Advertisement

ರಕ್ಷಣಾ ವ್ಯವಸ್ಥೆಗೆ ಬಲ ತುಂಬಿದ ಮೋದಿ

04:25 PM Sep 18, 2020 | Suhan S |

ಮುಳಬಾಗಿಲು: ನರೇಂದ್ರಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾದ ನಂತರ ಸಂವಿಧಾನದ 370 ಮತ್ತು 35 ಎ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದರು, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ ಎಂದು ಅಬಕಾರಿ ಸಚಿವ ಎಚ್‌. ನಾಗೇಶ್‌ ಹೇಳಿದರು.

Advertisement

ತಾಲೂಕು ಬಿಜೆಪಿಯಿಂದ ನಗರದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಿ ನರೇಂದ್ರಮೋದಿಯವರ 70ನೇವರ್ಷದ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಅಂಬೇಡ್ಕರ್‌ ನಗರದಲ್ಲಿ ಹುಟ್ಟುಹಬ್ಬ: ನಗರಸಭೆ ಸದಸ್ಯ ಎಂ.ಪ್ರಸಾದ್‌ ಸಮ್ಮುಖದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಚಿವ ಎಚ್‌.ನಾಗೇಶ್‌ ಪಾಲ್ಗೊಂಡು ಕೇಕ್‌ ಕತ್ತರಿಸಿ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಆಚರಿಸಿದರು. ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್‌ ಕುರುಡುಮಲೆ ಗಣಪತಿ ದೇಗುಲದಲ್ಲಿ ವಿಶೇಷ ಅಭಿಷೇಕ ಏರ್ಪಡಿಸಿದ್ದು ನಂತರ ಅಂಬೇಡ್ಕರ್‌ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ರಾಜ್ಯ ಪ್ರವಾಸ ಕೈಗೊಂಡರು. ನರಸಿಂಹತೀರ್ಥ ಮತ್ತು ಪ್ರಸನ್ನ ಸೋಮೇಶ್ವರಸ್ವಾಮಿ ದೇಗುಲದಲ್ಲಿ ಸ್ವಚ್ಛ ಭಾರತ್‌ ಕಾರ್ಯಕ್ರಮ, ಆವಣಿ ಪ್ರಸನ್ನ ರಾಮಲಿಂಗೇಶ್ವರಸ್ವಾಮಿ ದೇಗುಲ ಸುತ್ತಮುತ್ತ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್‌ ನೇತೃತ್ವದಲ್ಲಿ ಗಿಡ ನಾಟಿ ಮಾಡಿದರು. ನಂಗಲಿ ಗ್ರಾಮದಲ್ಲಿ ಬಿಜೆಪಿ ಹಿರಿಯ ಮುಖಂಡ ರಮೇಶ್‌ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಲೂಕು ಅಧ್ಯಕ್ಷ ಬಿ.ಕೆ.ಅಶೋಕ್‌, ನಗರ ಘಟಕ ಅಧ್ಯಕ್ಷ ಕೆ.ಜೆ.ಮೋಹನ್‌, ಶಂಕರ್‌ ಕೇಸರಿ, ಶಕ್ತಿ ಪ್ರಸಾದ್‌, ಮೈಕ್‌ ಶಂಂಕರ್‌, ನಗರ ಯುವ ಮೋರ್ಚಾ ಅಧ್ಯಕ್ಷ ಗರಡಿ ಕಿರಣ್‌ಕುಮಾರ್‌, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಪ್ರಕಾಶ್‌ರೆಡ್ಡಿ, ಜಿಲ್ಲಾ ಖಜಾಂಚಿ ಕಾಪರ್ತಿ ಅಮರ್‌, ಮುರಳಿ ಸೇರಿದಂತೆ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಸದೃಢ ರಾಷ್ಟ್ರ ನಿರ್ಮಾಣ : ಬಂಗಾರಪೇಟೆ: ವಿಶ್ವದಲ್ಲಿಯೇ ಭಾರತ ದೇಶವನ್ನು ಸದೃಢ, ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಮಾದರಿಯನ್ನಾಗಿ ಮಾಡುತ್ತಿರುವಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 100 ವರ್ಷಗಳ ಆರೋಗ್ಯಭಾಗ್ಯ ಸಿಗಲಿ ಎಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೃತ್ತದಲ್ಲಿ ಕೇಕ್‌ ಕತ್ತರಿಸಿ ಬಡವರಿಗೆ ಬೆಡ್‌ಶೀಟ್‌ ವಿತರಿಸಿ ಅವರು ಮಾತನಾಡಿದರು. ಜಿಪಂ ಸದಸ್ಯ ಬಿ.ವಿ.ಮಹೇಶ್‌, ಎಂ.ಪಿ.ಶ್ರೀನಿವಾಸಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಹೊಸರಾಯಪ್ಪ, ಚಂಗಲರಾಯರೆಡ್ಡಿ, ತಾಲೂಕು ಬಿಜೆಪಿಅಧ್ಯಕ್ಷ ರಾಮಾಪುರ ನಾಗೇಶ್‌, ಸಬ್‌ ಇನ್ಸ್‌ಪೆಕ್ಟರ್‌ ಜಗದೀಶರೆಡ್ಡಿ, ತಾಪಂ ಸದಸ್ಯೆ ಕಲಾವತಿ ರಮೇಶ್‌, ಬೂದಿಕೋಟೆ ರಮೇಶ್‌, ಕೆಸರನಹಳ್ಳಿ ಮಂಜುನಾಥ್‌, ಬಿ.ಪಿ.ಮಹೇಶ್‌, ಕಾರಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್‌, ಮುಬಾರಕ್‌, ಆರ್‌.ಬಾಬು, ಅಶ್ವತ್ಥ್, ಶಿವಣ್ಣ, ಚಂದ್ರಪ್ಪ, ಮಾಟಪ್ಪ, ಅಜಯ್‌, ಉದಯ್‌, ಮೆಹಬೂಬ್‌, ಶೋಭಾ, ಅಂಬಿಕಾ, ಸುಶೀಲಮ್ಮ, ಪುಷ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next