Advertisement
ಹೆಚ್ಚು ಹಾನಿಯಾದ ಬೆಳ್ತಂಗಡಿಗೆ ಆಸರೆಯಾಗಬೇಕಿದೆ ಸಚಿವರುಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೊಬ್ಬರೇ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ಕುರಿತು ಬೆಳ್ತಂಗಡಿಯ ಜನತೆ ಹಲವಾರು ನಿರೀಕ್ಷೆಗಳನ್ನಿರಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ 17ಕ್ಕೂ ಅಧಿಕ ಗ್ರಾಮಗಳು ಭೀಕರ ಪ್ರವಾಹಕ್ಕೆ ತುತ್ತಾಗಿ ನೂರಾರು ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಅವರ ಜೀವನವನ್ನು ಸಹಜ ಸ್ಥಿತಿಯತ್ತ ತರುವ ಸವಾಲು ಸಚಿವರ ಮುಂದಿದೆ. ಆ. 11ರಂದು ಕೋಟ ಶ್ರೀನಿವಾಸ ಪೂಜಾರಿ ಬೆಳ್ತಂಗಡಿಗೆ ಭೇಟಿ ನೀಡಿ ಗರಿಷ್ಠ ಅನುದಾನ ದೊರಕಿಸಿ ಕೊಡುವ ಭರವಸೆಯನ್ನೂ ನೀಡಿದ್ದಾರೆ.
ತಾಲೂಕಿನಲ್ಲಿ ನೂರಾರು ಎಕರೆ ಡಿಸಿ ಮನ್ನಾ ಭೂಮಿ ಹಂಚಿಕೆಗೆ ಬಾಕಿಯಿದ್ದು, ಹೆಚ್ಚಿನ ಭಾಗ ಅತಿಕ್ರಮಣ ಆರೋಪಗಳಿವೆ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ವೇಳೆ ಜಿಲ್ಲೆಗೆ ಭೇಟಿ ನೀಡಿ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಹಿಂದಿನ ಉಸ್ತುವಾರಿ ಸಚಿವ ಯು.ಟಿ. ಖಾದರ್ ಬೆಳ್ತಂಗಡಿಗೆ ಭೇಟಿ ನೀಡಿದ್ದಾಗಲೂ ಈ ಕುರಿತು ಚರ್ಚೆ ಯಾಗಿತ್ತು. ಈ ಬಾರಿಯಾದರೂ ಭೂಮಿ ಹಂಚಿಕೆಯಾಗ ಬಹುದೇ ಎಂದು ಫಲಾನುಭವಿಗಳು ನಿರೀಕ್ಷೆಯಲ್ಲಿದ್ದಾರೆ.
Related Articles
ಎಳನೀರು, ಬಾಂಜಾರುಮಲೆ, ಪುಲ್ಲಾಜೆ, ಅನಾರು ಪ್ರದೇಶಗಳು ಸೌಕರ್ಯಗಳ ಕೊರತೆಯಿಂದ ಬಳಲು ತ್ತಿದ್ದು, ನೂತನ ಸಚಿವರು ಗಮನಹರಿ ಸುವರೇ ಎಂಬ ನಿರೀಕ್ಷೆ ಜನರದು.
Advertisement
ಕಸ್ತೂರಿ ರಂಗನ್ ವರದಿಕಸ್ತೂರಿರಂಗನ್ ವರದಿ ಜಾರಿಯ ಮಾತು ಹಿಂದಿನ ಸರಕಾರದ ಅವಧಿ ಯಲ್ಲಿ ಜೋರಾಗಿತ್ತು. ಈ ಕುರಿತೂ ತಾಲೂಕಿನ ಗ್ರಾಮೀಣ ಪ್ರದೇಶದ ಜನತೆ ಗೊಂದಲದಲ್ಲಿದ್ದಾರೆ. ಅರಣ್ಯ ಪ್ರದೇಶ ದಲ್ಲಿ ಮನೆ ಮಾಡಿ ಕೃಷಿ ಚಟುವಟಿಕೆ ಗಳನ್ನು ನಡೆಸುತ್ತಿರುವವರನ್ನು ಒಕ್ಕಲೆ ಬ್ಬಿಸುವ ಮಾತಿದೆ. ಅಂಥವರಿಗೆ ಸಚಿವರು ನ್ಯಾಯ ಒದಗಿಸುವರೇ ಎಂಬುದು ಪ್ರಶ್ನೆ. ಗ್ರಾಮ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಹುತೇಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗದೆ ಇರುವುದು ಇಲ್ಲಿರುವ ಸಮಸ್ಯೆ.