Advertisement

ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ; ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

12:37 PM Jun 20, 2022 | Team Udayavani |

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿನ ಯಲಹಂಕ ಏರ್ ಬೇಸ್ ಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ , ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಗಣ್ಯರು ಸ್ವಾಗತಿಸಿದರು.

Advertisement

ಪ್ರಧಾನಿ ಅವರು ವಿಮಾನದಲ್ಲಿ ಬಂದಿಳಿದ ವೇಳೆ ಮಾಜಿ ಮುಖ್ಯಮಂತ್ರಿ ಬಿ. ಎಸ್ . ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರಗ ಜ್ಞಾನೇಂದ್ರ, ಎಸ್ . ಟಿ.ಸೋಮಶೇಖರ್ ಸೇರಿ ಇತರರು ಉಪಸ್ಥಿತರಿದ್ದರು.

ಇಂದು ಪ್ರಧಾನಿ ಕಾರ್ಯಕ್ರಮ
12.25ಕ್ಕೆ ಯಲಹಂಕದಿಂದ ಐಐಎಸ್‌ಸಿಗೆ ಪಯಣ
12.30ಕ್ಕೆ ಐಐಎಸ್‌ಸಿಗೆ ಆಗಮನ
12.55ಕ್ಕೆ ಐಐಎಸ್‌ಸಿಯಿಂದ ನಿರ್ಗಮನ
ಮಧ್ಯಾಹ್ನ 1.05ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್‌ಗೆ ಆಗಮನ
1.30ಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ಆಗಮನ
1.45- 2.25ರ ವರೆಗೆ ವೇದಿಕೆ ಕಾರ್ಯಕ್ರಮ
ಅಪರಾಹ್ನ 2.30ಕ್ಕೆ ಕೊಮ್ಮಘಟ್ಟದ ಕಡೆಗೆ ಪಯಣ
2.45- 4ರ ವರೆಗೆ ಸಾರ್ವಜನಿಕ ಸಭೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
4.30ಕ್ಕೆ ಕೊಮ್ಮಘಟ್ಟದಿಂದ ಮೈಸೂರು ಕಡೆಗೆ ಪಯಣ
5.20ಕ್ಕೆ ಮೈಸೂರು ಹೆಲಿಪ್ಯಾಡ್‌ಗೆ ಆಗಮನ

ನಾಳೆಯ ಕಾರ್ಯಕ್ರಮ
ಬೆ. 6.30 ಯೋಗ ದಿನ ಕಾರ್ಯಕ್ರಮದಲ್ಲಿ ಭಾಗಿ
ಬೆ. 8.10 ವಸ್ತು ಪ್ರದರ್ಶನ ಸ್ಥಳಕ್ಕೆ ಭೇಟಿ
ಬೆ. 9.20 ಅರಮನೆ ಆವರಣದಿಂದ ನಿರ್ಗಮನ
ಬೆ. 9.45 ಮೈಸೂರಿನಿಂದ ಹೊಸದಿಲ್ಲಿಗೆ ಪ್ರಯಾಣ

Koo App

ಇಂದು ಫ‌ಲಾನುಭವಿಗಳ ಜತೆ ಪ್ರಧಾನಿ ಸಂವಾದ
ಮೈಸೂರು: ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಫ‌ಲಾನುಭವಿಗಳಲ್ಲಿ ಆಯ್ದ 20 ಜನರೊಂದಿಗೆ ಪ್ರಧಾನಿ ಮೋದಿ ಜೂ. 20ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ 20 ಜನರನ್ನು ಆಯ್ಕೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next