Advertisement

ಅಮ್ಮನ ‘ಕೈ ರುಚಿ’ ಸವಿದು ಆಶೀರ್ವಾದ ಪಡೆದುಕೊಂಡ ನಮೋ

09:55 AM Sep 18, 2019 | Team Udayavani |

ಗಾಂಧಿನಗರ: ತನ್ನ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ತಾಯಿಯನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡರು.

Advertisement

ಮಂಗಳವಾರ ಮಧ್ಯಾಹ್ನದ ಸಂದರ್ಭದಲ್ಲಿ ಗಾಂಧಿನಗರದ ರೈಸಿನ್ ಗ್ರಾಮದಲ್ಲಿ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಅವರ ಜೊತೆ ವಾಸಿಸುತ್ತಿರುವ 98 ವರ್ಷ ಪ್ರಾಯದ ಹೀರಾ ಬೆನ್ ಅವರಲ್ಲಿಗೆ ತೆರಳಿ ಅವರ ಆಶೀರ್ವಾದವನ್ನು ಪಡೆದುಕೊಂಡರು. ಮಾತ್ರವಲ್ಲದೇ ಮಧ್ಯಾಹ್ನದ ಊಟವನ್ನೂ ಸಹ ನರೇಂದ್ರ ಮೋದಿ ಅವರು ತಮ್ಮ ತಾಯಿಯ ಜೊತೆಯಲ್ಲೇ ಮಾಡಿದ್ದು ವಿಶೇಷವಾಗಿತ್ತು.

ತಾಯಿಯೊಂದಿಗೆ ಗುಜರಾತಿ ಥಾಲಿಯನ್ನು ಸವಿಯುತ್ತಿರುವ ಫೊಟೋವನ್ನು ಪ್ರಧಾನಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮ್ಮನೊಂದಿಗೆ ಕುಳಿತು ಮಾತನಾಡುತ್ತಿರುವ ಮತ್ತು ಅಮ್ಮನ ಆಶೀರ್ವಾದವನ್ನು ಪಡೆದುಕೊಳ್ಳುತ್ತಿರುವ ಫೊಟೋಗಳನ್ನೂ ಸಹ ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಷ್ಟ್ರರಾಜಕಾರಣ ತಮ್ಮ ನಿಬಿಡ ಕಾರ್ಯಕ್ರಮಗಳ ನಡುವೆಯೂ ಪ್ರಧಾನಿ ಮೋದಿ ಅವರು ವಿಶೇಷ ಸಂದರ್ಭಗಳಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಳ್ಳವು ಸಂಪ್ರದಾಯವನ್ನು ಇರಿಸಿಕೊಂಡಿದ್ದಾರೆ.

ಪ್ರಚಂಡ ಬಹುಮತ ಪಡೆದು ಎರಡನೇ ಬಾರಿ ಪ್ರಧಾನಮಂತ್ರಿ ಆಗಿ ಪುನರ್ ಆಯ್ಕೆಯಾದ ನರೇಂದ್ರ ಮೋದಿ ಅವರು ಆ ಸಂದರ್ಭದಲ್ಲಿ ತಾಯಿಯನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದರು.


Advertisement
Advertisement

Udayavani is now on Telegram. Click here to join our channel and stay updated with the latest news.

Next