Advertisement

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ, ಪ್ರಿನ್ಸ್ ಫಿಲಿಪ್ ವಿಧಿವಶ, ದೇಶಾದ್ಯಂತ ಶೋಕಾಚರಣೆ

05:38 PM Apr 09, 2021 | Team Udayavani |

ಲಂಡನ್: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಪತಿ, ಪ್ರಿನ್ಸ್ ಫಿಲಿಪ್ (99ವರ್ಷ) ಶುಕ್ರವಾರ ವಿಧಿವಶರಾಗಿದ್ದಾರೆಂದು ವರದಿ ತಿಳಿಸಿದ್ದು, ಬಕಿಂಗ್ ಹ್ಯಾಮ್ ಅರಮನೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ದ ಡ್ಯೂಕ್ ಆಫ್ ಎಡಿನ್ ಬರ್ಗ್, ಪ್ರಿನ್ಸ್ ಫಿಲಿಪ್ ಅವರು ವಿಂಡ್ಸರ್ ಕ್ಯಾಸಲ್ ನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆಂದು ತಿಳಿಸಿದೆ.

Advertisement

“ ತಮ್ಮ ಪತಿ ಫಿಲಿಪ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬ್ರಿಟನ್ ರಾಣಿ ಎಲಿಜಬೆತ್, ಇದೊಂದು ತುಂಬಾ ದುಃಖಕರವಾದ ಸಂಗತಿಯಾಗಿದೆ” ಎಂದು ತಿಳಿಸಿದ್ದಾರೆ.

ಸೋಂಕು ಮತ್ತು ಹೃದಯದ ಸಮಸ್ಯೆಯಿಂದಾಗಿ 2021ರ ಫೆಬ್ರುವರಿ 16ರಂದು ಪ್ರಿನ್ಸ್ ಫಿಲಿಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಫಿಲಿಪ್ ಡಿಸ್ ಚಾರ್ಜ್ ಆಗಿದ್ದರು. ಫಿಲಿಪ್ ಅವರು 2017ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ಸಾರ್ವಜನಿಕ ಸೇವೆಯಿಂದ ನಿವೃತ್ತಿಯಾಗಿದ್ದರು ಎಂದು ವರದಿ ತಿಳಿಸಿದೆ.

Advertisement

ಜೂನ್ ನಲ್ಲಿ 100ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುವ ಒಂದು ತಿಂಗಳ ಮೊದಲು ಫಿಲಿಪ್ ವಿಧಿವಶರಾಗಿದ್ದಾರೆ. ನೂರು ವರ್ಷ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಫಿಲಿಪ್ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಕಳೆದ ನವೆಂಬರ್ ತಿಂಗಳಿನಲ್ಲಿ ಎಲಿಜಬೆತ್, ಫಿಲಿಪ್ ದಂಪತಿ 73ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next