ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಚಟುವಟಿಕೆಗಳು ಆರಂಭವಾಗಿದ್ದು, ಆ. 3ರಿಂದ 5ರವರೆಗೆ ಭೂಮಿಪೂಜೆಯ ಪ್ರಕ್ರಿಯೆಗಳು ನಡೆಯಲಿವೆ.
ಶನಿವಾರ ನಡೆದ ಸಭೆಯಲ್ಲಿ ಈ ಸಂಬಂಧ ತೀರ್ಮಾನಿಸಲಾಗಿದ್ದು, ಆ.5ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಿ ಭೂಮಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಆ.3ರಂದೇ ಪೂಜಾ ವಿಧಿವಿಧಾನಗಳನ್ನು ಆರಂಭಿಸಿ, ಆ.5ಕ್ಕೆ ಭೂಮಿ ಪೂಜೆ ಮುಗಿಸಲಾಗುತ್ತದೆ.
ಆ. 5ರ ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ನಡೆಯಲಿದ್ದು, ಇದರಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಾಂತ್ ನೃತ್ಯದಾಸ್ ಅವರ ಉತ್ತರಾಧಿಕಾರಿ ಮಹಾಂತ್ ಕಮಲ್ ನಯಾನ್‌ದಾಸ್ ಹೇಳಿದ್ದಾರೆ.
ಆದರೆ ಪ್ರಧಾನಿ ಕಾರ್ಯಾಲಯದಿಂದ ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿಲ್ಲ. ಅಯೋಧ್ಯೆಯಲ್ಲಿ ಪ್ರಧಾನಿ 2 ತಾಸುಗಳ ಕಾಲ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ.