Advertisement

Lepakshi: ಲೇಪಾಕ್ಷಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪೂಜೆ

12:32 AM Jan 17, 2024 | Team Udayavani |

ಲೇಪಾಕ್ಷಿ: ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆಯ ವಿಧಿ ವಿಧಾನಗಳು ಆರಂಭವಾಗಿರುವಂತೆಯೇ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ಶ್ರೀ ವೀರಭದ್ರ ದೇಗುಲಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದರು.

Advertisement

ಲೇಪಾಕ್ಷಿಯ ಮಹತ್ವವೇನು?
ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಹೊತ್ತೂಯ್ಯುತ್ತಿದ್ದಾಗ ಜಟಾಯು ರಾವಣನೊಂದಿಗೆ ಹೋರಾಡಿ, ರಕ್ಷಿಸಲು ಯತ್ನಿಸಿತ್ತು. ರಾವಣನ ಮೋಸದಿಂದ ಆ ದಿವ್ಯಪಕ್ಷಿ ರೆಕ್ಕೆ ಕಡಿದುಕೊಂಡು ಬಿದ್ದ ಸ್ಥಳ ಆಂಧ್ರಪ್ರದೇಶದ ಲೇಪಾಕ್ಷಿ. ಶ್ರೀರಾಮ ಅಲ್ಲಿಗೆ ಬಂದಾಗ ಸೀತೆಯನ್ನು ರಾವಣ ಕದ್ದೊಯ್ದಿದ್ದಾನೆ ಎಂಬ ಮಾಹಿತಿಯನ್ನು ಜಟಾಯು ರಾಮನಿಗೆ ನೀಡಿತ್ತು.

11 ದಿನಗಳ ವ್ರತದ ಭಾಗ?
ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು ಅವರು ಕೈಗೊಂಡಿರುವ ವ್ರತದ ಭಾಗ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ನಾಸಿಕ್‌ನ ಕಾಲರಾಮ ದೇಗುಲಕ್ಕೆ ಜ. 12ರಂದು ನೀಡಿದ ಭೇಟಿ ಕೂಡ ಇದರ ಅಂಗವೇ ಎಂದು ಹೇಳಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next