ಉಡುಪಿ : ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ ಅವಧಿಯ ಬಹುಮುಖ್ಯ ಯೋಜನೆಗಳಲ್ಲಿ ಒಂದಾದ “ಕೋಟಿ ಗೀತಾ ಲೇಖನ ಯಜ್ಞ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಪತ್ರವೊಂದನ್ನು ಶ್ರೀಮಠಕ್ಕೆ ಕಳುಹಿಸಿದ್ದಾರೆ.
ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞ ಪರಿಕಲ್ಪನೆಯು ಶ್ರೀಮದ್ಭಗವದ್ಗೀತೆಯು ಜನಸಾಮಾನ್ಯರ ನಡುವೆ ಇನ್ನಷ್ಟು ಪ್ರಚಲಿತವಾಗಲು ಸಹಕಾರಿಯಾಲಿದೆ.
ಭಗವದ್ಗೀತೆಯು ಬುದ್ಧಿವಂತಿಕೆಯ ಶಾಶ್ವತ ಚಿಲುಮೆ, ಜ್ಞಾನ ಭಂಡಾರ ಮತ್ತು ಮಾರ್ಗದರ್ಶಿ ಶಕ್ತಿಯ ಜತೆಗೆ ಜನರಿಗೆ ಹಾಗೂ ವಿಶ್ವಕ್ಕೆ ಹೇಗೆ ಸೇವೆ ಸಲ್ಲಿಸಬೇಕು
ಎಂಬುದನ್ನು ಕಲಿಸುತ್ತದೆ.
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಜನ ಸಾಮಾನ್ಯರಲ್ಲಿ ಸೇವೆಯ ಸ್ಫೂರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಶ್ರೀಪಾದರು ಗೀತೆಯ ನೈಜ ರಾಯಭಾರಿ, ಈ ಮೂಲಕ ಮನುಕುಲಕ್ಕೆ ಒಳಿತಾಗಲಿದೆ ಎಂದು ತಿಳಿಸಿದ್ದಾರೆ.