Advertisement

ಮನ್‌ ಕೀ ಬಾತ್‌: ಹಿಮಾ ದಾಸ್‌ಗೆ ಪ್ರಧಾನಿ ಶ್ಲಾಘನೆ

03:22 PM Jul 30, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು “ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ವಿಶ್ವ ಕಿರಿಯರ ಆ್ಯತ್ಲೆಟಿಕ್ಸ್‌ ಕೂಟದಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ಗೆದ್ದು ಕೊಟ್ಟ ಹಿಮಾ ದಾಸ್‌ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಶ್ಲಾಸಿದ್ದಾರೆ. 

Advertisement

“ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ದೇಶದ ರೈತನ ಮಗಳು ಹಿಮಾ ದಾಸ್‌ ಫಿನ್ಲಂಡ್‌ನ‌ಲ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ’ ಎಂದು ಹಿಮಾ ಸಾಧನೆಯನ್ನು ಕೊಂಡಾಡಿದರು. ಭಾರತದ ಮತ್ತೋರ್ವ ವನಿತೆ ಏಕ್ತಾ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರು. ಅವರನ್ನೂ ಮೋದಿ ಅಭಿನಂದಿಸಿದರು. ಇದೇ ಕೂಟದಲ್ಲಿ ಅದ್ಭುತ ಸಾಧನೆ ತೋರಿದ ಯೋಗೀಶ್‌ ಮತ್ತು ಸುಂದರ್‌ ಸಿಂಗ್‌ ಗುರ್ಜರ್‌ ಸಾಧನೆ ಕೂಡ ಪ್ರಧಾನಿ ಪ್ರಶಂಸೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next