Advertisement

ನಮೋ ಜನ್ಮದಿನ: ದಿನಪೂರ್ತಿ ಪ್ರಧಾನಿ ಮೋದಿ ಏನೆಲ್ಲಾ ಮಾಡಿದರು? -Tweet Report

09:51 AM Sep 18, 2019 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಂದು 69ನೇ ಜನ್ಮದಿನವನ್ನು ಆಚರಿಸಿಕೊಂಡರು. ಈ ದಿನ ಪ್ರಧಾನಿ ಮೋದಿ ಅವರು ದಿನಪೂರ್ತಿ ತನ್ನ ತವರು ಜಿಲ್ಲೆ ಗುಜರಾತಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

Advertisement

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಮಧ್ಯಾಹ್ನದ ಭೋಜನವನ್ನೂ ಸವಿದರು. ಬಳಿಕ ತಾಯಿಯ ಆಶೀರ್ವಾದವನ್ನು ನಮೋ ಪಡೆದುಕೊಂಡರು.

ಪ್ರಧಾನಿ ಮೋದಿ ಅವರು ಇಂದು ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ತನ್ನ ಜನ್ಮದಿನವನ್ನು ಸಾರ್ಥಕ ರೀತಿಯಲ್ಲಿ ಆಚರಿಸಿಕೊಂಡರು ಎಂಬ ಒಂದು ಟ್ವೀಟ್ ರಿಪೋರ್ಟ್ ಇಲ್ಲಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ 5.00 ಗಂಟೆಗೆ ಪ್ರಧಾನಿ ಮೋದಿ ಅವರು ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ 8.38ರ ಸುಮಾರಿಗೆ ನರೇಂದ್ರ ಮೋದಿ ಅವರು ಗಾಂಧಿನಗರದಿಂದ ನರ್ಮದಾ ಜಿಲ್ಲೆಯಲ್ಲಿರುವ ಕೇವಾಡಿಯಕ್ಕೆ ಆಗಮಿಸಿದರು.

ಆ ಬಳಿಕ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರಥಮ ಟ್ವೀಟ್ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಉಕ್ಕಿನ ಪ್ರತಿಮೆಯ ಸುತ್ತುನೋಟವನ್ನು ತೋರಿಸುವ ವಿಡಿಯೋ ಆಗಿತ್ತು.

Advertisement


ಬಳಿಕ ಪ್ರದಾನಿ ಮೋದಿ ಅವರು ಕೆವಾಡಿಯಾದ ಖಲ್ವಾನಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಇಕೋ-ಟೂರಿಸಂ ಪ್ರದೇಶಕ್ಕೆ ಭೇಟಿ ನೀಡಿ ಆ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದರು.


ಇದೇ ಸಂದರ್ಭದಲ್ಲಿ ‘ಐಕ್ಯತಾ ಪ್ರತಿಮೆ’ ಸಹಿತ ಪ್ರವಾಸೋದ್ಯಮದ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಕೆವಾಡಿಯಾಕ್ಕೆ ಪ್ರವಾಸಿಗರು ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರು PMO India ಟ್ವಿಟ್ಟರ್ ಖಾತೆಯ ಮೂಲಕ ಆಹ್ವಾನ ನೀಡಿದರು.

ಬಳಿಕ ಪ್ರಧಾನಿ ಮೋದಿ ಕೆವಾಡಿಯಾದಲ್ಲಿರುವ ಪಾಪಾಸು ಕಳ್ಳಿ ಉದ್ಯಾನವನಕ್ಕೆ (ಕ್ಯಾಕ್ಟಸ್ ಗಾರ್ಡನ್) ಭೇಟಿ ನೀಡಿದರು. ಈ ಉದ್ಯಾನವನ ಸರ್ದಾರ್ ಸರೋವರ್ ಆಣೆಕಟ್ಟಿನ ಎಡಭಾಗದಲ್ಲಿ ನಿರ್ಮಾಣಗೊಂಡಿದೆ.


