Advertisement
“ಇಂದು ಒಲಿಂಪಿಕ್ ದಿನ. ಇನ್ನು ಕೆಲವೇ ದಿನಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಆರಂಭವಾಗಲಿದೆ. ನಮ್ಮ ಶ್ರೇಷ್ಠ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ಇವರೆಲ್ಲರಿಗೂ ಶುಭ ಹಾರೈಕೆಗಳು’ ಎಂದು ಮೋದಿ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದರು. ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ತಂದಿತ್ತ ಮಾಜಿ ಕ್ರೀಡಾಪಟುಗಳಿಗೂ ಮೋದಿ ಗೌರವ ಸಲ್ಲಿಸಿದರು.
Related Articles
Advertisement
“ತಜ್ಞರ ಸಲಹೆಯನ್ನು ಅನುಸರಿಸಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಲಿಂಪಿಕ್ಸ್ ಕ್ರೀಡೆಗಳು ನಡೆಯುವ ಟೋಕಿಯೊ, ಒಸಾಕ ಮತ್ತಿತರ ಸ್ಥಳಗಳಲ್ಲಿ ಕ್ರೀಡಾಕೂಟ ಮುಗಿಯುವ ವರೆಗೆ ಮದ್ಯ ಸೇವನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಕೂಟದ ಸಂಘಟನಾ ಸಮಿತಿ ನಿರ್ಧರಿಸಿದೆ’ ಎಂದು ಟೋಕಿಯೊ ಒಲಿಂಪಿಕ್ಸ್ ಅಧ್ಯಕ್ಷ ಸೀಕೊ ಹಶಿಮೊಟೊ ತಿಳಿಸಿದ್ದಾರೆ.