ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿಯ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ದಶಲಕ್ಷಣ ನೊಂಪಿ ಪರ್ವ 2022ರ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಿದ್ದರು.
ಇಂತಹ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಖುಷಿ ಎನಿಸುತ್ತಿದೆ. ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿ.
ಅಹಿಂಸೆ ಸೇರಿದಂತೆ ಜೈನ ಧರ್ಮದ ಎಲ್ಲ ತತ್ವಗಳು ಇಡೀ ಸಮಾಜಕ್ಕೆ ಆದರ್ಶವಾಗಿವೆ ಎಂದು ಲಕ್ಷ್ಮೀ ಹೆಬ್ಟಾಳಕರ ಹೇಳಿದರು.
ಹಲಗಾ ಗ್ರಾಮದಲ್ಲಿ ಈ ದಶಲಕ್ಷಣ ನೊಂಪಿ ಕಾರ್ಯಕ್ರಮ ಹದಿನಾರು ದಿನಗಳ ಕಾಲ ನಡೆಯಲಿದ್ದು, ಹಲವಾರು ಮಹಿಳೆಯರು ಮಡಿವಂತರಾಗಿ ಭಾಗಿಯಾಗುವ ಮೂಲಕ ಆತ್ಮಶುದ್ಧಿಗಾಗಿ, ನಾಡಿನ ಏಳ್ಗೆಗಾಗಿ, ದೇಶದ ಐಕ್ಯತೆಗಾಗಿ, ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಸದಾಕಾಲವೂ ನೆಲೆಸಲಿ ಎಂದು ಪ್ರಾರ್ಥಿಸಿದರು.
ಮುಖಂಡರಾದ ಚಾರುಕೀರ್ತಿ ಸೈಬಣ್ಣವರ, ಮಹಾವೀರ ಪಾಟೀಲ, ಧನ್ಯಕುಮಾರ ದೇಸಾಯಿ, ಸುಕುಮಾರ ಹುಡೇದ, ಸಂತೋಷ ಪಾಟೀಲ, ಅಲ್ಲಪ್ಪ ಹುಡೇದ, ಶಾಂತು ಬೆಲ್ಲದ, ಬಾಬು ದೇಸಾಯಿ, ಮಹೇಂದ್ರ ಕ್ಯಾಸನ್ನವರ, ರಾಜೇಂದ್ರ ದೇಸಾಯಿ, ಅಣ್ಣಾಸಾಹೇಬ ದೇಸಾಯಿ, ಪ್ರಶಾಂತ ಮರಕಲ್, ಡಿ.ಎಚ್. ಪಾಟೀಲ, ಯಲ್ಲಪ್ಪ ಘಟ್ಟದ್, ಮಹಾವೀರ ಇತರರು ಇದ್ದರು.