Advertisement

ಪ್ರಾಂಶುಪಾಲರ ಕಂಪ್ಯೂಟರ್‌ ಕದ್ದವರ ಸೆರೆ

11:39 AM Mar 31, 2017 | |

ಬೆಂಗಳೂರು: ಕೇಂದ್ರೀಯ ವಿದ್ಯಾ­ಲಯದ ಪ್ರಾಂಶುಪಾಲರ ಚೇಂಬರ್‌ನಲ್ಲಿದ್ದ 2.40 ಲಕ್ಷರೂ ಮೌಲ್ಯದ ಕಂಪ್ಯೂಟರ್‌ ಹಾಗೂ ಬಿಡಿಭಾಗಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿ­ಗಳನ್ನು ಸದಾಶಿವನಗರ ಠಾಣೆ ಪೊಲೀ­ಸರು ಬಂಧಿಸಿದ್ದಾರೆ. ನೇಪಾಳ ಮೂಲದ ಪ್ರೇಮ್‌ ಮತ್ತು ಲಕ್ಷ್ಮಣ್‌ ಬಂಧಿತರು.

Advertisement

ಇವರು ಕೇಂದ್ರೀಯ ವಿದ್ಯಾಲಯದಲ್ಲೇ ಸೆಕ್ಯೂರಿಟಿ ಗಾರ್ಡಗಳಾಗಿ ಕೆಲಸ ಮಾಡುತ್ತಿದ್ದರು. ಮಾರ್ಚ್‌ 24ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಹೋಗುವಾಗ ಪ್ರಾಂಶುಪಾಲರು ತಮ್ಮ ಚೇಂಬರ್‌ಗೆ ಬೀಗ ಹಾಕಿ ತೆರಳಿದ್ದರು. ಆದರೆ ಮಧ್ಯರಾತ್ರಿ ಕೊಠಡಿ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು 2 ಲಕ್ಷರೂ ಮೌಲ್ಯದ ಕಂಪ್ಯೂಟರ್‌ ಹಾಗೂ ಬಿಡಿಭಾಗಗಳನ್ನು ಕದ್ದೊಯ್ದಿ­ದ್ದರು.

ಮಾರನೇ ದಿನ  ಈ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಅನ್ವಯ ತನಿಖೆ ನಡೆಸಿದ್ದ ಪೊಲೀಸರು ಮಾರ್ಚ್‌ 27ರಂದು ವಿವಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳಿಬ್ಬರು ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next