Advertisement

ಮೂಲ ಸೌಲಭ್ಯದೊಂದಿಗೆ ಶೈಕ್ಷಣಿಕ ಪ್ರಗತಿಗೆ ಆದ್ಯತೆ

05:17 PM Jan 28, 2021 | Team Udayavani |

ಯಾದಗಿರಿ: ವಡಗೇರಾ ಹೊಸ ತಾಲೂಕು ವ್ಯಾಪ್ತಿಗೆ 5 ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು. ಯಾದಗಿರಿ ಮತಕ್ಷೇತ್ರದ ಹಂಚಿನಾಳ ಗ್ರಾಮದಲ್ಲಿ 550 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Advertisement

ತಾಲೂಕಿನ ವಡಗೇರಾ, ಹೈಯಾಳ, ದೋರನಹಳ್ಳಿ, ಖಾನಪುರ ಗ್ರಾಮಗಳಲ್ಲಿ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೈಕ್ಷಣಿಕ ಪ್ರಗತಿಯ ಜತೆ
ಮತಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ, ನೀರು ಹಾಗೂ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು, ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ಹಾಗೂ ಕೋರ್ಟ್‌ಗೆ ಜಾಗ ಗುರುತಿಸಲಾಗಿದೆ ಎಂದರು.

ಈ ಭಾಗದಲ್ಲಿ ಕೊನೆಯ ಅಂಚಿನ ರೈತರಿಗೆ ನೀರು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಚೆನ್ನೂರು ಮತ್ತು ಠಾಣಗುಂದಿಯಲ್ಲಿ ಬ್ರಿಜ್‌ ಕಂ. ಬ್ಯಾರೇಜ್‌ ನಿರ್ಮಾಣಕ್ಕೆ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಕಳೆದ 10 ತಿಂಗಳಲ್ಲಿ ಕೋವಿಡ್‌ ಸಮಸ್ಯೆಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ತಾಪಂ ಅಧ್ಯಕ್ಷೆ ನಿಂಗಮ್ಮ ನಾಟೇಕಾರ್‌, ಸಿದ್ದಣ್ಣ ಕಾಡಂನೋರ್‌, ಈರಣ್ಣ ಸಾಹು, ಚೆನ್ನರೆಡ್ಡಿ ಮದರಕಲ್‌, ಮಲ್ಲಪ್ಪ ಹಾದಿಮನಿ, ನಿಂಗಪ್ಪ ಬಸವಂತಪುರ, ಪರಶುರಾಮ್‌ ಕುರುಕುಂದಿ, ಅಭಿಯಂತರ ಸಿದ್ದಲಿಂಗಪ್ಪ ಐರೆಡ್ಡಿ, ಮಹೇಶ್‌ ರೆಡ್ಡಿ ಮುದ್ನಾಳ, ಶರಣುಗೌಡ ಐಕೂರು, ವೆಂಕಟರೆಡ್ಡಿ ಕುರಿಹಾಳ, ಸುರೇಶ್‌, ಡಾ| ಮರೆಪ್ಪ ನಾಟೇಕಾರ್‌, ಸಿದ್ದಪ್ಪಗೌಡ ಕಾಳೆಬೆಳಗುಂದಿ, ವಿರೂಪಾಕ್ಷರೆಡ್ಡಿ, ರಾಜಶೇಖರ್‌, ಪರ್ವತರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next