ಮುಂಬಯಿ: ಬೇರೆಲ್ಲ ಮಾಧ್ಯಮಗಳಿಗಿಂತ ಮುದ್ರಣಾ ಮಾಧ್ಯಮದ ಸುದ್ದಿಗಳು ಅತ್ಯಂತ ವಿಶ್ವಾಸಾರ್ಹ ಮೂಲ ಹೊಂದಿರುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ. ಒರ್ಮ್ಯಾಕ್ಸ್ ಮೀಡಿಯಾ ನಡೆಸಿದ್ದ ಸರ್ವೆಯಲ್ಲಿ ಮುದ್ರಣಾ ಮಾಧ್ಯಮ ಶೇ.62ರಷ್ಟು ಮತಗಳನ್ನು ಪಡೆದಿದೆ. ನಂತರದ ಸ್ಥಾನದಲ್ಲಿ ರೇಡಿಯೋ ಇದ್ದು, ಶೇ.57 ಮತ ಸಂಪಾದಿಸಿದೆ. ಸುದ್ದಿ ಟಿವಿಗಳು 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಶೇ.56 ಮತ ಪಡೆದಿವೆ.
ಒಮ್ಯಾìಕ್ಸ್ ಸಂಘಟಿಸಿದ್ದ “ಸುದ್ದಿ ವಿಶ್ವಾಸಾರ್ಹ ಸೂಚ್ಯಂಕ’ ಸಮೀಕ್ಷೆಯಲ್ಲಿ ನಗರಕೇಂದ್ರಿತ ಸುಮಾರು 2,400 ಸುದ್ದಿ ಗ್ರಾಹಕರು ಪಾಲ್ಗೊಂಡಿದ್ದರು. 17 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಇವರೆಲ್ಲ 15ಕ್ಕಿಂತ ಹೆಚ್ಚು ವರ್ಷಗಳಿಂದ ಸುದ್ದಿ ಗ್ರಾಹಕರಾಗಿದ್ದಾರೆ.
ಶೇ.61 ಮಂದಿ ಫೇಕ್ ನ್ಯೂಸ್ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ನಕಲಿ ಸುದ್ದಿಗಳ ಬಗ್ಗೆ ಜಾಗತಿಕವಾಗಿ ಚರ್ಚೆಗಳು ನಡೆಯುತ್ತಿವೆ. ಫೇಕ್‌ನ್ಯೂಸ್‌ಗಳು ಸೃಷ್ಟಿಸುವ ಪರಿಣಾಮಗಳು ದಿನೇದಿನೆ ಹೆಚ್ಚುತ್ತಿದೆ. ಡಿಜಿಟಲ್ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿಗಳನ್ನು ಸತ್ಯವೋ, ಸುಳ್ಳೋ ಎಂದು ಪರೀಕ್ಷಿಸಲು ಜನ ಪತ್ರಿಕೆಗಳ ಮೇಲೆ ಹೆಚ್ಚು ನಂಬಿಕೆ ಇಡುತ್ತಿದ್ದಾರೆ’ ಎಂದು ಒಮ್ಯಾìಕ್ಸ್ ಮೀಡಿಯಾ ಸಿಇಒ ಶೈಲೇಶ್ ಕಪೂರ್ ತಿಳಿಸಿದ್ದಾರೆ. ಸುದ್ದಿ ಗ್ರಾಹಕರ ಗ್ರಹಿಕೆ ಅರಿಯಲು 6 ತಿಂಗಳಿಗೊಮ್ಮೆ ಇಂಥ ಸರ್ವೆ ನಡೆಸಲು ಸಂಸ್ಥೆ ನಿರ್ಧರಿಸಿದೆ.
ಮಾಧ್ಯಮ ವಿಶ್ವಾಸಾರ್ಹತೆ
ಪತ್ರಿಕೆಗಳು ಶೇ. 62
ರೇಡಿಯೋ ಶೇ. 57
ಟಿವಿ ಶೇ. 56
ಮಾಧ್ಯಮ ವಿಶ್ವಾಸಾರ್ಹತೆ
ಟ್ವೀಟರ್ ಶೇ. 53
ಟೆಲಿಗ್ರಾಂ ಶೇ. 31
ಇನ್‌ಸ್ಟಾಗ್ರಾಂ ಶೇ. 29
ಫೇಸ್‌ಬುಕ್ ಶೇ. 30
ವಾಟ್ಸಾಪ್ ಶೇ. 28