ಬಸವಕಲ್ಯಾಣ: ಹುಲಸೂರ ತಾಲೂಕಿನ ಕೊಟ್ಟಮಾಳ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಕಮಿಟಿ ಸಭೆ ನಡೆಸಿ, ನಂತರ ವಿವಿಧ ಗ್ರಾಮಗಳಲ್ಲಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಕಾರ್ಯಕರ್ತರು ಮತ್ತು ಮುಖಂಡರು ಪ್ರಚಾರ ನಡೆಸಿದರು.
ಹುಲಸೂರ ನಗರ ಸೇರಿದಂತೆ ಮಿರಖಲ್, ಗಡಿಗೌಂಡಗಾಂವ್, ತೊಗಲೂರ, ಹಾಲಹಳ್ಳಿ, ಸೊಲದಾಬಕಾ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅನೀಲ ಬುಸಾರೆ ಮಾತನಾಡಿ, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಭ್ರಷ್ಟಾಚಾರ ಮಾಡಿ ಹಲವು ನಾಯಕರು ಜೈಲು ಸೇರುವಂತಾಯಿತು. ಐವತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಅದರೆ ಪ್ರಧಾನಿ ನರೇಂದ್ರ ಮೊದಿಯವರು ಕೇವಲ 5 ವರ್ಷಗಳ ಅವಧಿಯಲ್ಲಿ ವಿಶ್ವವೇ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ಜಿಲ್ಲೆಯ ಮರಾಠಾ ಸಮಾಜಕ್ಕೆ ಅನ್ಯಾಯ ಮಾಡಿದ್ದು, ಇವರ ದಬ್ಟಾಳಿಕೆಯಿಂದ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಕಾಶ ಪಾಟೀಲ ಅವರನ್ನು ಕೆಳಗಿಳಿಸಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಮರಾಠ ಸಮಾಜ ಜಾಗೃತವಾಗಿ ಈ ಚುನಾವಣೆಯಲ್ಲಿ ಸಮಾಜದ ಮುಖಂಡರು ಈಶ್ವರ ಖಂಡ್ರೆಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ, ದೇಶಕ್ಕೆ ಮತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ನರೇಂದ್ರ ಮೋದಿ ಅವರ ಬಗ್ಗೆ ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸಬೇಕು ಎಂದರು.
ಸ್ಲಂಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಮುತ್ತೆ, ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ ಧಬಾಲೆ, ಹುಲಸೂರ ಶಕ್ತಿ ಕೇಂದ್ರದ ಅಧ್ಯಕ್ಷ ಸಂಗಮೇಶ ಬೋಪಳೆ, ಮುಖಂಡರಾದ ಬಸವರಾಜ ಡೊಣಗಾಂವಕರ, ಅರವಿಂದ ಹಿರಪಲ್ಲೆ, ಶಿವಾಜಿ
ಪಾಟೀಲ, ಕಲ್ಯಾಣ ಸೂರ್ಯವಂಶಿ, ಅರ್ಜುನ ಲಂಬೆ, ಪ್ರದೀಪ ಗುತ್ತಿ, ಆನಂದರಾವ್ ಸೂರ್ಯವಂಶಿ ಮತ್ತಿತರರು ಇದ್ದರು.