Advertisement

ಕೊರೋನಾ ಭೀತಿ: ಹೋಳಿ ಮಿಲನದಲ್ಲಿ ಪಾಲ್ಗೊಳ್ಳದಿರಲು ಮೋದಿ ನಿರ್ಧಾರ

11:06 PM Mar 20, 2020 | Hari Prasad |

ನವದೆಹಲಿ: ವಿಶ್ವಾದ್ಯಂತ ಕೋವಿಡ್ 19 ನೋವೆಲ್ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಹಾಗೂ ಭಾರತದಲ್ಲೂ ಕೆಲವು ಕಡೆಗಳಲ್ಲಿ ಈ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸಾರ್ವಜನಿಕವಾಗಿ ಗುಂಪಾಗಿ ಸೇರುವುದನ್ನು ತಪ್ಪಿಸಿಕೊಳ್ಳಲು ತಾನು ಈ ಬಾರಿ ಯಾವುದೇ ಹೋಳಿ ಮಿಲನ್ ಕಾರ್ಯಕಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Advertisement


ಕೊರೋನಾ  ವೈರಸ್ ವೇಗವಾಗಿ ಹರಡುವುದನ್ನು ತಡೆಗಟ್ಟಲು ಜನರು ಆದಷ್ಟು ಗುಂಪು ಸೇರುವುದನ್ನು ತಪ್ಪಿಸುವುದು ಉತ್ತಮ ಎನ್ನುವುದು ತಜ್ಞರ ಸಲಹೆಯಾಗಿರುವುದರಿಂದ ಈ ವರ್ಷ ನಾನು ಯಾವುದೇ ಹೋಳಿ ಮಿಲನ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದೇನೆ ಎಂದು ಮೋದಿ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅದೇ ರೀತಿ ಆದಷ್ಟು ಗುಂಪು ಸೇರುವುದನ್ನು ತಪ್ಪಿಸಿಕೊಳ್ಳುವಂತೆ ಅವರು ದೇಶದ ಜನರಿಗೂ ಕರೆ ನೀಡಿದ್ದಾರೆ.

ಈ ನಡುವೆ ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವಂತೆ ಈ ವಿಚಾರದಲ್ಲಿ ಜನರು ಗಾಬರಿಗೊಳಗಾಗಬಾರದು ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next