Advertisement

ಕೈಕೊಟ್ಟ ಪ್ರಿನ್ಸ್‌ ಹ್ಯಾರಿ, ಕೋರ್ಟ್‌ ಮೆಟ್ಟಿಲೇರಿದ ವಕೀಲೆ!

09:35 PM Apr 14, 2021 | Team Udayavani |

ಚಂಡೀಗಢ: ಬ್ರಿಟನ್‌ ರಾಜಕುಮಾರ ಹ್ಯಾರಿ ನನಗೆ ಮದುವೆ ಆಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ ಎಂದು ಆರೋಪಿಸಿ, ವಕೀಲೆಯೊಬ್ಬಳು ಹರ್ಯಾಣ ಹೈಕೋರ್ಟ್‌ ಮೆಟ್ಟಿಲೇರಿದ ಪ್ರಹಸನ ನಡೆದಿದೆ.

Advertisement

ಆದರೆ, ಹೈಕೋರ್ಟ್‌ “ಇದೊಂದು ಹಗಲು ಕನಸು’ ಎಂದು ಹೇಳಿ, ಅರ್ಜಿ ವಜಾ ಮಾಡಿದೆ. ಪಲ್ವಿಂದರ್‌ ಕೌರ್‌ ಎಂಬ ವಕೀಲೆ ತನಗೆ ನ್ಯಾಯ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಪ್ರೇಮ ಸಂವಹನ ವೇಳೆ ಪ್ರಿನ್ಸ್‌ ಹ್ಯಾರಿ ರವಾನಿಸಿದ ಇಮೇಲ್‌ ಗಳ ಸಾಕ್ಷಿಯನ್ನೂ ವಕೀಲೆ ಮುಂದಿಟ್ಟಿದ್ದರು. “ಇದು ಹಗಲು ಕನಸಲ್ಲದೇ ಮತ್ತೇನೂ ಅಲ್ಲ. ಹ್ಯಾರಿಯ ಇಮೇಲ್‌ಗಳು ಎಲ್ಲಿಂದ ಬಂದವು ಎಂಬುದು ತಿಳಿಯುವುದೂ ಮುಖ್ಯ’ ಎಂದು ಜಡ್ಜ್ ಅಭಿಪ್ರಾಯ ಪಟ್ಟಿದ್ದಾರೆ.

ನಂತರ ಗೊತ್ತಾಗಿದ್ದು, ನಿಜವಾಗಿ ಆ ಇಮೇಲ್‌ ಗಳು ಬಂದಿದ್ದು ಪಂಜಾಬ್‌ನ ಹಳ್ಳಿಯ ಯುವಕ ತೆರೆದಿದ್ದ ನಕಲಿ ಐಡಿಯಿಂದ ಎಂದು!

ಇದನ್ನೂ ಓದಿ :ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ

Advertisement

Udayavani is now on Telegram. Click here to join our channel and stay updated with the latest news.

Next