Advertisement
ಏ. 6ರಿಂದ 9ರವರೆಗೆ ಹೋಂ ಸ್ಟೇ, ರೆಸಾರ್ಟ್, ಲಾಡ್‌ಜ್ಗಳಲ್ಲಿ ಪ್ರವೇಶ, ತಂಗುವಿಕೆ ನಿಷೇಧ:ಏ. 9ರಂದು ಪ್ರಧಾನಮಂತ್ರಿಯವರು ಬಂಡೀಪುರಕ್ಕೆ ಭೇಟಿ ನೀಡಲಿರುವುದರಿಂದ ರಸ್ತೆ ನಿರ್ವಹಣೆ ಹಾಗೂ ಇತರೆ ಪೂರ್ವ ಸಿದ್ದತೆ ಮಾಡಿಕೊಳ್ಳುವ ಸಲುವಾಗಿ ಮತ್ತು ರಕ್ಷಣಾ ಹಿತದೃಷ್ಠಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರುವ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್‌ಜ್ಗಳಲ್ಲಿ ಪ್ರವೇಶ ಹಾಗೂ ತಂಗುವಿಕೆಯನ್ನು ಏ. 6ರಿಂದ 9ರವರೆಗೆ ತಾತ್ಕಾಲಿಕವಾಗಿ ನಿಬರ್ಂಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ.