Advertisement

2022ರ ಮಾರ್ಚ್ ತನಕ 2000 ರೂ.ನೋಟುಗಳ ಪ್ರಿಂಟಿಂಗ್ ಇಲ್ಲ! RBI ಹಾಗೂ ಕೇಂದ್ರ ಹೇಳಿದ್ದೇನು.?

10:54 AM Aug 28, 2021 | |

2000 ರೂಪಾಯಿ ನೋಟುಗಳು ಹೊಸದಾಗಿ ಪ್ರಿಂಟ್ ಆಗುತ್ತಿಲ್ಲ ಎಂಬ ಮಾತುಗಳು ಕಳೆದೊಂದು ವರ್ಷದಿಂದ ಕೇಳಿಬರುತ್ತಿದೆಯಾದರೂ ಆ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ.

Advertisement

2016 ನವೆಂಬರ್ ​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಸರ್ಕಾರ ತುರ್ತಾಗಿ ನೋಟು ಅಮಾನ್ಯೀಕರಣ ಅಥವಾ ಡಿಮಾನಿಟೈಸೇಷನ್ ಮಾಡುವ ತೀರ್ಮಾನ ಕೈಗೊಂಡಿತು. ಅದರಂತೆ, 500 ಮತ್ತು 1,000 ರೂಪಾಯಿ ನೋಟುಗಳನ್ನು ಚಲಾವಣೆಯನ್ನು ಅಮಾನ್ಯೀಕರಣ ಮಾಡಲಾಯಿತು. ಕಪ್ಪು ಹಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಂದು ಸರ್ಕಾರ ಹೇಳಿತ್ತು. ಆದರೇ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರದಿಂದ ದೇಶದ ಜನರು ಪರದಾಡುವಂತಾಗಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ : ಟೆಸ್ಟ್ ಪಂದ್ಯದಲ್ಲಿ ಹೈಡ್ರಾಮಾ: ಮತ್ತೆ ಭಾರತ‌ ತಂಡದ ಪರ ಆಡಲು ಮೈದಾನಕ್ಕೆ ನುಗ್ಗಿದ ಜಾರ್ವೋ!

ನೋಟು ಅಮಾನ್ಯೀಕರಣ ಮಾಡಿದ ನಾಲ್ಕು ದಿನಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ 500 ಮತ್ತು 2,000 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತು. ಆದರೆ, ಆರ್​ಬಿಐ ಕ್ರಮೇಣ 2,000 ರೂಪಾಯಿ ನೋಟುಗಳ ಚಲಾವಣೆಯನ್ನು ಕೂಡ ಕಡಿಮೆ ಮಾಡುವ ಬಗ್ಗೆಯೂ ಯೋಚನೆ ಮಾಡಿತ್ತು ಎನ್ನುವುದು ಇಲ್ಲಿ ಗಮನಾರ್ಹ.

ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಿಡುಗಡೆಯಾಗಿದೆ. ಅದರಂತೆ, ಆರ್ ​ಬಿಐ ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದೇ ಒಂದು 2,000 ರೂಪಾಯಿ ನೋಟನ್ನು ಮುದ್ರಣ ಮಾಡುವುದಿಲ್ಲ. ಈ ವರದಿಯಂತೆ, 2020- 21 ನೇ ಸಾಲಿನ ಹಣಕಾಸು ವರ್ಷದಲ್ಲಿ ಇರುವ ಪೇಪರ್ ಕರೆನ್ಸಿ ಒಟ್ಟು 2,23,301 ಲಕ್ಷ ನೋಟುಗಳು. ಈ ಹಿಂದಿನ ಹಣಕಾಸು ವರ್ಷ ಅಂದರೆ 2019- 20 ರಲ್ಲಿ ಈ ಸಂಖ್ಯೆ 2,23,875 ಲಕ್ಷ ನೋಟುಗಳು ಆಗಿತ್ತು.

Advertisement

ಶೇಕಡಾ 85.70 ರಷ್ಟು ಪ್ರಮಾಣದಲ್ಲಿ 500 ಮತ್ತು 2,000 ರೂಪಾಯಿ ನೋಟುಗಳ ಪ್ರಮಾಣವೇ ಇತ್ತು.ಇದರಲ್ಲಿ ಶೇಕಡಾ 31.10 ರಷ್ಟು 500 ರೂಪಾಯಿ ನೋಟುಗಳಾಗಿತ್ತು. ಮಾರ್ಚ್ 2021 ರಲ್ಲಿ ಲೋಕಸಭೆಯಲ್ಲಿ ಮತ್ತೊಂದು ಮಾಹಿತಿ ನೀಡಲಾಗಿತ್ತು. ಇನ್ನು  ಕಳೆದ ಎರಡು ವರ್ಷಗಳಲ್ಲಿ ಇದುವರೆಗೆ 2,000 ರೂಪಾಯಿಯ ಹೊಸ ನೋಟುಗಳು ಪ್ರಿಂಟ್ ಆಗಿಲ್ಲ.

