನೆಯಡಿ ಈಗಾಗಲೇ 31 ಗ್ರಾಮಗಳಲ್ಲಿ ಪ್ರತಿ ಮನೆಗೂ ನೀರು ತಲುಪಿಸಲಾಗಿದೆ. ಇನ್ನು ಕೆಲ ಗ್ರಾಮಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

Advertisement

ಮುಂದಿನ ಡಿಸೆಂಬರ್‌ ವೇಳೆಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಮನೆ-ಮನೆಗೂ ನೀರು ನೀಡುವ ಕಾಮಗಾರಿ ಆರಂಭಿಸಬೇಕು. ಚಿಂಚೋಳಿ ತಾಲೂಕಿನ ನಮ್ಮ ಕ್ಷೇತ್ರದಲ್ಲಿ ಹರಿಯುವ ಮುಲ್ಲಾಮುರಿ ನದಿಗೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಯೋಜನೆ ತಯಾರಿಸಬೇಕು ಎಂದು ಸೂಚಿಸಿದರು.

ಸೇಡಂ ತಾಪಂ ಇಒ ಗುರುನಾಥ ಶೆಟಗಾರ, ಚಿಂಚೋಳಿ ತಾಪಂ ಇಒ ಅನಿಲಕುಮಾರ ರಾಠೊಡ ಇದ್ದರು. ಜಿಪಂ ಎಇಇ ಶರಣಬಸಪ್ಪ, ಕೃಷಿ ಇಲಾಖೆಯ ಎ.ವೈ. ಹಂಪಣ್ಣ, ಶಿಶು ಅಭಿವೃದ್ಧಿ ಇಲಾಖೆಯ ಗೌತಮ ಸಿಂಧೆ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್‌, ಅಲ್ಪಸಂಖ್ಯಾತರ ಇಲಾಖೆಯ ವಿಜಯಲಕ್ಷ್ಮೀ ಅವಟೆ ಹಾಗೂ ಸಮಾಜ ಕಲ್ಯಾಣ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಇದ್ದರು.

ಪಟ್ಟಣಕ್ಕೆ ಮುಂದಿನ ಜೂನ್‌ ವರೆಗೆ ನೀರಿನ ಸಮಸ್ಯೆ ಉಂಟಾಗದಂತೆ ಮುಖ್ಯಾಧಿಕಾರಿ ಎಚ್ಚರಿಕೆ ವಹಿಸಬೇಕು. ಶಿಕ್ಷಕರ ಕೊರತೆ, ಪಶು ಸಂಗೋಪನಾ ಇಲಾಖೆಯಲ್ಲಿನ ಖಾಲಿ ಹುದ್ದೆಗೆ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ವಿಧಾನಸಭೆ ಕ್ಷೇತ್ರದ ಎಲ್ಲೆಲ್ಲಿ ಶಾಲೆ ಕಟ್ಟಡ, ಕಾಲೇಜು ನಿರ್ಮಾಣ, ವಸತಿ ನಿಲಯ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆಯೋ ಅಧಿಕಾರಿಗಳಿಂದ ಎರಡು ದಿನದಲ್ಲಿ ಪಡೆದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಎಲ್ಲ ಕಾಮಗಾರಿಗಳಿಗೆ ಹಣ ಒದಗಿಸುಂತೆ ಮನವಿ ಮಾಡುತ್ತೇನೆ. -ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next