Advertisement

Women’s Reservation Bill ಮೂಲಕ ‘ಶಕ್ತಿ’ಯನ್ನು ಪೂಜಿಸುವ ಭಾವನೆ: ಪ್ರಧಾನಿ ಮೋದಿ

03:49 PM Oct 01, 2023 | Team Udayavani |

ಮಹಬೂಬ್‌ನಗರ(ತೆಲಂಗಾಣ): ‘ಹಬ್ಬಗಳ ಕಾಲ ಆರಂಭವಾಗಿದೆ. ನವರಾತ್ರಿ ಆರಂಭವಾಗಲಿದೆ, ನಾವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮೂಲಕ ನಾವು ಶಕ್ತಿ’ಯನ್ನು ಪೂಜಿಸುವ ಭಾವನೆಯನ್ನು ಹುಟ್ಟುಹಾಕಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ತೆಲಂಗಾಣದಲ್ಲಿ 13,500 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಪ್ರಧಾನಿ, 13,500 ಕೋಟಿ ರೂ.ಗಳ ಯೋಜನೆಗಳಿಗಾಗಿ ನಾನು ತೆಲಂಗಾಣವನ್ನು ಅಭಿನಂದಿಸುತ್ತೇನೆ.ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತರುವಂತಹ ಅನೇಕ ರಸ್ತೆ ಸಂಪರ್ಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

ನಾಗ್ಪುರ-ವಿಜಯವಾಡ ಕಾರಿಡಾರ್ ಮೂಲಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಅನುಕೂಲವಾಗಲಿದೆ.ಇದರಿಂದಾಗಿ ಈ ಮೂರು ರಾಜ್ಯಗಳಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ.ಈ ಕಾರಿಡಾರ್‌ನಲ್ಲಿ ಆರ್ಥಿಕ ಕೇಂದ್ರಗಳನ್ನು ಗುರುತಿಸಲಾಗಿದೆ.ಒಂದು ವಿಶೇಷ ಆರ್ಥಿಕ ವಲಯ, ಐದು ಮೆಗಾ ಫುಡ್ ಪಾರ್ಕ್‌ಗಳು , ನಾಲ್ಕು ಮೀನುಗಾರಿಕೆ ಸಮುದ್ರ ಆಹಾರ ಕ್ಲಸ್ಟರ್‌ಗಳು, ಮೂರು ಫಾರ್ಮಾ ಮತ್ತು ವೈದ್ಯಕೀಯ ಕ್ಲಸ್ಟರ್‌ಗಳು ಮತ್ತು ಒಂದು ಜವಳಿ ಕ್ಲಸ್ಟರ್” ಸೇರಿದೆ ಎಂದರು.

ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ
“ಭಾರತವು ಅರಿಶಿನದ ಪ್ರಮುಖ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ. ತೆಲಂಗಾಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಿಶಿನವನ್ನು ಉತ್ಪಾದಿಸುತ್ತಾರೆ. ಕೋವಿಡ್ ನಂತರ, ಅರಿಶಿನದ ಬಗ್ಗೆ ಜಾಗೃತಿ ಹೆಚ್ಚಿದೆ ಮತ್ತು ಜಾಗತಿಕ ಬೇಡಿಕೆಯೂ ಹೆಚ್ಚಾಗಿದೆ. ಇಂದು ವೃತ್ತಿಪರವಾಗಿ ಹೆಚ್ಚು ಗಮನ ಹರಿಸುವುದು ಮತ್ತು ಉಪಕ್ರಮವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಅರಿಶಿನದ ಮೌಲ್ಯ ಸರಪಳಿಯಲ್ಲಿ, ಉತ್ಪಾದನೆಯಿಂದ ರಫ್ತಿನವರೆಗೆ ರೈತರ ಅಗತ್ಯತೆ ಮತ್ತು ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರವು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಸ್ಥಾಪಿಸಲು ನಿರ್ಧರಿಸಿದೆ” ಎಂದರು.

ಹೈದರಾಬಾದ್ (ಕಾಚಿಗೂಡ) – ರಾಯಚೂರು – ಹೈದರಾಬಾದ್ ರೈಲು ಸೇವೆಯನ್ನು ಕೃಷ್ಣ ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ಲ್ಯಾಗ್ ಆಫ್ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next