Advertisement

ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಿ

04:52 PM Sep 20, 2019 | Team Udayavani |

ಕೆ.ಆರ್‌.ಪೇಟೆ: ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡುವ ಮೂಲಕ ಮುಂದಿನ ತಲೆಮಾರಿಗೆ ಪರಿಚಯಿಸಬೇಕು ಎಂದು ಜಿಪಂ ಸದಸ್ಯ ರಾಮದಾಸ್‌ ಹೇಳಿದರು.

Advertisement

ತಾಲೂಕಿನ ಹರಿಹರಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಟಿವಿ, ಮೊಬೈಲ್‌ ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಸಿಲುಕಿರುವ ಯುವ ಜನರು ಇಂದು ಆಟವೆಂದರೆ ಕೇವಲ ಕ್ರಿಕೆಟ್‌ ಎಂದು ಮಾತ್ರ ಭಾವಿಸಿ ದ್ದಾರೆ. ಆರೋಗ್ಯದೊಂದಿಗೆ ಉಲ್ಲಾಸ ಕೊಡುವ ದೇಸೀಯ ಕ್ರೀಡೆಗಳಾದ ಕಬಡ್ಡಿ, ಖೋಖೋ, ಮರಕೋತಿ, ಅಳಿಗುಳಿ ಮನೆ, ಟೋಪಿ ಆಟ, ಕೆರೆ ದಡ, ಹಾವು ಏಣಿ, ಪಗಡೆಯಾಟ, ಲಗೋರಿ, ಗಿಲ್ಲಿ ದಾಂಡು, ಚಿನ್ನಿಕೋಲು, ಕಾಟಾ ಕುಸ್ತಿ, ಮಲ್ಲಕಂಭ ಇತ್ಯಾದಿ ಆಟಗಳು ಕಣ್ಮರೆಯಾಗುತ್ತಿದ್ದು, ಅವುಗಳ ಉಳಿವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮಾಜಿ ಸದಸ್ಯ ಕೆ.ಆರ್‌. ನೀಲಕಂಠ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳನ್ನು ಸ್ಪರ್ಧಾ ಭಾವದಿಂದ ಸ್ವೀಕರಿಸಿ ಸತತ ಅಭ್ಯಾಸ ಮಾಡಿ ಸಮಗ್ರ ವ್ಯಕ್ತಿತ್ವ ಬೆಳೆಸಿಕೊಂಡು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಫಿ ಅಹಮದ್‌ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಬಿ.ಟಿ.ಕೃಷ್ಣೇಗೌಡ, ಜಿಲ್ಲಾ ಯುವಜನ ಸಬಲೀಕರಣ ಇಲಾಖೆ ಜಿಲ್ಲಾ ಸಂಯೋಜಕ ಪರಮೇಶ್‌, ಶಿಕ್ಷಕರಾದ ಲೋಕೇಶ್‌, ಮಂಜುಳಾ, ಮಮತಾ, ಕುಮಾರ್‌, ಸಿದ್ಧೇಶ್‌, ಅಂಬಿಕ, ತೇಜಾವತಿ, ಸಂಧ್ಯಾ ಮತ್ತು ಪವಿತ್ರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next