Advertisement

ಪ್ರಧಾನಿ ಮೋದಿ ಆಡಳಿತಕ್ಕೆ ಶೇ. 65ರ ತೃಪ್ತಿ ಸೂಚ್ಯಂಕ

02:06 AM Jun 03, 2020 | Sriram |

ಹೊಸದಿಲ್ಲಿ: ಪ್ರಧಾನಿ ಮೋದಿ ಆಡಳಿತ ವೈಖರಿ ಬಗ್ಗೆ ದೇಶದ ಶೇ. 65.9ರಷ್ಟು ಜನರು ತೃಪ್ತಿಯ ಭಾವವನ್ನು ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ಐಎಎನ್‌ಎಸ್‌, ಸಿ-ವೋಟರ್‌ಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

ಶೇ. 28.1ರಷ್ಟು ಜನರು ಮೋದಿಯವರ ಆಡಳಿತವನ್ನು “ಸಮಾಧಾನಕರ’ ಎಂದಿದ್ದಾರೆ. ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ಕರ್ನಾಟಕದಲ್ಲಿ ಮೋದಿ ಜನಪ್ರಿಯತೆ ಉತ್ತುಂಗದಲ್ಲಿದೆ. ಮಹಾರಾಷ್ಟ್ರದಲ್ಲಿ ಶೇ. 71.48 ಮಂದಿ, ಕರ್ನಾಟಕದಲ್ಲಿ ಶೇ. 82.56ರಷ್ಟು ಜನರು ಮೋದಿಯನ್ನು ಕೊಂಡಾಡಿದ್ದಾರೆ.

ಕೋವಿಡ್-19 ಬಿಕ್ಕಟ್ಟನ್ನು ನಿರ್ವಹಿಸಿದ ಮೋದಿ ನಿರ್ಧಾರಗಳು ತೃಪ್ತಿ ತಂದಿವೆ ಎಂದು ಶೇ. 58.36ರಷ್ಟು ಮಂದಿ ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಗರಿಷ್ಠ ಜನಪ್ರಿಯತೆ
ಮೋದಿ ಆಡಳಿತಕ್ಕೆ ಅತೀ ಹೆಚ್ಚು ಜನರು ಸೈ ಎಂದಿರುವುದು ಒಡಿಶಾದಲ್ಲಿ. ಅಲ್ಲಿ ಶೇ. 95.6ರಷ್ಟು ಜನರು “ತೃಪ್ತಿ’ ವ್ಯಕ್ತಪಡಿಸಿದ್ದಾರೆ.ಇದು ಬಿಟ್ಟರೆ ಮೋದಿ ಆಡಳಿತಕ್ಕೆ ಅತೀ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿರುವುದು ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶಗಳಲ್ಲಿ. ಈ ರಾಜ್ಯಗಳಲ್ಲಿ ಕ್ರಮವಾಗಿ ಶೇ. 93.95, ಶೇ. 92.73, ಶೇ. 83.6 ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಗುಜರಾತ್‌ನಲ್ಲಿ ಶೇ. 76.42 ಜನರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ವರ್ಷಾಂತ್ಯ ಚುನಾವಣೆ ನಡೆಯುವ ಬಿಹಾರ, ಉತ್ತರಾಖಂಡ, ಗೋವಾ ಮತ್ತು ಹರಿಯಾಣಗಳಲ್ಲಿ ಕ್ರಮವಾಗಿ ಶೇ. 58.48, ಶೇ. 53.53, ಶೇ. 52.54 ಮತ್ತು ಶೇ. 51.25ರಷ್ಟು ಮಂದಿ ಮೋದಿ ಆಡಳಿತ ಮೆಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next