Advertisement

19ರಂದು ಅಶ್ವಮೇಧ ರೈಲಿಗೆ ಪ್ರಧಾನಿ ಮೋದಿ ಚಾಲನೆ

06:40 AM Feb 11, 2018 | Team Udayavani |

ಬೆಳಗಾವಿ: ಕರ್ನಾಟಕದಿಂದ ಆರು ರಾಜ್ಯಗಳನ್ನು ಸುತ್ತಲಿರುವ ಅಶ್ವಮೇಧ ರೈಲಿಗೆ ಮೈಸೂರಿನಲ್ಲಿ ಫೆ. 19ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿಲಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಹೇಳಿದರು.

Advertisement

ಬೆಳಗಾವಿಯಲ್ಲಿ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಹಾಗೂ ಉದ್ಯಮಿಗಳ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನಿಂದ ಸಂಚರಿಸುವ ಈ ರೈಲು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಸತಾರಾ, ಪುಣೆ, ಮುಂಬೈ, ಉದಯಪುರ, ದೆಹಲಿಗೆ ತೆರಳಲಿದೆ.

ಇದೇ ಸಂದರ್ಭ ದಲ್ಲಿ ಐದು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹಮ್‌ಸಫರ್‌ ರೈಲಿನ ಘೋಷಣೆಯನ್ನೂ ಮಾಡಲಿದ್ದಾರೆ. ಈ ರೈಲು ಕರ್ನಾಟಕದ ಜತೆ ಪಶ್ಚಿಮ ಭಾರತದ ನಾಲ್ಕು ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌ ಮಧ್ಯಪ್ರದೇಶ ಹಾಗೂ ರಾಜಸ್ತಾನದ
ಜೊತೆ ದೆಹಲಿಗೆ ಸಂಪರ್ಕ ಕಲ್ಪಿಸಲಿದೆ ಎಂದರು.

ಮೈಸೂರಿಗೆ ಪ್ರಧಾನಿ
ಮೈಸೂರು:
ವಿಧಾನಸಭಾ ಚುನಾವಣೆಗೆ ಸಿದಟಛಿತೆ ಮಾಡಿಕೊಳ್ಳಲು ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು
ಆರಂಭವಾಗಿದ್ದು, ಕೆಲವು ದಿನಗಳ ಹಿಂದಷ್ಟೇ ರಾಜ್ಯಕ್ಕಾಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಫೆ.19ರಂದು ಮೈಸೂರಿಗೆ ಆಗಮಿಸುವ ಮೂಲಕ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.

ಕಳೆದ ಫೆ.4ರಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ‌ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ
ಪ್ರಧಾನಿ ಮೋದಿ, ಇದೀಗ 15 ದಿನಗಳ ನಂತರ ಮತ್ತೂಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next