Advertisement

ಬಾಪೂ ನೆನಪಿಗೆ ಹೊರಬಂತು 150 ರೂಪಾಯಿಗಳ ಹೊಸ ನಾಣ್ಯ

09:15 AM Oct 03, 2019 | Hari Prasad |

ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವದ ನೆನಪಿಗೆ ಭಾರತ ಸರಕಾರವು 150 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ.

Advertisement

ಅಹಮದಾಬಾದ್ ನಲ್ಲಿರುವ ಸಾಬರ್ ಮತಿ ಆಶ್ರಮದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಈ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅಹಿಂಸೆ ಮತ್ತು ಅಸಹಕಾರದ ರೂಪವನ್ನು ನೀಡಿ ಬ್ರಿಟಿಷರ ವಿರುದ್ಧ ದೇಶವಾಸಿಗಳನ್ನು ಸಂಘಟಿತರನ್ನಾಗಿಸಿದ ಮೋಹನದಾಸ ಕರಮಚಂದ ಗಾಂಧಿ ಅವರನ್ನು ಬಾಪೂ, ಮಹಾತ್ಮಾ ಎಂದೇ ದೇಶವಾಸಿಗಳು ನೆನಪಿಸಿಕೊಳ್ಳುತ್ತಾರೆ.

ಗಾಂಧೀಜಿಯ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ದೇಶವು ಈ ಮಹಾನ್ ನಾಯಕನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದೆ. ಭಾರತ ಸರಕಾರವೂ ಸಹ ಗಾಂಧೀಜಿ ಅವರ ಹೆಸರಿನಲ್ಲಿ ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಘೋಷಣೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next