2018 ರ  ಮಾರ್ಚ್ 30 ರಲ್ಲಿ ಒಟ್ಟು ಕರೆನ್ಸಿ ಚಲಾವಣೆಯಲ್ಲಿ ಒಟ್ಟು 3,362 ಮಿಲಿಯನ್ ನೋಟುಗಳು 2,000 ದ್ದು ಆಗಿದ್ದವು. ಅಂದರೆ ಅದು ಒಟ್ಟು ಕರೆನ್ಸಿ ಪೈಕಿ 3.27 ಶೇಕಡಾ ಆಗಿತ್ತು. 2021 ರ ಫೆಬ್ರವರಿ 26, ವಹಿವಾಟು ವಿವರದಂತೆ 2,000 ರೂಪಾಯಿ ನೋಟುಗಳ ಸಂಖ್ಯೆ 2,499 ಮಿಲಿಯನ್​ ಗೆ ಕುಸಿತ ಕಂಡಿತ್ತು ಎಂದು ಆಗಿನ ಕೇಂದ್ರ ವಿತ್ತ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕುರ್  ಹೇಳಿದ್ದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) 2019 ರಲ್ಲಿ ಬಿಡುಗಡೆ ಮಾಡಿರುವ ಪ್ರಕಾರ, 2016- 17 ರ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2016- ಮಾರ್ಚ್ 2017) 3,542.991 ಮಿಲಿಯನ್  2,000 ರೂಪಾಯಿ ನೋಟುಗಳನ್ನು ಮುದ್ರಣ ಮಾಡಲಾಗಿತ್ತು. 2017- 18 ರ ಆರ್ಥಿಕ ವರ್ಷದಲ್ಲಿ ಕೇವಲ 111.507 ಮಿಲಿಯನ್ 2,000 ರೂಪಾಯಿ ನೋಟುಗಳು ಮಾತ್ರ ಮುದ್ರಣಗೊಂಡಿವೆ. ಆರ್ಥಿಕ ವರ್ಷ 2018- 19 ಹಣಕಾಸು ವರ್ಷದಲ್ಲಿ ಕೇವಲ 46.690 ಮಿಲಿಯನ್ 2,000 ರೂಪಾಯಿ ನೋಟುಗಳು ಮುದ್ರಣಗೊಂಡಿವೆ. 2019ರ  ಏಪ್ರಿಲ್ ನಂತರ ಇದುವರೆಗೆ 2000 ರೂಪಾಯಿಯ ನೋಟು ಇದುವರೆಗೆ ಮುದ್ರಣಗೊಂಡಿಲ್ಲ.  ಮಾತ್ರವಲ್ಲದೇ, 2022 ರ ಮಾರ್ಚ್ ತನಕ 2000 ರೂಪಾಯಿ ನೋಟುಗಳನ್ನು ಯಾವುದೇ ಕಾರಣಕ್ಕೂ ಮುದ್ರಣ ಮಾಡಲಾಗುವುದಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಅಂತಾರಾಷ್ಟ್ರೀಯ  ಸುದ್ದಿ ಸಂಸ್ಥೆ ಮಿಂಟ್ ಮಾಡಿರುವ ವರದಿ ತಿಳಿಸುವ ಪ್ರಕಾರ, 2017 ಮಾರ್ಚ್​ನಲ್ಲಿ 500 ರೂಪಾಯಿ ನೋಟುಗಳ ಪ್ರಮಾಣ 5.9 ಶೇಕಡಾ ಆಗಿತ್ತು. 2019 ರ ಮಾರ್ಚ್ ನಲ್ಲಿ ಶೇಕಡಾ 19.80ಕ್ಕೆ ಹೆಚ್ಚಳವಾಗಿತ್ತು ಎಂದು ತಿಳಿಸಿದ್ದು ಮಾತ್ರವಲ್ಲದೇ, 2000 ರೂಪಾಯಿ ಬದಲಿಗೆ 200 ರೂಪಾಯಿ ಹಾಗೂ 500 ರೂಪಾಯಿ ನೋಟುಗಳ ಮುದ್ರಣ ಜಾಸ್ತಿಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ನಿಗೂಢ ಜನಾಂಗದ ಮಹಿಳೆಯ 7,200 ವರ್ಷಗಳ ಹಿಂದಿನ ಅಸ್ಥಿಪಂಜರದ “ಮಿಸ್ಸಿಂಗ್ ಲಿಂಕ್”

Advertisement

Udayavani is now on Telegram. Click here to join our channel and stay updated with the latest news.

Next