Advertisement

ಇನ್‌ ಸ್ಟಾಗ್ರಾಂನಲ್ಲೂ ಮೋದಿಯೇ ಕಿಂಗ್‌ ; ನಮೋ ಇನ್ ಸ್ಟ್ರಾಗ್ರಾಂ ಫಾಲೋವರ್ಸ್ 3 ಕೋಟಿ

10:33 AM Oct 14, 2019 | Team Udayavani |

ಹೊಸದಿಲ್ಲಿ: ಫೇಸ್‌ ಬುಕ್‌, ಟ್ವಿಟರ್‌ ನಲ್ಲಿ ಕೋಟ್ಯಂತರ ಮಂದಿ ಪ್ರಧಾನಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವುದು ಗೊತ್ತೇ ಇದೆ. ಈಗ ಫೋಟೋ ಶೇರಿಂಗ್‌ ತಾಣ ಇನ್‌ ಸ್ಟಾಗ್ರಾಂನಲ್ಲೂ ಪ್ರಧಾನಿ ಮೋದಿಯವರೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಇನ್ ಸ್ಟ್ರಾಗ್ರಾಂ ನಲ್ಲಿ ಮೂರು ಕೋಟಿ ಫಾಲೋವರ್ಸ್ ಗಳಿದ್ದಾರೆ.

Advertisement

ಈ ಮೂಲಕ ಅವರು ಇನ್‌ ಸ್ಟಾಗ್ರಾಂನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಟ್ವಿಟರ್‌ನಲ್ಲಿ ಮೋದಿ ಹಿಂಬಾಲಕರ ಸಂಖ್ಯೆ 5 ಕೋಟಿ ದಾಟಿದ ವಾರದೊಳಗೆ ಈ ವಿಚಾರ ಈಗ ಬಯಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ 1.49 ಕೋಟಿ ಮಂದಿ ಹಿಂಬಾಲಕರಿದ್ದರೆ, ಬರಾಕ್‌ ಒಬಾಮಾ ಅವರಿಗೆ 2.48 ಕೋಟಿ ಮಂದಿ ಹಿಂಬಾಲಕರಿದ್ದರು.

ಅತಿ ಹೆಚ್ಚು ಹಿಂಬಾಲಕರನ್ನು ಮೋದಿ ಅವರು ಹೊಂದಿರುವುದು ಅವರ ಜನಪ್ರತಿಯತೆಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ವಿಚಾರವನ್ನು ಟ್ವೀಟ್‌ ಮಾಡಿ ಹೇಳಿದ್ದಾರೆ.

ಇನ್ನು ಕಳೆದ ವರ್ಷ ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಮೂವರಲ್ಲಿ ಒಬ್ಬರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರಹೊಮ್ಮಿದ್ದರು. 50 ದೇಶಗಳಲ್ಲಿ ಈ ಕುರಿತು ಸಮೀಕ್ಷೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next