Advertisement

LSP: ಕಲಬುರಗಿಯಲ್ಲಿ ಬಿಜೆಪಿ ಸಂಕಲ್ಪ ಸಮಾವೇಶ… ಪ್ರಧಾನಿ ಆಗಮನದ ನಿರೀಕ್ಷೆಯಲ್ಲಿ

01:49 PM Mar 16, 2024 | Team Udayavani |

ಕಲಬುರಗಿ: ನಗರದ ಎನ್ ವಿ ಮೈದಾನದಲ್ಲಿ ಬಿಜೆಪಿ‌ ಸಂಕಲ್ಪ ಸಮಾವೇಶಕ್ಕಾಗಿ ಎಲ್ಲ‌ ಸಿದ್ಧತೆಗಳು ಮುಗಿದಿವೆ. ಜನರು ನಿಧಾನಕ್ಕೆ ತಮ್ಮ ಆಸನಗಳ್ತ ಬರುತ್ತಿದ್ದಾರೆ. ೫೦ ಸಾವಿರ ಆಸನಗಳನ್ನು ಹಾಕಲಾಗಿದ್ದು, ಅರ್ಧಕ್ಕೂ ಹೆಚ್ಚು ಜನ ಸೇರಿದ್ದು, ಜನರು ಉಟದ ಕೌಂಟರ್ ಬಳಿಯಿದ್ದು, ಇನ್ನೂ‌ ಕೆಲವರು ವಾಹನಗಳಲ್ಲಿದ್ದಾರೆ.

Advertisement

ಬಿಸಿಲಿನ ಝಳ ಹೆಚ್ಚಾಗುತ್ತಿರುವುದರಿಂದ ಜನರು ಹರಸಾಹಸ ಪಟ್ಟು ಪೊಲೀಸ್ ತಪಾಸಣೆಗೆ ಒಳಪಟ್ಟು ಆಗಮಿಸುತ್ತಿದ್ದಾರೆ.

ಗೋ ಬ್ಯಾಕ್ ಮೋದಿ ಘೋಷಣೆ, ಸಿಪಿಎಂ ಕಾರ್ಯಕರ್ತರ ವಶಕ್ಕೆ
ಕಲಬುರಗಿ: ಲೋಕಸಭೆ ಚುನಾವಣೆಗೆ ಕಲಬುರಗಿಯಿಂದ ಪ್ರಚಾರ ಆರಂಭಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ‘ಗೋ ಬ್ಯಾಕ್ ಬ್ಯಾಕ್’ ಘೋಷಣೆಗಳು ಕೂಗುವ ಮೂಲಕ ಸಿಪಿಎಂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ವಿರೋಧಿಸಿದ ಘಟನೆ ಜಗತ್ ವೃತ್ತದಲ್ಲಿ ನಡೆದಿದೆ. ಈ ವೇಳೆ ಪ್ರಧಾನಿ ವಿರುದ್ದ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಜಗತ್ ವೃತದಲ್ಲಿ ಜಮಾಯಿಸಿದ ಸಿಪಿಎಂ ಪಕ್ಷದ ಮುಖಂಡರು MGNREGA ಬಾಕಿ ವೇತನ ಬಿಡುಗಡೆ, ಬರಗಾಲದ ಬರ ಪರಿಹಾರ ಹಣ ಬಿಡುಗಡೆ, ರೈತರ ಸಾಲ ಮನ್ನಾ, NMMS ರದ್ದತ್ತಿಗೆ, ತೊಗರಿಯ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ MSP ಬೆಂಬಲ ಬೆಲೆ ನಿಗದಿ ಮಾಡಿ ಕನಿಷ್ಠ 12.000 ರೂ. ಘೋಷಣೆ, ಬೂಜ ರಸಗೊಬ್ಬರ ಔಷಧಿ ಬೆಲೆ ಏರಿಕೆ ತಡೆಗೆ ಕ್ರಮ, ಕೆಲಸ ಮಾಡಿದ ಬಾಕಿ ವೇತನ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, , ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗುರುನಂದೇಶ ಕೋಣಿನ್, ಲವಿತ್ರ ವಸ್ತ್ರದ್, ಪ್ರಕಾಶ್ ಜಾನೆ, ಸಿದ್ಧರಾಮ ಹರವಾಳ, ಸುಜಾತಾ ಮತ್ತಿತರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಇದರಿಂದಾಗಿ‌ಕೆಲಕಾಲ ವೃತ್ತದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

Advertisement

ಇದನ್ನೂ ಓದಿ: ಸ್ವಾಭಿಮಾನವಿದ್ದರೆ ಸಚಿವ ಸ್ಥಾನಕ್ಕೆ ಮಹಾದೇವಪ್ಪ ರಾಜೀನಾಮೆ ನೀಡಲಿ: ನಾರಾಯಣಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next