Advertisement

ಉಗ್ರರ ಸಂಹಾರಕ್ಕೆ ಪಣ

12:30 AM Feb 25, 2019 | Team Udayavani |

ಹೊಸದಿಲ್ಲಿ: “ಭಯೋತ್ಪಾದಕತೆಯನ್ನು ಬೇರು ಸಹಿತ ಕಿತ್ತುಹಾಕಲು ನಮ್ಮ ಯೋಧರು ಪಣತೊಟ್ಟಿದ್ದಾರೆ. ದೇಶದ ಜನರೆಲ್ಲರೂ ಜಾತಿವಾದ, ಕೋಮುವಾದ, ಪ್ರಾದೇಶಿಕತೆ ಮತ್ತಿತರ ಭಿನ್ನಾಭಿಪ್ರಾಯಗಳ ಗೋಡೆ ಕೆಡವಿ, ದೇಶ ಎದು ರಿಸುತ್ತಿರುವ ಭಯೋತ್ಪಾದನೆಯ ನಿರ್ಮೂಲನೆಗೆ ಶಪಥ ಮಾಡಬೇಕು. ಆಗ ಮಾತ್ರ ಉಗ್ರವಾದ‌ದ ವಿರುದ್ಧದ ನಮ್ಮ ಹೆಜ್ಜೆ ಹೆಚ್ಚು ದೃಢ ಹಾಗೂ ನಿರ್ಣಾಯಕವಾಗಲು ಸಾಧ್ಯ.’-ಹೀಗೆಂದು ದೇಶವಾಸಿಗಳಿಗೆ ಕರೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. 

Advertisement

ತಮ್ಮ 53ನೇ ಆವೃತ್ತಿಯ “ಮನ್‌ ಕಿ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಪುಲ್ವಾಮಾ ದಾಳಿಯ ಕುರಿತು ಪ್ರಸ್ತಾವಿಸಲು ಮರೆಯದ ಪ್ರಧಾನಿ ಮೋದಿ, 40 ಸಿಆರ್‌ಪಿಎಫ್ ಯೋಧರ ಬಲಿದಾನವು, ಭಯೋತ್ಪಾದನೆಯ ನಿರ್ಮೂಲನೆ ಆಗುವವರೆಗೂ ವಿರಮಿಸದಂತೆ ನಮಗೆ ಶಕ್ತಿ ನೀಡಿದೆ ಎಂದು ಹೇಳಿದ್ದಾರೆ.

ಯುದ್ಧ ಸ್ಮಾರಕ ಲೋಕಾರ್ಪಣೆ
ಸ್ವಾತಂತ್ರಾéನಂತರ ದೇಶಕ್ಕಾಗಿ ಪ್ರಾಣತೆತ್ತಿರುವ ಯೋಧರಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸ ಲಾಗಿದ್ದು, ಸೋಮವಾರ ಅದನ್ನು ಉದ್ಘಾಟಿಸುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ. 

“ಭಾರತದಲ್ಲಿ ಒಂದೇ ಒಂದು ಯುದ್ಧ ಸ್ಮಾರಕ ಇಲ್ಲ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ನಮ್ಮ ಯೋಧರ ಶೌರ್ಯ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳಲು ಇಂಥದ್ದೊಂದು ಸ್ಮಾರಕದ ಅಗತ್ಯವಿತ್ತು. ಹಾಗಾಗಿ ಸ್ಮಾರಕ ನಿರ್ಮಿ ಸಿದೆವು’ ಎಂದಿದ್ದಾರೆ. ಪವಿತ್ರ ಯಾತ್ರಾಸ್ಥಳಕ್ಕೆ ಹೋಗುವಂತೆ ಜನ ಈ ಸ್ಮಾರಕಕ್ಕೆ ಭೇಟಿ ನೀಡಬೇಕು ಎಂದರು.

ಇದೇ ಸಂದರ್ಭ ಹಕ್ಕು ಚಲಾವಣೆಯು ಪ್ರತಿ ಯೊಬ್ಬರ ಪವಿತ್ರ ಕರ್ತವ್ಯ ಎಂದ ಪ್ರಧಾನಿ, ಚುನಾವಣೆಗಳನ್ನು ಸಮರ್ಥವಾಗಿ ನಡೆಸಿರುವಂಥ ಚುನಾವಣ ಆಯೋಗವನ್ನೂ ಶ್ಲಾಘಿಸಿದ್ದಾರೆ.

Advertisement

ಮೇ ಕೊನೆಯಲ್ಲಿ  ಬಾತ್‌
ಚುನಾವಣೆ ಸಮೀಪಿಸುತ್ತಿರುವ ಕಾರಣ, ಮುಂದಿನ 2 ತಿಂಗಳು ನಾವು ಪ್ರಚಾರದಲ್ಲಿ ಬ್ಯುಸಿಯಾಗಿರುತ್ತೇವೆ. ನಾನು ಕೂಡ ಅಭ್ಯರ್ಥಿಯಾಗಿದ್ದೇನೆ. ಆರೋಗ್ಯಕರ ಪ್ರಜಾ ಪ್ರಭುತ್ವ ವನ್ನು ಗೌರವಿಸುತ್ತಾ, ಮುಂದಿನ ಮನ್‌ ಕಿ ಬಾತ್‌ ಅನ್ನು ಮೇ ತಿಂಗಳ ಕೊನೆಯ ರವಿವಾರ ನಡೆಸುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ಅಲ್ಲದೆ, “ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳ ನನ್ನ ಮನದ ಮಾತುಗಳನ್ನು ಅಂದೇ ಹೇಳುತ್ತೇನೆ. ಇನ್ನೂ ಹಲವು ವರ್ಷಗಳ ಕಾಲ ನನ್ನ ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲೂ ಗೆಲುವು ನಮ್ಮದೇ ಎಂಬ ಆಶಾ ಭಾವನೆ ಯನ್ನೂ ವ್ಯಕ್ತಪಡಿಸಿದ್ದಾರೆ.

ಮೊದಲ ಕಂತಿನ 2,000 ರೂ.
ಗೋರಖ್‌ಪುರ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಉದ್ಘಾಟಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ ರೈತರಿಗೆ ವಾರ್ಷಿಕ 6 ಸಾವಿರ ರೂ. ಒದಗಿಸಲಾಗುವುದು. ಮೊದಲ ಕಂತು ತಲಾ 2,000 ರೂ.ಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ 1.01 ಕೋಟಿ ರೈತರಿಗೆ ರವಿವಾರ ವರ್ಗಾಯಿಸಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಹಣ ಬ್ಯಾಂಕ್‌ ಖಾತೆಯಲ್ಲಿ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೋದಿ, ಸಾಲ ಮನ್ನಾ ಮಾಡುವುದು ಸುಲಭ. ಆದರೆ ಇದು ರೈತರಿಗೆ ಮಾಡುವ ಮೋಸ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next