ಕೆವಾಡಿಯಾ ಪರಿಸರ ಸ್ನೇಹಿ ಪ್ರವಾಸೋದ್ಯಮ ಕೇಂದ್ರದಲ್ಲಿ ಸ್ಥಳೀಯ ವಾತಾವರಣ ಸುಧಾರಣೆಗೆ ಮತ್ತು ಪ್ರವಾಸೋದ್ಯಮ ಸಾಧ್ಯತೆಗಳನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.


ಆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆವಾಡಿಯಾದಲ್ಲಿರುವ ಸುಂದರ ಚಿಟ್ಟೆಗಳ ಉದ್ಯಾನವನಕ್ಕೆ ಭೇಟಿ ನೀಡಿದರು.


ಆ ಬಳಿಕ ಪ್ರಧಾನಿ ಮೋದಿ ಅವರು ಕೆವಾಡಿಯಾದಲ್ಲಿರುವ ಏಕತಾ ನರ್ಸರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಸಮ್ಮುಖದಲ್ಲಿ ಗುಜರಾತಿ ಜಾನಪದ ಕಲೆಗಳ ಪ್ರದರ್ಶನವೂ ನಡೆಯಿತು.


ಆ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸರ್ದಾರ್ ಸರೋವರ್ ಆಣೆಕಟ್ಟು ಭರ್ತಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. ಈ ಸಂದರ್ಭದಲ್ಲಿ ನರ್ಮಾದ ನದಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ಮತ್ತು ಪ್ರಧಾನಿಯವರು ಆಣೆಕಟ್ಟಿನ ನಿಯಂತ್ರಣ ಕೊಠಡಿಗೂ ಸಹ ಭೇಟಿ ನೀಡಿ ಅಲ್ಲಿನ ಕಾರ್ಯವಿಧಾನವನ್ನು ಪರಿಶೀಲಿಸಿದರು.


ಬಳಿಕ ಪ್ರಧಾನಿ ಮೋದಿ ಅವರು ‘ಐಕ್ಯತಾ ಪ್ರತಿಮೆ’ಯ ಸಮೀಪವೇ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮತ್ತು ಈ ಸಮಾವೇಶವನ್ನು ಜಲಶಕ್ತಿ ಮತ್ತು ಜನಶಕ್ತಿಯ ಸಂಗಮ ಎಂದು ಅವರು ಬಣ್ಣಿಸಿದ್ದು ವಿಶೇಷವಾಗಿತ್ತು.


ಅಲ್ಲಿಂದ ಬಳಿಕ ಪ್ರಧಾನಿ ಮೋದಿ ಅವರು ನೇರವಾಗಿ ನರ್ಮದಾ ಜಿಲ್ಲೆಯಲ್ಲಿರುವ ಗರುಡೇಶ್ವರ ದತ್ತ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದರು.


ಮಧ್ಯಾಹ್ನದ ಸಮಯದಲ್ಲಿ ಗಾಂಧಿನಗರಕ್ಕೆ ವಾಪಸಾದ ಪ್ರಧಾನಿ ಮೋದಿ ಅವರು ನೇರವಾಗಿ ತನ್ನ ತಾಯಿಯಲ್ಲಿಗೆ ತೆರಳಿ ಅವರ ಆಶೀರ್ವಾದವನ್ನು ಪಡೆದುಕೊಂಡರು. ಮಾತ್ರವಲ್ಲದೇ ಮಧ್ಯಾಹ್ನದ ಭೋಜನವನ್ನು ತಾಯಿಯ ಜೊತೆಗೆ ಸವಿದದ್ದು ವಿಶೇಷವಾಗಿತ್ತು.



ತನ್ನ ಜನ್ಮದಿನದ ಸಂದರ್ಭದಲ್ಲಿ ತನಗೆ ಶುಭಾಶಯಗಳನ್ನು ಕೋರಿದ ಎಲ್ಲರಿಗೂ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದರು.

Today, people from all walks of life have conveyed their good wishes. Thousands have shared photos of precious memories. I am grateful to each and everyone of you for your greetings. I derive immense strength from this unwavering affection and support.

— Narendra Modi (@narendramodi) September 17, 2019

Advertisement

Udayavani is now on Telegram. Click here to join our channel and stay updated with the latest news.

Next